Kichcha Sudeep: ಕಿಚ್ಚ ಸುದೀಪ್​ ನಟನೆಯ 3 ಹೊಸ ಸಿನಿಮಾ ಬಗ್ಗೆ ಸಿಕ್ತು ಅಪ್​ಡೇಟ್​; ಇಲ್ಲಿದೆ ಸಿಹಿ ಸುದ್ದಿ..

|

Updated on: Apr 02, 2023 | 12:26 PM

Kichcha 46 | Sudeep New Film: ಇಷ್ಟು ದಿನ ಕಿಚ್ಚ ಸುದೀಪ್​ ಅವರು ಕ್ರಿಕೆಟ್​ನಲ್ಲಿ ಬ್ಯುಸಿ ಆಗಿದ್ದರು. ಅವರು ನಟಿಸಲಿರುವ ಮೂರು ಸಿನಿಮಾಗಳಿಗಾಗಿ ಭರ್ಜರಿ ತಯಾರಿ ನಡೆಯುತ್ತಿದೆ.

Kichcha Sudeep: ಕಿಚ್ಚ ಸುದೀಪ್​ ನಟನೆಯ 3 ಹೊಸ ಸಿನಿಮಾ ಬಗ್ಗೆ ಸಿಕ್ತು ಅಪ್​ಡೇಟ್​; ಇಲ್ಲಿದೆ ಸಿಹಿ ಸುದ್ದಿ..
ಕಿಚ್ಚ ಸುದೀಪ್
Follow us on

‘ಹೊಸ ಸಿನಿಮಾ ಯಾವಾಗ ಅನೌನ್ಸ್​ ಮಾಡ್ತೀರಿ ಸರ್’?-  ​‘ವಿಕ್ರಾಂತ್​ ರೋಣ’ ಬಿಡುಗಡೆ ಆದಾಗಿನಿಂದ ನಟ ಕಿಚ್ಚ ಸುದೀಪ್​ (Kichcha Sudeep) ಅವರಿಗೆ ಈ ಪ್ರಶ್ನೆ ಸದಾ ಎದುರಾಗುತ್ತಿತ್ತು. ಸುದೀಪ್​ ನಟನೆಯ 46ನೇ (Kichcha 46) ಚಿತ್ರದ ಕುರಿತು ಆ ಪರಿ ಕುತೂಹಲ ಸೃಷ್ಟಿ ಆಗಿದೆ. ಆದರೆ ಆ ಬಗ್ಗೆ ಅಪ್​ಡೇಟ್​ ನೀಡುವಲ್ಲಿ ಸುದೀಪ್​ ಅವರು ಅವಸರ ತೋರಿಸಿಲ್ಲ. ​‘ವಿಕ್ರಾಂತ್​ ರೋಣ’ ಬಿಡುಗಡೆ ಬಳಿಕ ಅವರು ಒಂದು ಬ್ರೇಕ್​ ತೆಗೆದುಕೊಂಡರು. ಕ್ರಿಕೆಟ್​ ಆಡುತ್ತಾ ಕಾಲ ಕಳೆದರು. ಈಗ ಅಭಿಮಾನಿಗಳ ಪ್ರಶ್ನೆಗೆ ಸುದೀಪ್​ ಉತ್ತರ ನೀಡಿದ್ದಾರೆ. ಮುಂದಿನ ಮೂರು ಸಿನಿಮಾಗಳ (Sudeep Next Movie) ಕುರಿತು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳ ಕೌತುಕ ಇನ್ನಷ್ಟು ಹೆಚ್ಚಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಫ್ಯಾನ್ಸ್​ಗಾಗಿ ಕಿಚ್ಚ ಸುದೀಪ್​ ಒಂದು ಪತ್ರ ಬರೆದಿದ್ದಾರೆ.

ಸುದೀಪ್​ ಬರೆದ ಪತ್ರದಲ್ಲಿ ಏನಿದೆ?

‘ನೀವೆಲ್ಲರೂ ನನ್ನ ಮುಂದಿನ ಸಿನಿಮಾವನ್ನು ‘ಕಿಚ್ಚ 46’ ಎಂದು ಕರೆಯುತ್ತಿದ್ದೀರಿ. ಅದರ ಬಗ್ಗೆ ನೀವು ಟ್ವೀಟ್ಸ್​ ಮತ್ತು ಮೀಮ್ಸ್​ ಮಾಡುತ್ತಿರುವುದು ನನಗೆ ಸ್ಪೆಷಲ್​ ಎನಿಸುತ್ತದೆ. ಅದಕ್ಕಾಗಿ ಧನ್ಯವಾದಗಳು’ ಎಂದು ಸುದೀಪ್​ ಅವರು ಪತ್ರ ಆರಂಭಿಸಿದ್ದಾರೆ. ಇಷ್ಟು ದಿನ ತಾವು ಬ್ರೇಕ್​ ತೆಗೆದುಕೊಂಡಿದ್ದು ಯಾಕೆ ಎಂಬುದನ್ನು ಕೂಡ ಅವರ ವಿವರಿಸಿದ್ದಾರೆ.

