ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ವಿಕ್ರಾಂತ್ ರೋಣ’ ಚಿತ್ರ ಕೂಡ ಮುಂಚೂಣಿಯಲ್ಲಿದೆ. ಹಲವು ಕಾರಣಗಳಿಗಾಗಿ ಈ ಸಿನಿಮಾ ಹೈಪ್ ಸೃಷ್ಟಿ ಮಾಡಿದೆ. ರಂಗಿತರಂಗ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಅವರು ನಿರ್ದೇಶನ ಮಾಡುತ್ತಿರುವ ‘ವಿಕ್ರಾಂತ್ ರೋಣ’ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಲು ಪಾತ್ರವರ್ಗವೂ ಕಾರಣ ಆಗಿದೆ. ಈ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ನಟಿಸಿರುವುದು ವಿಶೇಷ. ಗಡಂಗ್ ರಕ್ಕಮ್ಮ ಎಂಬ ಪಾತ್ರವನ್ನು ಅವರಿಗೆ ನೀಡಲಾಗಿದೆ. ಇಂದು (ಆ.11) ಜಾಕ್ವೆಲಿನ್ ಫರ್ನಾಂಡಿಸ್ಗೆ ಜನ್ಮದಿನದ ಸಂಭ್ರಮ. ಆ ಪ್ರಯುಕ್ತ ಅವರಿಗೆ ಕಿಚ್ಚ ಸುದೀಪ್ ಶುಭಕೋರಿದ್ದಾರೆ.
ಜಾಕ್ವೆಲಿನ್ ಫರ್ನಾಂಡಿಸ್ ಅವರು ‘ವಿಕ್ರಾಂತ್ ರೋಣ’ ಚಿತ್ರತಂಡಕ್ಕೆ ಕಾಲಿಟ್ಟಾಗಿನಿಂದ ಅವರಿಗೆ ಸುದೀಪ್ ಮತ್ತು ಚಿತ್ರತಂಡದವರು ಭರ್ಜರಿ ಆತಿಥ್ಯವನ್ನೇ ನೀಡುತ್ತಿದ್ದಾರೆ. ಕಳೆದ ತಿಂಗಳು ರಕ್ಕಮ್ಮನ ಫಸ್ಟ್ಲುಕ್ ಬಿಡುಗಡೆ ಮಾಡಲಾಗಿತ್ತು. ಇಂದು ಬರ್ತ್ಡೇ ಪ್ರಯುಕ್ತ ಚಿತ್ರತಂಡದ ಕಡೆಯಿಂದ ಹೊಸ ಪೋಸ್ಟರ್ ಅನಾವರಣ ಮಾಡಲಾಗಿದೆ. ‘ನಿಮಗೆ ಸದಾ ಒಳ್ಳೆಯಾಗಲಿ ಎಂದು ಹಾರೈಸುತ್ತೇನೆ. ಹುಟ್ಟುಹಬ್ಬದ ಶುಭಾಶಯಗಳು’ ಎಂದು ಟ್ವೀಟ್ ಮಾಡಿರುವ ಸುದೀಪ್ ಅವರು ಗಡಂಗ್ ರಕ್ಕಮ್ಮ ಪಾತ್ರದ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.
Wishing you the bestttttt always @Asli_Jacqueline ??, A very happy Bday to you. #HappyBirthdayRakkamma #JacquelineFernandez #VikrantRona@KicchaSudeep @JackManjunath @shaliniartss @Alankar_Pandian @VikrantRona @GadangRakkamma #WorldGetsANewHero pic.twitter.com/Pf2GEzRI8Z
— Kichcha Sudeepa (@KicchaSudeep) August 11, 2021
ಈ ಸಿನಿಮಾದಲ್ಲಿ ಜಾಕ್ವೆಲಿನ್ ಅವರು ಕೇವಲ ಹಾಡಿನಲ್ಲಿ ಡ್ಯಾನ್ಸ್ ಮಾಡಿ ಸುಮ್ಮನಾಗಿಲ್ಲ. ಅವರದ್ದು ಒಂದು ವಿಶೇಷ ಪಾತ್ರ. ಇಂದು ರಿಲೀಸ್ ಮಾಡಿರುವ ಪೋಸ್ಟರ್ನಲ್ಲಿ ಆ ಬಗ್ಗೆ ಸುಳಿವು ನೀಡಲಾಗಿದೆ. ಜಾಕ್ವೆಲಿನ್ ಭಾವಚಿತ್ರದ ಪಕ್ಕದಲ್ಲಿ ಟಾರ್ಗೆಟ್ ಮಾಡಿರುವ ರೀತಿ ಚಾಕು ಚುಚ್ಚಲಾಗಿದೆ. ಜೊತೆಗೆ ನ್ಯೂಸ್ ಪೇಪರ್ ಕಟ್ಟಿಂಗ್ಸ್ ಇವೆ. ಅದರಲ್ಲಿ ಬಂದ ಸುದ್ದಿ ನೋಡಿದರೆ ಕಥೆಯ ಬಗ್ಗೆ ಇನ್ನಷ್ಟು ಕೌತುಕ ಮೂಡುತ್ತದೆ. ‘ಸ್ಥಳೀಯ ಸಾರಾಯಿ ಮಾರಾಟಗಾರ್ತಿ ಮೇಲೆ ಕೊಲೆ ಆರೋಪ. ಹೆಸರು: ರಾಕೆಲ್ ಡಿಕೋಸ್ತಾ ಅಲಿಯಾಸ್ ಗಡಂಗ್ ರಕ್ಕಮ್ಮ. ಜನ್ಮ ದಿನಾಂಕ: 11 ಆಗಸ್ಟ್ 1948’ ಎಂದು ಬರೆಯಲಾಗಿದೆ. ಅಂದರೆ ಈ ಸಿನಿಮಾದಲ್ಲಿ ಜಾಕ್ವೆಲಿನ್ ಅವರು ಕೊಲೆ ಆರೋಪ ಹೊತ್ತ ಸಾರಾಯಿ ಮಾರಾಟಗಾರ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಖಚಿತ ಆದಂತಾಗಿದೆ.
ಇದನ್ನೂ ಓದಿ:
‘ವಿಕ್ರಾಂತ್ ರೋಣ’ ಚಿತ್ರದ ನಟಿ ಜಾಕ್ವೆಲಿನ್ ಹಾಟ್ ಫೋಟೋ ವೈರಲ್
ವಿಕ್ರಾಂತ್ ರೋಣ ಚಿತ್ರದಲ್ಲಿ ಕಿಚ್ಚನ ಜೊತೆ ಕಿಚ್ಚು ಹೆಚ್ಚಿಸಿದ ಜಾಕ್ವೆಲಿನ್ ಫರ್ನಾಂಡಿಸ್