ಕಿಚ್ಚ ಸಿನಿ ಜರ್ನಿಗೆ 25 ವರ್ಷ, ನಾಳೆ ಬುರ್ಜ್ ಖಲೀಫಾದಲ್ಲಿ ಹಾರಾಡಲಿದೆ ವಿಕ್ರಾಂತ್ ರೋಣಾ ಕಟೌಟ್: ಕೆಲವೇ ಕ್ಷಣದಲ್ಲಿ ಸುದ್ದಿಗೋಷ್ಠಿ..

ಬೆಳ್ಳಿಹಬ್ಬವನ್ನು ಆಚರಿಸಿಕೊಳ್ಳಲು ದುಬೈಗೆ ತೆರಳಿರುವ ಸುದೀಪ್ ಹಾಗೂ ಚಿತ್ರತಂಡ, ಇಂದು 11 ಘಂಟೆಗೆ ವರ್ಚುವಲ್ ಆಗಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಕಿಚ್ಚ ಸಿನಿ ಜರ್ನಿಗೆ 25 ವರ್ಷ, ನಾಳೆ ಬುರ್ಜ್ ಖಲೀಫಾದಲ್ಲಿ ಹಾರಾಡಲಿದೆ ವಿಕ್ರಾಂತ್ ರೋಣಾ ಕಟೌಟ್: ಕೆಲವೇ ಕ್ಷಣದಲ್ಲಿ ಸುದ್ದಿಗೋಷ್ಠಿ..
ಸುದೀಪ್​
Edited By:

Updated on: Apr 06, 2022 | 8:32 PM

ಬೆಂಗಳೂರು: ಅಭಿನಯ ಚಕ್ರವರ್ತಿ ಸುದೀಪ್ ತಮ್ಮ ಸಿನಿ‌ಜರ್ನಿಯ 25ನೇ ವರ್ಷದ ಸಂಭ್ರಮ (ಬೆಳ್ಳಿಹಬ್ಬ) ಆಚರಿಸಿಕೊಳ್ಳುತ್ತಿದ್ದಾರೆ. ಕಿಚ್ಚ ಸಿನಿಜರ್ನಿ ಬೆಳ್ಳಿಹಬ್ಬದ ಪ್ರಯುಕ್ತ ನಾಳೆ ಜಗತ್ತಿನ ಅತಿ ಎತ್ತರದ ಕಟ್ಟಡ, ಬುರ್ಜ್ ಖಲೀಫಾದ ಮೇಲೆ  2,000 ಅಡಿ ಅತಿ ಎತ್ತರದ ಕಟೌಟ್ ರಾರಾಜಿಸಲಿದೆ. ಈ ಸಂಭ್ರಮದ ಪ್ರಯುಕ್ತ ಇಂದು (ಜ. 30) 11 ಗಂಟೆಗೆ ಸುದೀಪ್ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಬೆಳ್ಳಿಹಬ್ಬವನ್ನು ಆಚರಿಸಿಕೊಳ್ಳಲು ದುಬೈಗೆ ತೆರಳಿರುವ ಸುದೀಪ್ ಹಾಗೂ ಚಿತ್ರತಂಡ, ಇಂದು 11 ಗಂಟೆಗೆ ವರ್ಚುವಲ್ ಆಗಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಮೂರು ದಿನಗಳ ಹಿಂದೆಯೇ ದುಬೈ ತಲುಪಿರೋ ಸುದೀಪ್ ಹಾಗೂ ಚಿತ್ರತಂಡ, ನಾಳೆ ಬುರ್ಜ್ ಖಲೀಫಾದ‌ಲ್ಲಿ ಕಿಚ್ಚನ ಬೆಳ್ಳಿ ಹಬ್ಬ ಆಚರಣೆ ಮಾಡಲಿದೆ.

ಬೆಂಗಳೂರಿನ ಶಾರದಾ ಥಿಯೇಟರ್​ನಲ್ಲಿ ಸುದ್ದಿಗೋಷ್ಠಿ
ವಿಕ್ರಾಂತ್ ರೋಣ ಚಿತ್ರದ ಕಟೌಟ್ ಬುರ್ಜ್ ಖಲೀಫಾದ ಮೇಲೆ ಅನಾವರಣ ಆಗಲಿದೆ. ಬುರ್ಜ್ ಖಲೀಫಾದ ಮೇಲೆ 180 ಸೆಕೆಂಡುಗಳ ಟೀಸರ್ ರಿಲೀಸ್ ಆಗಲಿದೆ. ಬೆಳ್ಳಿಹಬ್ಬದ ಬಗ್ಗೆ ಇಂದು ಸುದೀಪ್ ಮಾಹಿತಿ ನೀಡಲಿದ್ದಾರೆ. ಸುದೀಪ್, ದುಬೈನಿಂದಲೇ ಸುದೀಪ್ ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ಬೆಂಗಳೂರಿನ ಶಾರದಾ ಥಿಯೇಟರ್​ನಲ್ಲಿ ಸುದ್ದಿಗೋಷ್ಠಿ ನಡೆಯಲಿದೆ.

Bigg Boss 8ನೇ ಸೀಸನ್ ನ ಪ್ರೋಮೊ ಶೂಟ್ ನಲ್ಲಿ ನಟ ಕಿಚ್ಚ ಸುದೀಪ್!

Published On - 11:07 am, Sat, 30 January 21