ಇದನ್ನೂ ಓದಿ
Kiccha Sudeep: ಜೋಸ್ ಬಟ್ಲರ್​ನಿಂದ ಸುದೀಪ್​ಗೆ ಬಂತು ಸರ್​​ಪ್ರೈಸ್ ಗಿಫ್ಟ್: ಥ್ರಿಲ್ ಆದ ಕಿಚ್ಚ
‘83’ ಸಿನಿಮಾ ವೇದಿಕೆಯಲ್ಲಿ ರಣವೀರ್​ ಸಿಂಗ್​ಗೆ ಕನ್ನಡ ಡೈಲಾಗ್​ ಹೇಳಿಕೊಟ್ಟ ಕಿಚ್ಚ ಸುದೀಪ್​
ಒಂದೇ ವೇದಿಕೆ ಮೇಲೆ ಸುದೀಪ್​, ರಣವೀರ್​, ಕಪಿಲ್​ ದೇವ್​; ‘83’ ಸುದ್ದಿಗೋಷ್ಠಿ ನೋಡಲು ಇಲ್ಲಿ ಕ್ಲಿಕ್​ ಮಾಡಿ
Kichcha Sudeep: ಕ್ರಿಕೆಟ್​ ಮಾತ್ರವಲ್ಲ, ಚೆಸ್​ನಲ್ಲೂ ಘಟಾನುಘಟಿಗೆ ಪೈಪೋಟಿ ನೀಡಲು ರೆಡಿಯಾದ ಕಿಚ್ಚ ಸುದೀಪ್​

Kichcha Sudeep: ಕಿಚ್ಚ ಸುದೀಪ್ ಮನೆಯಲ್ಲಿ ಚಾಹಲ್, ಪೃಥ್ವಿ ಶಾ

ಇದೇ ನನ್ನ ಮೊದಲ ಬ್ರೇಕ್​:

‘ನಾನು ಬ್ರೇಕ್​ ತೆಗೆದುಕೊಂಡೆ. ಇದು ನನ್ನ ಮೊದಲ ಬ್ರೇಕ್​. ತುಂಬ ಶ್ರಮವಹಿಸಿ, ಬಹಳ ಸಮಯ ತೆಗೆದುಕೊಂಡು ವಿಕ್ರಾಂತ್​ ರೋಣ ಶೂಟಿಂಗ್​ ಮಾಡಿದ್ದರಿಂದ ಹಾಗೂ ಸತತವಾಗಿ ಬಿಗ್​ಬಾಸ್​ ಒಟಿಟಿ ಮತ್ತು ಟಿವಿ ಸೀಸನ್​ನಲ್ಲಿ ಪಾಲ್ಗೊಂಡಿದ್ದರಿಂದ ವಿಕ್ರಾಂತ್​ ರೋಣ ಸಿನಿಮಾ ಬಳಿಕ ಈ ಬ್ರೇಕ್​ನ ಅವಶ್ಯಕತೆ ಇತ್ತು. ನನ್ನನ್ನು ಹೆಚ್ಚು ಖುಷಿಯಾಗಿಸುವ ರೀತಿಯಲ್ಲಿ ಈ ದಿನಗಳನ್ನು ಕಳೆಯಬೇಕು ಎನಿಸಿತು. ಕ್ರಿಕೆಟ್​ನಿಂದ ನನಗೆ ರಿಲ್ಯಾಕ್ಸ್​ ಸಿಗುತ್ತದೆ. ಕೆಸಿಸಿಯಲ್ಲಿ ತೊಡಗಿಕೊಂಡು ಸಮಯ ಕಳೆದಿದ್ದು ತುಂಬ ಖುಷಿ ನೀಡಿತು’ ಎಂದು ಸುದೀಪ್​ ಬರೆದುಕೊಂಡಿದ್ದಾರೆ.

ಮೂರು ಹೊಸ ಸಿನಿಮಾಗಳ ಬಗ್ಗೆ ಅಪ್​ಡೇಟ್​:

‘ಬ್ರೇಕ್​ನಲ್ಲಿ ಹೊಸ ಸ್ಕ್ರಿಪ್ಟ್​ ಬಗ್ಗೆ ಚರ್ಚೆ ಮತ್ತು ಮೀಟಿಂಗ್​ಗಳು ಪ್ರತಿದಿನದ ಕೆಲಸ ಆಗಿತ್ತು. ಮೂರು ಸ್ಕ್ರಿಪ್ಟ್​ಗಳನ್ನು ಫೈನಲ್​ ಮಾಡಿದ್ದೇನೆ. ಅಂದರೆ, 3 ಸಿನಿಮಾಗಳನ್ನು ಆಯ್ಕೆ ಮಾಡಿದ್ದೇನೆ. ಇವುಗಳಿಗೆ ದೊಡ್ಡ ಮಟ್ಟದ ತಯಾರಿ ಬೇಕು. ಮೂರೂ ಚಿತ್ರಗಳಿಗೆ ಹೋಮ್​ವರ್ಕ್​ ನಡೆಯುತ್ತಿದೆ. ಆ ತಂಡದವರು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಅನೌನ್ಸ್​ ಮಾಡುತ್ತೇನೆ’ ಎಂದು ಸುದೀಪ್​ ಅವರು ಪತ್ರ ಪೂರ್ಣಗೊಳಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:26 pm, Sun, 2 April 23