Kiran Raj: ನೀವು ನೋಡಿದ ‘ಕನ್ನಡತಿ’ ನಟ ಕಿರಣ್​ ರಾಜ್​ ಇವರೇನಾ? ‘ರಾನಿ’ ಟೀಸರ್​ನಲ್ಲಿದೆ ಬೇರೆಯದೇ ಅವತಾರ

Ronny Movie Teaser: ಅದ್ದೂರಿ ಮೇಕಿಂಗ್​, ಮೈ ನವಿರೇಳಿಸುವ ಆ್ಯಕ್ಷನ್​, ಖಡಕ್​ ಆದ ಡೈಲಾಗ್​ಗಳು ಈ ಟೀಸರ್​ನಲ್ಲಿ ಹೈಲೈಟ್​ ಆಗಿವೆ. ಅಪ್ಪಟ ಮಾಸ್​ ಹೀರೋ ಆಗಿ ಕಿರಣ್​ ರಾಜ್​ ಅವರು ಅಬ್ಬರಿಸಿದ್ದಾರೆ.

Kiran Raj: ನೀವು ನೋಡಿದ ‘ಕನ್ನಡತಿ’ ನಟ ಕಿರಣ್​ ರಾಜ್​ ಇವರೇನಾ? ‘ರಾನಿ’ ಟೀಸರ್​ನಲ್ಲಿದೆ ಬೇರೆಯದೇ ಅವತಾರ
ಕಿರಣ್​ ರಾಜ್​

Updated on: Jul 05, 2023 | 7:45 PM

ಖ್ಯಾತ ನಟ ಕಿರಣ್​ ರಾಜ್​ (Kiran Raj) ಅವರನ್ನು ‘ಕನ್ನಡತಿ’ ಸೀರಿಯಲ್​ನಲ್ಲಿ ನೋಡಿ ಜನರು ಇಷ್ಟಪಟ್ಟರು. ಸಾಫ್ಟ್​ ವ್ಯಕ್ತಿತ್ವದ ಪ್ರೇಮಿಯಾಗಿ ಅವರು ಗಮನ ಸೆಳೆದರು. ಆದರೆ ಈಗ ‘ರಾನಿ’ (Ronny Movie) ಸಿನಿಮಾದಲ್ಲಿ ಅವರ ಗೆಟಪ್​ ಸಂಪೂರ್ಣ ಬದಲಾಗಿದೆ. ತುಂಬ ಮಾಸ್​ ಆಗಿ ಅವರು ಜನರ ಮುಂದೆ ಬರಲು ಸಜ್ಜಾಗಿದ್ದಾರೆ. ಆ ಸಿನಿಮಾದ ಝಲಕ್​ ಹೇಗಿರಲಿದೆ ಎಂಬುದನ್ನು ಪೋಸ್ಟರ್​ ಮೂಲಕ ತೋರಿಸಲಾಗಿತ್ತು. ಈಗ ‘ರಾನಿ’ ಸಿನಿಮಾದ ಟೀಸರ್​ (Ronny Teaser) ಬಿಡುಗಡೆ ಆಗಿದೆ. ಅದರಲ್ಲಿ ಕಿರಣ್ ರಾಜ್​ ಅವರನ್ನು ನೋಡಿದ ಎಲ್ಲರಿಗೂ ಅಚ್ಚರಿ ಆಗಿದೆ. ‘ನಾವು ಸೀರಿಯಲ್​ನಲ್ಲಿ ನೋಡಿದ ಕಿರಣ್​ ರಾಜ್​ ಇವರೇನಾ’ ಎಂಬ ಪ್ರಶ್ನೆ ಮೂಡುವ ರೀತಿಯಲ್ಲಿ ಅವರು ರಗಡ್​ ಅವತಾರ ತಾಳಿದ್ದಾರೆ. ಕಿರಣ್​ ರಾಜ್​ ಅವರ ಜನ್ಮದಿನದ ಪ್ರಯುಕ್ತ ಇಂದು (ಜುಲೈ 5) ಈ ಟೀಸರ್​ ಬಿಡುಗಡೆ ಆಗಿದೆ.

