ಕಿಚ್ಚ ಸುದೀಪ್ (Kichcha Sudeep) ಅವರು ಕೇವಲ ಕರುನಾಡಿಗೆ ಸೀಮಿತವಾದ ನಟ ಅಲ್ಲ. ಪರಭಾಷೆಯ ಅನೇಕ ಸಿನಿಮಾಗಳಲ್ಲಿ ಕೂಡ ಅವರು ನಟಿಸಿದ್ದಾರೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಕಾರಣದಿಂದಲೂ ಅವರು ಬೇರೆ ಭಾಷೆಯ ಕಲಾವಿದರ ಜತೆ ನಂಟು ಹೊಂದಿದ್ದಾರೆ. ಅದೇ ಕಾರಣಕ್ಕೆ ಅವರಿಗೆ ಬಾಲಿವುಡ್ ನಟ ರಿತೇಶ್ ದೇಶಮುಖ್ (Riteish Deshmukh) ಜೊತೆಗೆ ಒಳ್ಳೆಯ ಸ್ನೇಹ ಇದೆ. ಇತ್ತೀಚೆಗೆ ರಿತೇಶ್ ಅವರು ಒಂದು ಹೊಸ ಸುದ್ದಿ ನೀಡಿದರು. ಇದೇ ಮೊದಲ ಬಾರಿಗೆ ತಾವು ನಿರ್ದೇಶನ ಮಾಡುವುದಾಗಿ ತಿಳಿಸಿದರು. ಆ ಚಿತ್ರಕ್ಕೆ ಅವರ ಪತ್ನಿ ಜೆನಿಲಿಯಾ ಡಿಸೋಜಾ (Genelia Dsouza) ಅವರೇ ನಾಯಕಿ. ಈ ಪತಿ-ಪತ್ನಿಯ ಈ ಸಿನಿಮಾಗೆ ಕಿಚ್ಚ ಸುದೀಪ್ ಶುಭ ಹಾರೈಸಿದ್ದಾರೆ. ಸ್ಟಾರ್ ದಂಪತಿಯ ಕೆಲಸಕ್ಕೆ ಅವರು ಪ್ರೋತ್ಸಾಹ ನೀಡಿದ್ದಾರೆ.
ಈ ಕುರಿತು ಸುದೀಪ್ ಟ್ವೀಟ್ ಮಾಡಿದ್ದಾರೆ. ‘ಇದು ಅತ್ಯಂತ ಸಿಹಿ ಸುದ್ದಿ. ನಿಮಲ್ಲಿ ಯಾವಾಗಲೂ ಪ್ರಾಮಾಣಿಕತೆ ಮತ್ತು ಪ್ಯಾಷನ್ ಇದೆ. ಈಗ ನಿರ್ದೇಶನ ಮಾಡುವ ಸಮಯ ಬಂದಿದೆ. ನಿಮ್ಮ ಈ ನಿರ್ಧಾರದಿಂದ ನನಗೆ ತುಂಬ ಖುಷಿ ಆಗಿದೆ. ಅಲ್ಟ್ರಾ ಎನರ್ಜಿ ಪ್ಯಾಕ್ ರೀತಿ ನಿಮ್ಮ ಜೊತೆ ಜೆನಿಲಿಯಾ ಇದ್ದಾರೆ. ಇದಕ್ಕಿಂತ ಇನ್ನೇನು ಬೇಕು? ನಿಮ್ಮಿಬ್ಬರಿಗೂ ನನ್ನ ಶುಭಾಶಯಗಳು. ಈ ಬಗ್ಗೆ ನಾನು ಎಗ್ಸೈಟ್ ಆಗಿದ್ದೇನೆ’ ಎಂದು ಸುದೀಪ್ ಅವರು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಸುದೀಪ್ ಕೂಡ ಮೊದಲು ನಟನಾಗಿ ಮಿಂಚಿ ನಂತರ ನಿರ್ದೇಶನದಲ್ಲೂ ಸೈ ಎನಿಸಿಕೊಂಡವರು. ಅವರ ನಿರ್ದೇಶನದಲ್ಲಿ ಬಂದ ‘ಮೈ ಆಟೋಗ್ರಾಫ್’, ‘ಮಾಣಿಕ್ಯ’ ಮುಂತಾದ ಚಿತ್ರಗಳು ಸೂಪರ್ ಹಿಟ್ ಆಗಿವೆ. ಈಗ ನಿರ್ದೇಶನದ ಪ್ರಯತ್ನಕ್ಕೆ ಕೈ ಹಾಕಿರುವ ತಮ್ಮ ಸ್ನೇಹಿತ ರಿತೇಶ್ ದೇಖಮುಖ್ಗೆ ಕಿಚ್ಚ ಶುಭ ಹಾರೈಸಿದ್ದಾರೆ.
