ಬಿಗ್ ಬಾಸ್ ಕನ್ನಡ: ಸುದೀಪ್​ಗೆ ವಿಶೇಷ ಗಿಫ್ಟ್ ಕೊಟ್ಟ ಬಿಗ್ ಬಾಸ್; ಭಾವುಕರಾದ ಕಿಚ್ಚ

Kichcha Sudeep: ಬಿಗ್ ಬಾಸ್ ಜರ್ನಿ 10 ವರ್ಷಗಳನ್ನು ಪೂರೈಸಿದೆ. ಹೀಗಾಗಿ, ವೇದಿಕೆ ಮೇಲೆ ಸುದೀಪ್ ಅವರ 10 ಕಟೌಟ್​​ಗಳನ್ನು ನಿರ್ಮಿಸಲಾಗಿತ್ತು. ಪ್ರತಿ ಸೀಸನ್​ನ ಒಂದು ಗೆಟಪ್​ನ ಕಟೌಟ್ ಮಾಡಿ ನಿಲ್ಲಿಸಲಾಗಿತ್ತು. ಇದು ಕಿಚ್ಚ ಸುದೀಪ್​ಗೆ ಇಷ್ಟ ಆಗಿದೆ.

ಬಿಗ್ ಬಾಸ್ ಕನ್ನಡ: ಸುದೀಪ್​ಗೆ ವಿಶೇಷ ಗಿಫ್ಟ್ ಕೊಟ್ಟ ಬಿಗ್ ಬಾಸ್; ಭಾವುಕರಾದ ಕಿಚ್ಚ
ಸುದೀಪ್
Follow us
 ಶ್ರೀಲಕ್ಷ್ಮೀ ಎಚ್
| Updated By: Digi Tech Desk

Updated on:Jan 29, 2024 | 9:44 AM

ಬಿಗ್ ಬಾಸ್ ಆರಂಭ ಆಗಿ 10 ವರ್ಷಗಳು ಕಳೆದಿವೆ. ಪ್ರತಿ ಸೀಸನ್​ನ ನಡೆಸಿಕೊಟ್ಟಿದ್ದು ಕಿಚ್ಚ ಸುದೀಪ್ ಅವರು. ಸಿನಿಮಾ ಕೆಲಸಕ್ಕಾಗಿ ಅವರು ಎಲ್ಲಿಗೇ ಹೋದರೂ ಬಿಗ್ ಬಾಸ್ (Bigg Boss) ನಡೆಸಿಕೊಡಲು ಅವರು ಬೆಂಗಳೂರಿಗೆ ಓಡೋಡಿ ಬರುತ್ತಾರೆ. ಅವರು ಸಾಕಷ್ಟು ಇಷ್ಟಪಟ್ಟು ಈ ಶೋ ನಡೆಸಿಕೊಡುತ್ತಿದ್ದಾರೆ. ಪ್ರತಿ ಸೀಸನ್ ಯಶಸ್ವಿ ಆಗಲು ಕಿಚ್ಚನ ಕೊಡುಗೆಯೂ ದೊಡ್ಡದಿದೆ. ಈ ಕಾರಣಕ್ಕೆ ಕಿಚ್ಚ ಸುದೀಪ್ ಅವರಿಗೆ ವಿಶೇಷ ಗೌರವ ನೀಡಲಾಗಿದೆ. ಇದನ್ನು ನೋಡಿ ಕಿಚ್ಚ ಸುದೀಪ್ ಅವರು ಭಾವುಕರಾಗಿದ್ದಾರೆ.

ಬಿಗ್ ಬಾಸ್ 10 ವರ್ಷಗಳನ್ನು ಪೂರೈಸಿದೆ. ಹೀಗಾಗಿ, ವೇದಿಕೆ ಮೇಲೆ 10 ಕಟೌಟ್​​ಗಳನ್ನು ನಿರ್ಮಿಸಲಾಗಿತ್ತು. ಪ್ರತಿ ಸೀಸನ್​ನ ಒಂದು ಗೆಟಪ್​ನ ಕಟೌಟ್ ಮಾಡಿ ನಿಲ್ಲಿಸಲಾಗಿದೆ. ಇದು ಕಿಚ್ಚ ಸುದೀಪ್​ಗೆ ಇಷ್ಟ ಆಗಿದೆ. ಅವರು ಇದನ್ನು ನೋಡಿ ಭಾವುಕರಾದರು. ಸುದೀಪ್ ಬಗ್ಗೆ ಬಿಗ್ ಬಾಸ್ ಕಡೆಯಿಂದ ವಿಶೇಷ ಘೋಷಣೆ ಕೂಡ ಆಯಿತು.

