Kichcha Sudeep: ‘ಸಮಯ ಸಿಕ್ಕಾಗಲೆಲ್ಲ ಇದನ್ನು ಮಾಡ್ತೀನಿ’; ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಸರ್​ಪ್ರೈಸ್​

|

Updated on: Jan 16, 2024 | 7:26 AM

ಎಲ್ಲಾ ಹೀರೋಗಳು ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವುದಿಲ್ಲ. ಆದರೆ, ಇನ್ನುಮುಂದೆ ಸಮಯ ಸಿಕ್ಕಾಗಲೆಲ್ಲ ಟ್ವಿಟರ್​ನಲ್ಲಿ ‘ಆಸ್ಕ್​ ಕಿಚ್ಚ’ ಸೆಷನ್ ನಡೆಸೋದಾಗಿ ಸುದೀಪ್ ಹೇಳಿದ್ದಾರೆ. ಈ ಮೂಲಕ ಫ್ಯಾನ್ಸ್​​ಗೆ ಸರ್​ಪ್ರೈಸ್ ನೀಡಿದ್ದಾರೆ.

Kichcha Sudeep: ‘ಸಮಯ ಸಿಕ್ಕಾಗಲೆಲ್ಲ ಇದನ್ನು ಮಾಡ್ತೀನಿ’; ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಸರ್​ಪ್ರೈಸ್​
ಸುದೀಪ್
Follow us on

ಕಿಚ್ಚ ಸುದೀಪ್ (kichcha Sudeep) ಅವರು ಸಿನಿಮಾ ಕೆಲಸ ಹಾಗೂ ಬಿಗ್ ಬಾಸ್ ನಿರೂಪಣೆ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ. ಈಗ ಅವರು ‘ಮ್ಯಾಕ್ಸ್’ ಸಿನಿಮಾ ಶೂಟಿಂಗ್​ನ ಮತ್ತೆ ಆರಂಭಿಸಿದ್ದಾರೆ. ಈ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಇದನ್ನು ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇದರ ಜೊತೆಗೆ ಸುದೀಪ್ ಕಡೆಯಿಂದ ಒಂದು ಸರ್​ಪ್ರೈಸ್ ಕೂಡ ಸಿಕ್ಕಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಸ್ಟಾರ್ ಹೀರೋಗಳು ಅಭಿಮಾನಿಗಳನ್ನು ಎದುರುಗೊಳ್ಳೋದು ಸಿನಿಮಾ ರಿಲೀಸ್ ಸಂದರ್ಭದಲ್ಲಿ ಅಥವಾ ಬರ್ತ್​ಡೇ ದಿನ. ಉಳಿದ ಸಂದರ್ಭಗಳಲ್ಲಿ ನೆಚ್ಚಿನ​ ಹೀರೋಗೆ ಪ್ರಶ್ನೆ ಕೇಳಬೇಕು ಎಂದರೆ ಇರೋದು ಒಂದೇ ಮಾರ್ಗ, ಅದುವೇ ಸೋಶಿಯಲ್ ಮೀಡಿಯಾ. ಆದರೆ, ಎಲ್ಲಾ ಹೀರೋಗಳು ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವುದಿಲ್ಲ. ಆದರೆ, ಇನ್ನುಮುಂದೆ ಸಮಯ ಸಿಕ್ಕಾಗಲೆಲ್ಲ ಟ್ವಿಟರ್​ನಲ್ಲಿ ‘ಆಸ್ಕ್​ ಕಿಚ್ಚ’ ಸೆಷನ್ ನಡೆಸೋದಾಗಿ ಸುದೀಪ್ ಹೇಳಿದ್ದಾರೆ. ಈ ಮೂಲಕ ಫ್ಯಾನ್ಸ್​​ಗೆ ಸರ್​ಪ್ರೈಸ್ ನೀಡಿದ್ದಾರೆ.

ಮುಂಜಾನೆ ಈ ಬಗ್ಗೆ ಸುದೀಪ್ ಮಾಹಿತಿ ನೀಡಿದ್ದಾರೆ.  ‘ಇಂದಿನಿಂದ #AskKichcha ಆರಂಭಿಸೋಣ. ಸಮಯ ಸಿಕ್ಕಾಗ ಇದನ್ನು ಮಾಡುತ್ತೇನೆ. ಈಗ ವಿಮಾನ ಏರುವುದಕ್ಕೂ ಮೊದಲು ಅಭಿಮಾನಿಗಳ ಕೆಲವು ಪ್ರಶ್ನೆಗೆ ಉತ್ತರ ನೀಡುತ್ತೇನೆ’ ಎಂದು ಸುದೀಪ್ ಹೇಳಿದ್ದಾರೆ. ನಂತರ ಅಭಿಮಾನಿಗಳ ಪ್ರಶ್ನೆಗೆ ಅರ್ಧಗಂಟೆಗೂ ಹೆಚ್ಚು ಕಾಲ ಉತ್ತರ ನೀಡಿದ್ದಾರೆ. ನಂತರ ‘ಬೋರ್ಡಿಂಗ್ ಟೈಮ್’ ಎಂದು ಬರೆದುಕೊಂಡಿದ್ದಾರೆ.


ಇದನ್ನೂ ಓದಿ: ಬೆಳ್ಳಂಬೆಳಿಗ್ಗೆ ‘ಮ್ಯಾಕ್ಸ್’ ಬಗ್ಗೆ ಅಪ್​ಡೇಟ್ ಕೊಟ್ಟ ಸುದೀಪ್​; ಎಲ್ಲಿಯವರೆಗೆ ಬಂತು ಶೂಟ್​?

ಇಂದಿನಿಂದ (ಜನವರಿ 16) ‘ಮ್ಯಾಕ್ಸ್’ ಸಿನಿಮಾದ ಶೂಟ್ ಮತ್ತೆ ಆರಂಭ ಆಗಲಿದೆ. ಈ ಚಿತ್ರದ ಬಗ್ಗೆ ಅಪ್​ಡೇಟ್​ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ. ಸಿನಿಮಾ ಪೂರ್ಣಗೊಂಡ ಬಳಿಕ ಚಿತ್ರದ ಟ್ರೇಲರ್ ರಿಲೀಸ್ ಹಾಗೂ ಸಿನಿಮಾ ರಿಲೀಸ್ ಬಗ್ಗೆ ಮಾಹಿತಿ ನೀಡುವ ಆಲೋಚನೆಯಲ್ಲಿ ತಂಡ ಇದೆ. ಕ್ಲೈಮ್ಯಾಕ್ಸ್ ಶೂಟ್​ಗೆ ಸುದೀಪ್ ರೆಡಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