Sudeep on Darshan: ದರ್ಶನ್ ಜೊತೆ ಸಮಸ್ಯೆಯೇ ಇಲ್ಲ; ನೇರ ಮಾತುಗಳಲ್ಲಿ ಹೇಳಿದ ಕಿಚ್ಚ ಸುದೀಪ್

Kichcha Sudeep - Darshan: ಜನವರಿ 28ರಂದು ‘ಬಿಗ್ ಬಾಸ್’ ಫಿನಾಲೆ ನಡೆದಿದೆ. ಈಗ ಸುದೀಪ್ ಮರಳಿ ಶೂಟಿಂಗ್​ಗೆ ತೆರಳಿದ್ದಾರೆ. ವಿಮಾನ ಏರುವುದಕ್ಕೂ ಮೊದಲು ಅವರು ‘Ask Kichcha’ ಸೆಷನ್ ನಡೆಸಿದ್ದಾರೆ.

Sudeep on Darshan: ದರ್ಶನ್ ಜೊತೆ ಸಮಸ್ಯೆಯೇ ಇಲ್ಲ; ನೇರ ಮಾತುಗಳಲ್ಲಿ ಹೇಳಿದ ಕಿಚ್ಚ ಸುದೀಪ್
ದರ್ಶನ್-ಸುದೀಪ್
Edited By:

Updated on: Jan 30, 2024 | 12:39 PM

ಕಿಚ್ಚ ಸುದೀಪ್ ಹಾಗೂ ದರ್ಶನ್ (Darshan) ಮಧ್ಯೆ ಒಳ್ಳೆಯ ಫ್ರೆಂಡ್​​ಶಿಪ್ ಇತ್ತು. ಆದರೆ, ಕಾರಣಾಂತರಗಳಿಂದ ಇಬ್ಬರೂ ಬೇರೆ ಆದರು. ಇವರು ಎಲ್ಲಿಯೂ ಮುಖಾಮುಖಿ ಆಗುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡಿಕೊಳ್ಳುವುದಿಲ್ಲ. ಈ ಬೆನ್ನಲ್ಲೇ ಸುದೀಪ್ ಅವರು ಮಾಡಿರೋ ಒಂದು ಟ್ವೀಟ್ ಸಖತ್ ವೈರಲ್ ಆಗುತ್ತಿದೆ. ದರ್ಶನ್ ಬಗ್ಗೆ ಸುದೀಪ್ ಅವರು ಓಪನ್ ಆಗಿ ಹೇಳಿಕೊಂಡಿದ್ದಾರೆ. ಅವರು ಮಾಡಿರೋ ಟ್ವೀಟ್ ಬಗ್ಗೆ ಇಲ್ಲಿದೆ ವಿವರ.

ಸುದೀಪ್ ಅವರು ಟ್ವಿಟರ್​ನಲ್ಲಿ Ask Kichcha ಸೆಷನ್ ನಡೆಸುತ್ತಾರೆ. ಜನವರಿ 28ರಂದು ‘ಬಿಗ್ ಬಾಸ್’ ಫಿನಾಲೆ ಹೋಸ್ಟ್ ಮಾಡಿದರು. ಈಗ ಅವರು ಮರಳಿ ಶೂಟಿಂಗ್​ಗೆ ತೆರಳಿದ್ದಾರೆ. ವಿಮಾನ ಏರುವುದಕ್ಕೂ ಮೊದಲು ಅವರು ‘Ask Kichcha’ ಸೆಷನ್ ನಡೆಸಿದ್ದಾರೆ.

ಮುಂಜಾನೆ 7:30ಕ್ಕೆ ಸುದೀಪ್ ಟ್ವೀಟ್ ಒಂದನ್ನು ಮಾಡಿದರು. ‘ಒಂದು ಸಣ್ಣ AskKichcha ಸೆಷನ್. ನಿಮ್ಮ ಪ್ರಶ್ನೆಗಳನ್ನು ಕೇಳಿ’ ಎಂದು ಸುದೀಪ್ ಬರೆದುಕೊಂಡಿದ್ದರು. ಅಭಿಮಾನಿಯೋರ್ವ ಇದಕ್ಕೆ ಪ್ರಶ್ನೆ ಮಾಡಿದ್ದಾರೆ. ‘ಸರ್​ ನಿಮ್ದು ಮತ್ತೆ ದರ್ಶನ್ ಅವರದ್ದು ಸಮಸ್ಯೆನ ಯಾವಾಗ ಪರಿಹಾರ ಮಾಡ್ಕೋತೀರಾ? ಇನ್ನು ಎಷ್ಟು ಟೈಮ್ ತೆಗೆದುಕೊಳ್ಳುತ್ತೀರಾ’ ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ಕಿಚ್ಚ ನೇರ ಮಾತುಗಳಲ್ಲಿ ಉತ್ತರಿಸಿದ್ದಾರೆ. ‘ಸಮಸ್ಯೆ ಏನು ಅಂತ ಇಬ್ಬರೂ ಹುಡುಕುತ್ತಾ ಇದೀವಿ’ ಎಂದಿದ್ದಾರೆ ಸುದೀಪ್. ಈ ಮೂಲಕ ಅವರು ಅಚ್ಚರಿ ಮೂಡಿಸಿದ್ದಾರೆ. ಒಬ್ಬರ ಮಧ್ಯೆ ಎಲ್ಲವೂ ಸರಿ ಇದೆ ಎಂದು ಪರೋಕ್ಷವಾಗಿ ಮಾತನಾಡಿದ್ದಾರೆ.
ಸದ್ಯ ಸುದೀಪ್ ಮಾಡಿರೋ ಈ ಟ್ವೀಟ್ ಸಾಕಷ್ಟು ವೈರಲ್ ಆಗುತ್ತಿದೆ. ಸುದೀಪ್ ಅವರು ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ವೀಕ್ಷಿಸಿದ್ದರು. ಈಗ ದರ್ಶನ್ ಜೊತೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಇಬ್ಬರೂ ಮತ್ತೆ ಒಂದಾಗಲಿ ಎಂದು ಫ್ಯಾನ್ಸ್ ಕೋರಿಕೊಳ್ಳುತ್ತಿದ್ದಾರೆ.

ಕಿಚ್ಚ ಸುದೀಪ್​ ಅವರು ಎಕ್ಸ್ (X) ನಲ್ಲಿ ಬೆಳಗ್ಗೆ ಮಾಡಿರುವ ಪೋಸ್ಟ್

ಇದನ್ನೂ ಓದಿ: ‘ಗೆಳೆಯ ಬುಲೆಟ್ ಪ್ರಕಾಶ್ ಮನಸ್ಸಿನಲ್ಲಿದ್ದಾರೆ, ಅಂದ್ರೆ ನಿಮ್ಮನ್ನು ಪ್ರೀತ್ಸಲ್ವ?’; ರಕ್ಷಕ್​ಗೆ ಸುದೀಪ್ ಪ್ರಶ್ನೆ

ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಇನ್ನು ಕೆಲವೇ ದಿನಗಳ ಶೂಟ್ ಬಾಕಿ ಇದೆ ಎನ್ನಲಾಗಿದೆ. ಇದಾದ ಬಳಿಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:38 am, Mon, 29 January 24