‘ಇದು 10ನೇ ಸೀಸನ್. ಇಷ್ಟು ವರ್ಷಗಳಲ್ಲಿ ಮನೆ ಬದಲಾಗಿದೆ, ಸ್ಥಳ ಬದಲಾಗಿದೆ. ತಂತ್ರಜ್ಞರು ಬದಲಾಗಿದ್ದಾರೆ, ಪ್ರಸಾರಕರು ಬದಲಾಗಿದ್ದಾರೆ. ಸ್ಪರ್ಧಿಗಳಂತೂ ಬದಲಾಗುತ್ತಲೇ ಇರುತ್ತಾರೆ. ಬದಲಾಗದ ಒಂದೇ ಒಂದು ವಿಚಾರ ಎಂದರೆ ಅದು ಸುದೀಪ್. ತಪ್ಪುಗಳನ್ನು ತಿದ್ದುವ, ದಾರಿ ತೋರಿಸುವ ನಾಯಕ ಸುದೀಪ್. ಪ್ರಾಮಾಣಿಕತೆ ತುಂಬಿದವರು ಸುದೀಪ್. ನೀವಿಲ್ಲದೆ ಬಿಗ್ ಬಾಸ್​ನ ಊಹಿಸಲೂ ಸಾಧ್ಯವಿಲ್ಲ’ ಎಂದು ಬಿಗ್ ಬಾಸ್ ಘೋಷಣೆ ಮಾಡಿದರು.

10 ವರ್ಷಗಳ ಪಯಣ ಹೇಗಿತ್ತು ಎಂಬುದನ್ನು ವಿಡಿಯೋ ಮೂಲಕ ತೋರಿಸಲಾಯಿತು. ಬಿಗ್ ಬಾಸ್ ಆರಂಭ ಆಗುವ ಸಂದರ್ಭದಲ್ಲಿ ಸುದೀಪ್ ಅವರು ದೊಡ್ಮನೆ ಒಳಗೆ ಹೋಗಿ ದೀಪ ಹಚ್ಚಿದ್ದರಿಂದ ಹಿಡಿದು ಇಂದಿನ ಎಪಿಸೋಡ್​ವರೆಗೆ ಎಲ್ಲವನ್ನೂ ತೋರಿಸಲಾಯಿತು. ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದು, ಗೆಳೆಯರನ್ನು ಒಂದು ಮಾಡಿದ್ದು ಸೇರಿದಂತೆ ಎಲ್ಲವನ್ನೂ ವಿಶೇಷ ವಿಡಿಯೋದಲ್ಲಿ ತೋರಿಸಲಾಯಿತು. ಇದು ಅನೇಕರಿಗೆ ಇಷ್ಟ ಆಯಿತು. ಸ್ವತಃ ಕಿಚ್ಚ ಸುದೀಪ್ ಕೂಡ ಇದನ್ನು ಇಷ್ಟಪಟ್ಟರು.

ಇದನ್ನೂ ಓದಿ: ವಿನಯ್ ಎಲಿಮಿನೇಷನ್ ಫೇರ್​ ಅಲ್ಲ ಎಂದವರಿಗೆ ಕಿಚ್ಚ ಕೊಟ್ಟ ಉತ್ತರ ಏನು?

ಕಿಚ್ಚ ಸುದೀಪ್ ಅವರು ಕೂಡ ಎಲ್ಲರಿಗೂ ಧನ್ಯವಾದ ಹೇಳಿದರು. ‘ನೀವು ನೀಡಿದ ಬೆಂಬಲದಿಂದಲೇ ನನ್ನ ಈ ಜರ್ನಿ ಸಾಧ್ಯ ಆಯಿತು. ಈ ಸೀಸನ್​ನ ತುಣುಕುಗಳನ್ನು ಹಾಕಿ ವಿಡಿಯೋ ಮಾಡಬಹುದಿತ್ತು. ಆದರೆ, ನೀವು ಆ ರೀತಿ ಮಾಡಿಲ್ಲ. ಈ ವಿಡಿಯೋ ಮಾಡಲು ಹಲವು ದಿನಗಳ ಪರಿಶ್ರಮ ಬೇಕಾಗಿದೆ’ ಎಂದರು ಸುದೀಪ್. ಅವರಿಗೆ ಈ ಸೆಲೆಬ್ರೇಷನ್ ಸಾಕಷ್ಟು ಖುಷಿ ನೀಡಿದೆ. ಈ ಬಾರಿ ಬಿಗ್ ಬಾಸ್ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಂಡಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:40 am, Mon, 29 January 24

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್