‘ರಾನಿ’ ಸಿನಿಮಾಗೆ ಗುರುತೇಜ್​ ಶೆಟ್ಟಿ ಅವರು ನಿರ್ದೇಶನ ಮಾಡಿದ್ದಾರೆ. ಚಂದ್ರಕಾಂತ್​ ಪೂಜಾರಿ ಮತ್ತು ಉಮೇಶ್​ ಹೆಗ್ಡೆ ಅವರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಪಾತ್ರವರ್ಗದಲ್ಲಿ ಕಿರಣ್​ ರಾಜ್​, ರವಿಶಂಕರ್​, ಬಿ. ಸುರೇಶ, ಉಗ್ರಂ ಮಂಜು, ಯಶ್​ ಶೆಟ್ಟಿ, ಮೈಕೋ ನಾಗರಾಜ್​, ಉ್ರಗಂ ರವಿ, ಧರ್ಮಣ್ಣ ಮುಂತಾದವರು ಇದ್ದಾರೆ. ಈ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗುತ್ತಿವೆ. ಕಿರಣ್​ ರಾಜ್​ ಅವರ ಅಭಿಮಾನಿಗಳು ಈ ಸಿನಿಮಾ ಮೇಲೆ ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಟೀಸರ್​ ನೋಡಿದ ಬಳಿಕ ಆ ನಿರೀಕ್ಷೆ ಡಬಲ್​ ಆಗಿದೆ.

RONNY OFFICIAL TEASER | Kiran Raj | Star Creations | Gurutej Shetty | Samiksha |

ಒಂದು ಅಂಡರ್​ವರ್ಲ್ಡ್​ ಕಥೆಯನ್ನು ‘ರಾನಿ’ ಸಿನಿಮಾದಲ್ಲಿ ತೋರಿಸಲಾಗುವುದು ಎಂಬುದಕ್ಕೆ ಟೀಸರ್​ನಲ್ಲಿ ಸುಳಿವು ಸಿಕ್ಕಿದೆ. ಅದ್ದೂರಿ ಮೇಕಿಂಗ್​, ಮೈ ನವಿರೇಳಿಸುವ ಆ್ಯಕ್ಷನ್​, ಖಡಕ್​ ಆದ ಡೈಲಾಗ್​ಗಳು ಈ ಟೀಸರ್​ನಲ್ಲಿ ಹೈಲೈಟ್​ ಆಗಿವೆ. ಅಪ್ಪಟ ಮಾಸ್​ ಹೀರೋ ಆಗಿ ಕಿರಣ್​ ರಾಜ್​ ಅವರು ಅಬ್ಬರಿಸಿದ್ದಾರೆ. ಫೈಟಿಂಗ್​ ದೃಶ್ಯಗಳಲ್ಲಿ ಆರ್ಭಟಿಸಿದ್ದಾರೆ. ‘ನಾನು ನಾನಾಗೋಕೆ ಬಂದಿದ್ದೇನೆ. ಡಾನ್​ ಆಗೋಕೆ ಬಂದಿಲ್ಲ’ ಎಂಬ ಡೈಲಾಗ್​ ಇಲ್ಲಿದೆ. ಹಾಗಾದರೆ ಕಥಾನಾಯಕ ಅಂಡರ್​ವರ್ಲ್ಡ್​ಗೆ ಹೇಗೆ ಎಂಟ್ರಿ ನೀಡುತ್ತಾನೆ ಎಂಬುದನ್ನು ತಿಳಿಯುವ ಕುತೂಹಲ ಮೂಡಿದೆ.

ಇದನ್ನೂ ಓದಿ: Kiran Raj: ‘ಕನ್ನಡತಿ’ ಸೀರಿಯಲ್ ನಟ​ ಕಿರಣ್​ ರಾಜ್​ ಹುಟ್ಟುಹಬ್ಬಕ್ಕೆ ಹರಿದುಬಂತು ಶುಭಾಶಯಗಳ ಮಹಾಪೂರ

ಈ ಚಿತ್ರಕ್ಕೆ ಮಣಿಕಾಂತ್​ ಖದ್ರಿ ಅವರು ಸಂಗೀತ ನೀಡಿದ್ದಾರೆ. ಸಚಿನ್​ ಬಸ್ರೂರು ಅವರ ಹಿನ್ನೆಲೆ ಸಂಗೀತ ಇದೆ. ರಾಘವೇಂದ್ರ ಬಿ. ಕೋಲಾರ ಅವರು ಛಾಯಾಗ್ರಹಣ ಮಾಡಿದ್ದಾರೆ. ಎಕ್ಸಿಕ್ಯೂಟಿವ್​ ಪ್ರೊಡ್ಯೂಸರ್​ ಆಗಿ ಗಿರೀಶ್​ ಹೆಗ್ಡೆ ಕೆಲಸ ಮಾಡಿದ್ದಾರೆ. ವಿನೋದ್​ ಅವರ ಸಾಹಸ ನಿರ್ದೇಶನ, ಎ. ಸತೀಶ್​ ಕಲಾ ನಿರ್ದೇಶನ, ಉಮೇಶ್​​ ಆರ್​.ಬಿ. ಅವರ ಸಂಕಲನ ‘ರಾನಿ’ ಚಿತ್ರಕ್ಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us