Rakshak Bullet: ಒಂದೇ ಒಂದು ವಿಡಿಯೋದಲ್ಲೂ ಕಾಣಿಸಿಲ್ಲ ರಕ್ಷಕ್ ಹಾಗೂ ಈಶಾನಿ; ನಾಲಿಗೆ ಹರಿಬಿಟ್ಟಿದ್ದಕ್ಕೆ ಸಿಕ್ಕ ಪ್ರತಿಫಲ?

ನೆಗೆಟಿವ್ ಟಾಕ್ ಮಾಡಿದವರಿಗೆ ಸುದೀಪ್ ಎಚ್ಚರಿಕೆ ನೀಡದೇ ಬಿಡುವುದಿಲ್ಲ. ರಕ್ಷಕ್ ಹಾಗೂ ಈಶಾನಿ ಇಬ್ಬರಿಗೂ ಎಚ್ಚರಿಕೆ ನೀಡುವ ಕೆಲಸವನ್ನು ಅವರು ಮಾಡಿದ್ದರು. ಇದರ ಜೊತೆ ಯಾವುದೇ ವಿಡಿಯೋ ಟೇಪ್​ನಲ್ಲಿ ಅವರು ಕಾಣಿಸಿಲ್ಲ.

Rakshak Bullet: ಒಂದೇ ಒಂದು ವಿಡಿಯೋದಲ್ಲೂ ಕಾಣಿಸಿಲ್ಲ ರಕ್ಷಕ್ ಹಾಗೂ ಈಶಾನಿ; ನಾಲಿಗೆ ಹರಿಬಿಟ್ಟಿದ್ದಕ್ಕೆ ಸಿಕ್ಕ ಪ್ರತಿಫಲ?
ರಕ್ಷಕ್-ಈಶಾನಿ
Follow us
ರಾಜೇಶ್ ದುಗ್ಗುಮನೆ
|

Updated on:Jan 29, 2024 | 10:31 AM

ರಕ್ಷಕ್ ಬುಲೆಟ್ (Rakshak Bullet) ಅವರು ಬಿಗ್ ಬಾಸ್ ಮನೆಯಿಂದ ಕೇವಲ ಒಂದೇ ತಿಂಗಳಿಗೆ ಔಟ್ ಆದರು. ಇದು ಅವರ ಫ್ಯಾನ್ಸ್​ಗೆ ಸಾಕಷ್ಟು ಬೇಸರ ಮೂಡಿಸಿತ್ತು. ಸ್ವತಃ ರಕ್ಷಕ್ ಅವರು ಈ ಬಗ್ಗೆ ಅಸಮಾಧಾನಗೊಂಡಿದ್ದರು. ಈ ಕಾರಣದಿಂದಲೇ ಅವರು ಬಾಯಿಗೆ ಬಂದಂತೆ ಹೇಳಿಕೆ ನೀಡೋಕೆ ಆರಂಭಿಸಿದ್ದರು. ಸಂದರ್ಶನಗಳಲ್ಲಿ ಬಾಯಿಗೆ ಬಂದಂತೆ ಮಾತನಾಡಿದ್ದರು. ಈಶಾನಿ ಅವರು ದೊಡ್ಮನೆ ಒಳಗೆ ಅತಿಥಿಯಾಗಿ ಎಂಟ್ರಿ ಕೊಟ್ಟಾಗ ಪ್ರತಾಪ್ ಬಗ್ಗೆ ಮಾತನಾಡಿದ್ದರು. ಇದನ್ನು ಸುದೀಪ್ ಖಂಡಿಸಿದ್ದರು. ಪರಿಣಾಮ ಯಾವ ವಿಡಿಯೋ ಟೇಪ್​ನಲ್ಲೂ (ವಿಟಿ) ಅವರು ಕಾಣಿಸಿಲ್ಲ.

