Max Movie: ಬೆಳ್ಳಂಬೆಳಿಗ್ಗೆ ‘ಮ್ಯಾಕ್ಸ್’ ಬಗ್ಗೆ ಅಪ್​ಡೇಟ್ ಕೊಟ್ಟ ಸುದೀಪ್​; ಎಲ್ಲಿಯವರೆಗೆ ಬಂತು ಶೂಟ್​?

|

Updated on: Jan 16, 2024 | 7:20 AM

‘ಮ್ಯಾಕ್ಸ್’ ಚಿತ್ರದ ಮೊದಲ ಗ್ಲಿಂಪ್ಸ್ ರಿಲೀಸ್ ಆದ ಬಳಿಕ ಸಿನಿಮಾದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಚಿತ್ರ ತಂಡ ಕೂಡ ಏನನ್ನೂ ಘೋಷಣೆ ಮಾಡಿಲ್ಲ. ಈಗ ಸುದೀಪ್ ಅವರು ಇಂದು ‘ಮ್ಯಾಕ್ಸ್’ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ.

Max Movie: ಬೆಳ್ಳಂಬೆಳಿಗ್ಗೆ ‘ಮ್ಯಾಕ್ಸ್’ ಬಗ್ಗೆ ಅಪ್​ಡೇಟ್ ಕೊಟ್ಟ ಸುದೀಪ್​; ಎಲ್ಲಿಯವರೆಗೆ ಬಂತು ಶೂಟ್​?
ಸುದೀಪ್
Follow us on

ಕಿಚ್ಚ ಸುದೀಪ್ (Kichcha Sudeep) ಅವರು ಕಳೆದವರ್ಷ ‘ಮ್ಯಾಕ್ಸ್’ ಸಿನಿಮಾ ಘೋಷಣೆ ಮಾಡಿದರು. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಮೊದಲ ಗ್ಲಿಂಪ್ಸ್ ಫ್ಯಾನ್ಸ್​ಗೆ ಇಷ್ಟ ಆಗಿದೆ. ಈ ಚಿತ್ರದಲ್ಲಿ ಸುದೀಪ್ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಸುದೀಪ್ ಅವರು ಈ ಚಿತ್ರದ ಶೂಟ್​ನಲ್ಲಿ ಭಾಗಿ ಆಗುತ್ತಿರಲಿಲ್ಲ. ಈಗ ಸಿನಿಮಾ ಬಗ್ಗೆ ಅವರು ಅಪ್​ಡೇಟ್ ನೀಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

‘ಮ್ಯಾಕ್ಸ್’ ಚಿತ್ರದ ಮೊದಲ ಗ್ಲಿಂಪ್ಸ್ ರಿಲೀಸ್ ಆದ ಬಳಿಕ ಸಿನಿಮಾದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಚಿತ್ರ ತಂಡ ಕೂಡ ಏನನ್ನೂ ಘೋಷಣೆ ಮಾಡಿಲ್ಲ. ಈಗ ಸುದೀಪ್ ಅವರು ಇಂದು (ಜನವರಿ 16) ‘ಮ್ಯಾಕ್ಸ್’ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಸಂಕ್ರಾಂತಿ ನಂತರ ಮ್ಯಾಕ್ಸ್ ಸಿನಿಮಾ ಕ್ಲೈಮ್ಯಾಕ್ಸ್ ಶೂಟ್ ಪುನರಾರಂಭ ಮಾಡುತ್ತಿದ್ದೇನೆ. ಈಗಾಗಲೇ ಶೂಟ್ ಮಾಡಲಾದ ಭಾಗಕ್ಕೆ ಎಲ್ಲಾ ಹೀರೋಗಳು ಧ್ವನಿ ನೀಡಿದ್ದಾರೆ. ಚಿತ್ರದ ಉಳಿದ ಭಾಗಗಳ ಚಿತ್ರೀಕರಣ ಪ್ರಗತಿಯಲ್ಲಿದೆ’ ಎಂದು ಅವರು ಹೇಳಿದ್ದಾರೆ.

‘ಮ್ಯಾಕ್ಸ್’ ಸಿನಿಮಾ ಬಗ್ಗೆ ಫ್ಯಾನ್ಸ್ ಪದೇ ಪದೇ ಅಪ್​​ಡೇಟ್ ಕೇಳುತ್ತಿದ್ದರು. ಆದರೆ, ಸಿನಿಮಾ ಶೂಟ್ ಪೂರ್ಣಗೊಳ್ಳದೆ ಆ ಬಗ್ಗೆ ಅಪ್​ಡೇಟ್ ನೀಡೋದು ಹೇಗೆ ಅನ್ನೋದು ಸುದೀಪ್ ಅವರ ಪ್ರಶ್ನೆ. ನವೆಂಬರ್​ನಲ್ಲಿ ಮಳೆಯಿಂದ ಶೂಟ್ ಮಾಡಲು ಸಾಧ್ಯವಾಗಿರಲಿಲ್ಲ. ಡಿಸೆಂಬರ್​ನಲ್ಲಿ ಕೆಲವು ಅಡೆತಡೆಗಳು ಎದುರಾದವು. ಈಗ ಸಂಕ್ರಾಂತಿ ಬಳಿಕ ಮತ್ತೆ ‘ಮ್ಯಾಕ್ಸ್’ ಶೂಟ್ ಆರಂಭ ಆಗಿದೆ.


ಇದನ್ನೂ ಓದಿ: ‘ಪ್ರತಾಪ್ ಮಾತ್ರ ಇಂಟಲಿಜೆಂಟ್, ನಾನು ಡಂಬ್’; ಸಿಟ್ಟಲ್ಲೇ ಹೇಳಿದ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಅವರು ‘ಮ್ಯಾಕ್ಸ್’ ಅಲ್ಲದೆ ಇನ್ನೂ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಈ ಸಿನಿಮಾಗಳ ಬಗ್ಗೆಯೂ ಅಪ್​ಡೇಟ್ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಈ ವರ್ಷ ‘ಮ್ಯಾಕ್ಸ್’ ಸಿನಿಮಾ ರಿಲೀಸ್ ಆಗಲಿದೆ. ಬಿಗ್ ಬಾಸ್ ನಿರೂಪಣೆಯಲ್ಲೂ ಸುದೀಪ್ ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:02 am, Tue, 16 January 24