Kichcha Sudeep: ಆಸ್ಟ್ರೇಲಿಯಾದಲ್ಲಿ ಕೊಹ್ಲಿ ಆಟಕ್ಕೆ ಸಾಕ್ಷಿಯಾದ ಸುದೀಪ್​-ಪ್ರಿಯಾ; ಫೋಟೋ ವೈರಲ್

ಕಿಚ್ಚ ಸುದೀಪ್ ಹಾಗೂ ಪ್ರಿಯಾ ಇತ್ತೀಚೆಗೆ ಆಸ್ಟ್ರೇಲಿಯಾಗೆ ತೆರಳಿದ್ದಾರೆ. ಸುದೀಪ್ ಅವರಿಗೆ ಕ್ರಿಕೆಟ್ ಎಂದರೆ ಇಷ್ಟ. ಆರ್​ಸಿಬಿಯನ್ನು ಈ ಮೊದಲಿನಿಂದಲೂ ಬೆಂಬಲಿಸುತ್ತಲೇ ಬಂದಿದ್ದಾರೆ. ವಿರಾಟ್ ಕೊಹ್ಲಿ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ.

Kichcha Sudeep: ಆಸ್ಟ್ರೇಲಿಯಾದಲ್ಲಿ ಕೊಹ್ಲಿ ಆಟಕ್ಕೆ ಸಾಕ್ಷಿಯಾದ ಸುದೀಪ್​-ಪ್ರಿಯಾ; ಫೋಟೋ ವೈರಲ್
Updated By: ರಾಜೇಶ್ ದುಗ್ಗುಮನೆ

Updated on: Oct 23, 2022 | 8:34 PM

ಕಿಚ್ಚ ಸುದೀಪ್ (Kichcha Sudeep) ಅವರು ಸದ್ಯ ಸಿನಿಮಾ ಹಾಗೂ ಬಿಗ್ ಬಾಸ್ ಕೆಲಸಗಳಿಂದ ಬ್ರೇಕ್​ ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ಅವರು ಪತ್ನಿ ಪ್ರಿಯಾ (Priya) ಜತೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಇದಕ್ಕಾಗಿ ಅವರು ಆಸ್ಟ್ರೇಲಿಯಾಗೆ ತೆರಳಿದ್ದರು. ಅಲ್ಲಿಯೇ ಇದ್ದು ಭಾರತ ಹಾಗೂ ಪಾಕ್ ನಡುವಣ ವಿಶ್ವಕಪ್​ ಮ್ಯಾಚ್​ ಅನ್ನು ಸ್ಟೇಡಿಯಂನಲ್ಲೇ ವೀಕ್ಷಿಸಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಟಿ-20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಐತಿಹಾಸಿಕ ಗೆಲುವು ಕಂಡಿದೆ. ವಿರಾಟ್ ಕೊಹ್ಲಿ ಅವರ ಅಜೇಯ 82 ರನ್​ಗಳ ಆಟದಿಂದ ಪಾಕ್ ವಿರುದ್ಧ ಟೀಂ ಇಂಡಿಯಾ ಗೆಲುವು ಕಂಡಿದೆ. ಈ ಮೂಲಕ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ಗೆದ್ದು ಬೀಗಿದೆ. ವಿರಾಟ್ ಕೊಹ್ಲಿ ಅವರ ಆಟವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಸುದೀಪ್ ಕೂಡ ಕೊಹ್ಲಿ ಆಟವನ್ನು ಮೆಚ್ಚಿದ್ದಾರೆ.

ಕಿಚ್ಚ ಸುದೀಪ್ ಹಾಗೂ ಪ್ರಿಯಾ ಇತ್ತೀಚೆಗೆ ಆಸ್ಟ್ರೇಲಿಯಾಗೆ ತೆರಳಿದ್ದಾರೆ. ಸುದೀಪ್ ಅವರಿಗೆ ಕ್ರಿಕೆಟ್ ಎಂದರೆ ಇಷ್ಟ. ಆರ್​ಸಿಬಿಯನ್ನು ಈ ಮೊದಲಿನಿಂದಲೂ ಬೆಂಬಲಿಸುತ್ತಲೇ ಬಂದಿದ್ದಾರೆ. ವಿರಾಟ್ ಕೊಹ್ಲಿ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ. ಇಂದು ಆಸ್ಟ್ರೇಲಿಯಾದ ಮೆಲ್ಬೋರ್ನ್​ನಲ್ಲಿ ನಡೆದ ಭಾರತ ಹಾಗೂ ಪಾಕ್ ನಡುವಣ ಪಂದ್ಯವನ್ನು ವೀಕ್ಷಿಸಿದ್ದಾರೆ ಸುದೀಪ್. ಈ ಸಂದರ್ಭದ ಫೋಟೋಗಳು ವೈರಲ್ ಆಗಿವೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ಆಟ ಆಡುವಾಗ ಕಿರುಚಾಡಿದ ಅನುಷ್ಕಾ ಶರ್ಮಾ; ಪುತ್ರಿ ವಮಿಕಾ ರಿಯಾಕ್ಷನ್ ಹೇಗಿತ್ತು?

ಪಂದ್ಯದ ಬಳಿಕ ಸುದೀಪ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ‘ಮಹಾರಾಜ ಎಲ್ಲಿದ್ದರೂ ಮಹಾರಾಜ ತಾನೇ. ಕಿಂಗ್ ಕೊಹ್ಲಿ. ಈ ಪಂದ್ಯವನ್ನು ಸ್ಟೇಡಿಯಂನಲ್ಲಿ ಲೈವ್ ವೀಕ್ಷಿಸಿದ್ದು ನಿಜಕ್ಕೂ ಗೌರವ. ಹ್ಯಾಟ್ಸ್​ ಆಫ್​ ಹಾರ್ದಿಕ್ ಪಾಂಡ್ಯ, ಟೀಂ ಇಂಡಿಯಾ’ ಎಂದು ಬರೆದುಕೊಂಡಿದ್ದಾರೆ ಅವರು.