‘ಮ್ಯಾಕ್ಸ್’ ಟ್ರೇಲರ್​ ಬಿಡುಗಡೆಗೆ ಕ್ಷಣಗಣನೆ: ಬಿಡುಗಡೆ ಯಾವಾಗ?

|

Updated on: Dec 21, 2024 | 7:14 AM

Kichcha Sudeep: ಕಿಚ್ಚ ಸುದೀಪ್ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ ಸಿನಿಮಾ ಬಿಡುಗಡೆ ಆಗಿ ಎರಡೂವರೆ ವರ್ಷವಾಗಿದೆ. ಇದೀಗ ಅವರ ನಟನೆಯ ‘ಮ್ಯಾಕ್ಸ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ದಿನಾಂಕ ಇದೀಗ ಬಿಡುಗಡೆ ಆಗಿದೆ. ‘ಮ್ಯಾಕ್ಸ್’ ಸಿನಿಮಾದ ಟ್ರೈಲರ್ ಡಿಸೆಂಬರ್ 22ರಂದು ಬೆಳಿಗ್ಗೆ 11:08 ಕ್ಕೆ ಬಿಡುಗಡೆ ಆಗಲಿದೆ.

‘ಮ್ಯಾಕ್ಸ್’ ಟ್ರೇಲರ್​ ಬಿಡುಗಡೆಗೆ ಕ್ಷಣಗಣನೆ: ಬಿಡುಗಡೆ ಯಾವಾಗ?
Sudeep
Follow us on

ಸುದೀಪ್ ಅವರು ಪೂರ್ಣ ಪ್ರಮಾಣದ ನಾಯಕರಾಗಿ ನಟಿಸಿದ ಸಿನಿಮಾ ಒಂದು ಬಿಡುಗಡೆ ಆಗಿ ಎರಡೂವರೆ ವರ್ಷವಾಗಿದೆ. ಸುದೀಪ್ ವೃತ್ತಿ ಜೀವನದಲ್ಲಿಯೇ ಇಷ್ಟು ದೊಡ್ಡ ಗ್ಯಾಪ್ ಅನ್ನು ಅವರು ತೆಗೆದುಕೊಂಡಿಲ್ಲ. ಬಿಗ್​ಬಾಸ್ ಸೇರಿದಂತೆ ಇನ್ನಿತರೆ ಕಾರಣಗಳಿಗಾಗಿ ಸುದೀಪ್​ ಅವರ ಸಿನಿಮಾ ತಡವಾಗಿದೆ. ಆದರೆ ತಡವಾದರೂ ಭರ್ಜರಿಯಾಗಿ ಪ್ರೇಕ್ಷಕರ ಮುಂದೆ ಬರಲು ಕಿಚ್ಚ ರೆಡಿಯಾಗಿದ್ದಾರೆ. ಸುದೀಪ್ ಅವರ ‘ಮ್ಯಾಕ್ಸ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಟ್ರೈಲರ್ ಬಿಡುಗಡೆ ದಿನಾಂಕ ಘೋಷಿಸಲಾಗಿದೆ.

‘ಮ್ಯಾಕ್ಸ್’ ಸಿನಿಮಾದ ಟ್ರೈಲರ್ ನಾಳೆ ಅಂದರೆ ಡಿಸೆಂಬರ್ 22 ರಂದು ಬಿಡುಗಡೆ ಆಗಲಿದೆ. ಬೆಳಿಗ್ಗೆ 11:08 ನಿಮಿಷಕ್ಕೆ ಟ್ರೈಲರ್ ಬಿಡುಗಡೆ ಆಗಲಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ಸುದ್ದಿಯನ್ನು ಹಂಚಿಕೊಂಡಿರುವ ಸುದೀಪ್, ‘ಮ್ಯಾಕ್ಸ್​’ ಸಿನಿಮಾದ ಬಿಡುಗಡೆ ಪೂರ್ವ ಅಬ್ಬರಕ್ಕೆ ತಯಾರಾಗಿ ಎಂದಿದ್ದಾರೆ. ಪೋಸ್ಟರ್ ಒಂದನ್ನು ಸುದೀಪ್ ಹಂಚಿಕೊಂಡಿದ್ದು, ದೊಡ್ಡ ವಾಹನವೊಂದರ ಮೇಲೆ ರಕ್ತ ಸಿಕ್ತರಾಗಿರುವ ಸುದೀಪ್ ಒಂದು ಕೈಯಲ್ಲಿ ಬಂದೂಕು ಇನ್ನೊಂದು ಕೈಯಲ್ಲಿ ಬಿಯರ್ ಗ್ಲಾಸ್ ಹಿಡಿದ ಚಿತ್ರ ಪೋಸ್ಟರ್​ನಲ್ಲಿದೆ.

ಇದನ್ನೂ ಓದಿ:ಹೊರಡುವ ಮುನ್ನ ಸುದೀಪ್, ಉಪೇಂದ್ರಗೆ ಶುಭ ಹಾರೈಸಿದ ಶಿವಣ್ಣ

‘ಮ್ಯಾಕ್ಸ್’ ಸಿನಿಮಾ ಒಂದು ರಾತ್ರಿಯಲ್ಲಿ ನಡೆಯುವ ಕತೆಯನ್ನು ಹೊಂದಿದ್ದು, ಸಿನಿಮಾದಲ್ಲಿ ಸುದೀಪ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಒಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ರಾತ್ರಿಯಲ್ಲಿ ನಡೆಯುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎನ್ನಲಾಗುತ್ತಿದೆ. ಸಿನಿಮಾದ ಟೀಸರ್​, ಕೆಲವು ಸಣ್ಣ ಪುಟ್ಟ ತುಣುಕುಗಳು ಈಗಾಗಲೇ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಈಗಾಗಲೇ ಕುತೂಹಲ ಮೂಡಿಸಿವೆ.

ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ತಮಿಳಿನ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್ ತನು ಅವರು ನಿರ್ಮಾಣ ಮಾಡಿದ್ದಾರೆ. ಕಲೈಪುಲಿ ಅವರು ರಜನೀಕಾಂತ್, ವಿಜಯ್ ಸೇರಿದಂತೆ ಹಲವು ಸೂಪರ್ ಸ್ಟಾರ್ ನಟರ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಕೆಆರ್​ಜಿ ಅವರು ವಿತರಣೆ ಮಾಡುತ್ತಿದ್ದಾರೆ. ಸಿನಿಮಾ ಡಿಸೆಂಬರ್ 25ಕ್ಕೆ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:14 am, Sat, 21 December 24