The sweetest news.. U always had the passion and the honesty,, direction cals for my brother @Riteishd ..
So so happy about this decision of urs.
You have also topped it wth the ultra energy pack ,, @geneliad . What more is needed!!
Bst wshs to you two always.
I’m excited ?❤ https://t.co/updqrM8M4e— Kichcha Sudeepa (@KicchaSudeep) December 12, 2021
‘20 ವರ್ಷಗಳ ಕಾಲ ಕ್ಯಾಮೆರಾ ಮುಂದೆ ನಟನಾಗಿ ಕೆಲಸ ಮಾಡಿದ ನಾನು ಇದೇ ಮೊದಲ ಬಾರಿಗೆ ಕ್ಯಾಮೆರಾ ಹಿಂದೆ ನಿಂತು ನಿರ್ದೇಶನ ಮಾಡಲಿದ್ದೇನೆ. ಇದಕ್ಕೆ ನಿಮ್ಮೆಲ್ಲರ ಬೆಂಬಲ ಮತ್ತು ಆಶೀರ್ವಾದ ಬೇಡುತ್ತೇನೆ’ ಎಂದು ರಿತೇಶ್ ಪೋಸ್ಟ್ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ಜೆನಿಲಿಯಾ ಕೂಡ ಮಾಹಿತಿ ನೀಡಿದ್ದಾರೆ. ಬರೋಬ್ಬರಿ 10 ವರ್ಷಗಳ ಬಳಿಕ ನಟನೆಗೆ ಕಮ್ಬ್ಯಾಕ್ ಮಾಡುತ್ತಿರುವುದಕ್ಕೆ ಅವರು ಖುಷಿ ಹಂಚಿಕೊಂಡಿದ್ದಾರೆ. ಇದೊಂದು ಮರಾಠಿ ಸಿನಿಮಾ ಆಗಿರಲಿದ್ದು, ‘ವೇಡ್’ ಎಂದು ಶೀರ್ಷಿಕೆ ಇಡಲಾಗಿದೆ.
‘ಇದು ನನ್ನ ಮೊದಲ ಮರಾಠಿ ಸಿನಿಮಾ. 10 ವರ್ಷಗಳ ಬಳಿಕ ನಾನು ಮತ್ತೆ ನಟಿಸುತ್ತಿದ್ದೇನೆ. ನನ್ನ ಗಂಡನ ನಿರ್ದೇಶನದಲ್ಲಿ ನಟಿಸುವ ಕನಸು ನನಸಾಗುತ್ತಿದೆ’ ಎಂದು ಜೆನಿಲಿಯಾ ಬರೆದುಕೊಂಡಿದ್ದಾರೆ. ಈ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಗಿದೆ. ಅಜಯ್-ಅತುಲ್ ಅವರು ಸಂಗೀತ ನೀಡಲಿದ್ದಾರೆ.
ಇದನ್ನೂ ಓದಿ:
ಸುದೀಪ್ಗಾಗಿ ದೇವಸ್ಥಾನ: ಕಿಚ್ಚನ 4 ಅಡಿ ಮೂರ್ತಿ ಎದುರು ಪುನೀತ್ ರಾಜ್ಕುಮಾರ್ ಭಾವಚಿತ್ರ
ಕುಟುಂಬ ಸಮೇತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಕಿಚ್ಚ ಸುದೀಪ್
Published On - 7:42 am, Mon, 13 December 21