ತಮ್ಮ ಬಗ್ಗೆ ನೆಗೆಟಿವ್ ಟಾಕ್ ಮಾಡಿದವರಿಗೆ ಸುದೀಪ್ ಎಚ್ಚರಿಕೆ ನೀಡದೇ ಬಿಡುವುದಿಲ್ಲ. ರಕ್ಷಕ್ ಹಾಗೂ ಈಶಾನಿ ಇಬ್ಬರಿಗೂ ಎಚ್ಚರಿಕೆ ನೀಡುವ ಕೆಲಸವನ್ನು ಅವರು ಮಾಡಿದ್ದರು. ಇದರ ಜೊತೆ ಯಾವುದೇ ವಿಡಿಯೋ ಟೇಪ್​ನಲ್ಲಿ ಅವರು ಕಾಣಿಸಿಲ್ಲ. ಕಿರಿಕ್ ಮಾಡಿಕೊಂಡಿದ್ದರಿಂದಲೇ ಅವರನ್ನು ಎಲ್ಲಾ ವಿಡಿಯೋಗಳಿಂದ ಕೈ ಬಿಡಲಾಗಿದೆ ಎನ್ನುವ ಮಾತು ಕೇಳಿ ಬಂದಿದೆ.

ಬಿಗ್ ಬಾಸ್​ನಲ್ಲಿ ಫನ್, ಕಣ್ಣೀರು ಇತ್ಯಾದಿ ಘಟನೆಗಳು ನಡೆದಿರುತ್ತವೆ. ಇದರ ಸಮ್​ಅಪ್ ಮಾಡಿ ವಿಡಿಯೋ ಪ್ಲೇ ಮಾಡಲಾಗುತ್ತದೆ. ಈ ಬಾರಿ ಫನ್ ವಿಟಿ, ಕಣ್ಣೀರು ಹಾಕಿದ ವಿಟಿ, ಒಟ್ಟಾರೆ ಜರ್ನಿ ವಿಟಿಯನ್ನು ಹಾಕಲಾಗಿದೆ. ಇದರಲ್ಲಿ ಎಲ್ಲಿಯೂ ರಕ್ಷಕ್ ಹಾಗೂ ಈಶಾನಿಯನ್ನು ತೋರಿಸಿಲ್ಲ. ಹೀಗೇಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. ರಕ್ಷಕ್ ಹಾಗೂ ಈಶಾನಿ ಮಾಡಿಕೊಂಡ ಕಿರಿಕ್​ನಿಂದಲೇ ಈ ರೀತಿ ಆಗಿರಬಹುದು ಎಂದು ಅನೇಕರು ಭಾವಿಸಿದ್ದಾರೆ.

ಇದನ್ನೂ ಓದಿ: ‘ಗೆಳೆಯ ಬುಲೆಟ್ ಪ್ರಕಾಶ್ ಮನಸ್ಸಿನಲ್ಲಿದ್ದಾರೆ, ಅಂದ್ರೆ ನಿಮ್ಮನ್ನು ಪ್ರೀತ್ಸಲ್ವ?’; ರಕ್ಷಕ್​ಗೆ ಸುದೀಪ್ ಪ್ರಶ್ನೆ

ರಕ್ಷಕ್ ಅವರು ಬಿಗ್ ಬಾಸ್ ಮನೆ ಒಳಗೆ ಎರಡನೇ ಬಾರಿ ಬರುವಾಗ ಅತಿಥಿಯಾಗಿ ಬಂದಿದ್ದರು. ಈ ವೇಳೆ ಪ್ರತಾಪ್ ಬಳಿ ಅವರು ಕಿರಿಕ್ ಮಾಡಿಕೊಂಡಿದ್ದರು. ಸ್ನೇಹಿತ್ ಅವರು ಇದನ್ನು ಖಂಡಿಸಿದ್ದರು. ‘ಪ್ರತಾಪ್ ಬಗ್ಗೆ ಸಿಂಪತಿ ಮೂಡುವಂತೆ ಮಾಡಲು ನಾವೇ ಕಾರಣ’ ಎಂದು ಅವರು ಹೇಳಿದ್ದರು. ಈಶಾನಿ ಕೂಡ ಪ್ರತಾಪ್​ನ ಟಾರ್ಗೆಟ್ ಮಾಡಿದ್ದರು. ‘ಕಾಗೆ ಕಕ್ಕ ಮಾಡಿಕೊಂಡು ಎಲ್ಲ ಕಡೆಗಳಲ್ಲೂ ಓಡಾಡುತ್ತಿದೆ’ ಎಂದು ಅವರು ಹೇಳಿದ್ದರು. ಈ ಬಾರಿಯ ಬಿಗ್ ಬಾಸ್ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಂಡಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:00 am, Mon, 29 January 24

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್