ಕಿಚ್ಚ ಸುದೀಪ್ ಆಪ್ತ, ‘ವಿಕ್ರಾಂತ್ ರೋಣ’ ನಿರ್ಮಾಪಕ ಜಾಕ್ ಮಂಜು ಆಸ್ಪತ್ರೆಗೆ ದಾಖಲು

ಮಂಜು ಅವರಿಗೆ ಕಾಲಿಗೆ ಏಟಾಗಿತ್ತು. ಹೀಗಾಗಿ ಶುಕ್ರವಾರ (ಜೂನ್ 10) ಬನ್ನೇರುಘಟ್ಟದ ರಸ್ತೆಯ ಅಪೋಲೋ ಆಸ್ಪತ್ರೆಗೆ ಅವರು ದಾಖಲಾಗಿದ್ದಾರೆ. 

ಕಿಚ್ಚ ಸುದೀಪ್ ಆಪ್ತ, ‘ವಿಕ್ರಾಂತ್ ರೋಣ’ ನಿರ್ಮಾಪಕ ಜಾಕ್ ಮಂಜು ಆಸ್ಪತ್ರೆಗೆ ದಾಖಲು
ಸುದೀಪ್​-ಜಾಕ್ ಮಂಜು
Edited By:

Updated on: Jun 14, 2022 | 7:37 PM

ಕಿಚ್ಚ ಸುದೀಪ್ (Kichcha Sudeep) ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ (Vikrant Rona Movie) ರಿಲೀಸ್​ಗೆ ರೆಡಿ ಇದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾ ತೆರೆಗೆ ಬರೋಕೆ ಇನ್ನೂ ಒಂದೂವರೆ ತಿಂಗಳು ಬಾಕಿ ಇದೆ. ಆಗಲೇ ಚಿತ್ರತಂಡ ಭರದಿಂದ ಪ್ರಚಾರ ಮಾಡುತ್ತಿದೆ. ಈ ಮಧ್ಯೆ ಈ ಚಿತ್ರದ ನಿರ್ಮಾಪಕ ಜಾಕ್ ಮಂಜು (Jack Manju
) ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳ ವಲಯದಲ್ಲಿ ಆತಂಕ ಮೂಡಿದೆ. ಅವರು ಬೇಗ ಗುಣಮುಖರಾಗಲೆಂದು ಫ್ಯಾನ್ಸ್ ಕೋರುತ್ತಿದ್ದಾರೆ.

ಮಂಜು ಅವರಿಗೆ ಕಾಲಿಗೆ ಏಟಾಗಿತ್ತು. ಹೀಗಾಗಿ ಶುಕ್ರವಾರ (ಜೂನ್ 10) ಬನ್ನೇರುಘಟ್ಟದ ರಸ್ತೆಯ ಅಪೋಲೋ ಆಸ್ಪತ್ರೆಗೆ ಅವರು ದಾಖಲಾಗಿದ್ದಾರೆ.  ಕಳೆದ ನಾಲ್ಕು ದಿನಗಳಿಂದ ಜಾಕ್ ಮಂಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅವರು ಇಂದು (ಜೂನ್ 14) ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ
Vikrant Rona: ಕಿಚ್ಚನ ‘ರಾ ರಾ ರಕ್ಕಮ್ಮ..’ ಹಾಡಿಗೆ ಹೆಜ್ಜೆ ಹಾಕಿದ ಬಾಲಿವುಡ್​ ಸ್ಟಾರ್​ ನಟ ರಿತೇಶ್​ ದೇಶಮುಖ್​
‘ಮತ್ತೊಂದು ದೊಡ್ಡ ಚಿತ್ರ ಬರ್ತಿದೆ’: ‘ವಿಕ್ರಾಂತ್​ ರೋಣ’ ಬಗ್ಗೆ ಪರಭಾಷೆ ಮಂದಿಗೆ ಮೊದಲೇ ಎಚ್ಚರಿಕೆ ನೀಡಿದ ಆರ್​ಜಿವಿ
Vikrant Rona: ಬಿಡುಗಡೆಗೂ ಮುನ್ನ ವಿದೇಶದಲ್ಲಿ 10 ಕೋಟಿ ರೂ. ಬಿಸ್ನೆಸ್​ ಮಾಡಿದ ‘ವಿಕ್ರಾಂತ್​ ರೋಣ’: ಸುದೀಪ್​ ಫ್ಯಾನ್ಸ್​ ಖುಷ್​
ಸುದೀಪ್​ ನಟನೆಯ ‘ವಿಕ್ರಾಂತ್​ ರೋಣ’ ಚಿತ್ರದ 3ಡಿ ದೃಶ್ಯ ನೋಡಿ ವಿಮರ್ಶೆ ನೀಡಿದ ಆರ್​ಜಿವಿ

ಆದಷ್ಟು ಬೇಗ ‘ವಿಕ್ರಾಂತ್ ರೋಣ’ ಚಿತ್ರವನ್ನು ನೋಡಬೇಕು ಎಂದು ಫ್ಯಾನ್ಸ್​ ಕಾದಿದ್ದಾರೆ. ಅಷ್ಟರಲ್ಲಾಗಲೇ ನಟ ರಮೇಶ್​ ಅರವಿಂದ್​ ಅವರಿಗೆ ಈ ಸಿನಿಮಾವನ್ನು ನೋಡುವ ಅವಕಾಶ ಸಿಕ್ಕಿದೆ.  ಕಿಚ್ಚ ಸುದೀಪ್​ ಅವರು ಪ್ರೀತಿಯಿಂದ ರಮೇಶ್​ ಅವರನ್ನು ಆಹ್ವಾನಿಸಿ ಸಿನಿಮಾ ತೋರಿಸಿದ್ದಾರೆ. ಈ ಚಿತ್ರವನ್ನು ನೋಡಿ ರಮೇಶ್​ ಬಹಳ ಮೆಚ್ಚಿಕೊಂಡಿದ್ದಾರೆ. ‘ರಿಲೀಸ್​ ಆಗುವುದಕ್ಕಿಂತ ಮುಂಚೆ ಸಿನಿಮಾ ತೋರಿಸೋಕೆ ಧೈರ್ಯ ಬೇಕು. ಅಂಥ ಆತ್ಮವಿಶ್ವಾಸ ಸುದೀಪ್​ ಅವರಿಗೆ ಇದೆ. ಒಂದು ಫ್ಯಾಂಟಸಿ ಜಗತ್ತನ್ನು ಸೃಷ್ಟಿ ಮಾಡಿ, ಅದರಲ್ಲಿ ಅದ್ಭುತವಾದ ಸಸ್ಪೆನ್ಸ್​ ಥ್ರಿಲ್ಲರ್​ ಅನ್ನು ಸುದೀಪ್​ ನೀಡಿದ್ದಾರೆ. ಆ ಚಿತ್ರಕ್ಕೆ ಶುಭವಾಗಲಿ’ ಎಂದು ರಮೇಶ್​ ಅರವಿಂದ್ ಇತ್ತೀಚೆಗೆ​ ಹೇಳಿದ್ದರು. ಈ ಸಿನಿಮಾವನ್ನು ಜಾಕ್​ ಮಂಜು ನಿರ್ಮಾಣ ಮಾಡಿದ್ದಾರೆ. ಅನೂಪ್​ ಭಂಡಾರಿ ನಿರ್ದೇಶಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

Published On - 9:48 am, Tue, 14 June 22