‘ದುರ್ಯೋಧನನ ಪಾತ್ರದಿಂದಲೇ ನಟ ದರ್ಶನ್​​ಗೆ ಅಹಂ ಭಾವ ಹೆಚ್ಚಾಗಿದೆ’; ಹೀಗೊಂದು ನಂಬಿಕೆ

| Updated By: ರಾಜೇಶ್ ದುಗ್ಗುಮನೆ

Updated on: Jul 21, 2021 | 4:00 PM

2019ರಲ್ಲಿ ತೆರೆಗೆ ಬಂದ ‘ಕುರುಕ್ಷೇತ್ರ’  ಸಿನಿಮಾದಲ್ಲಿ ದರ್ಶನ್​ ಅವರು ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಾಗಣ್ಣ ನಿರ್ದೇಶನದ ಈ ಸಿನಿಮಾಗೆ ಮುನಿರತ್ನ ಅವರು ಬಂಡವಾಳ ಹೂಡಿದ್ದರು.

‘ದುರ್ಯೋಧನನ ಪಾತ್ರದಿಂದಲೇ ನಟ ದರ್ಶನ್​​ಗೆ ಅಹಂ ಭಾವ ಹೆಚ್ಚಾಗಿದೆ’; ಹೀಗೊಂದು ನಂಬಿಕೆ
‘ದುರ್ಯೋಧನನ ಪಾತ್ರದಿಂದಲೇ ನಟ ದರ್ಶನ್​​ಗೆ ಅಹಂ ಭಾವ ಹೆಚ್ಚಾಗಿದೆ’; ಹೀಗೊಂದು ನಂಬಿಕೆ
Follow us on

ನಟ ದರ್ಶನ್​ ಇತ್ತೀಚೆಗೆ ಸಾಕಷ್ಟು ವಿವಾದಗಳಿಗೆ ತುತ್ತಾಗಿದ್ದಾರೆ. ಅವರು ಸಾಕಷ್ಟು ಜನರ ಮೆಲೆ ಕೋಪಗೊಂಡಿದ್ದೂ ಇದೆ. ಈ ಸಿಟ್ಟಿಗೆ ದರ್ಶನ್​ ಮಾಡಿದ ದುರ್ಯೋಧನನ ಪಾತ್ರವೇ ಕಾರಣವಂತೆ! ಮಂಡ್ಯ ತಾಲೂಕಿನ ಉಪ್ಪರಕನಹಳ್ಳಿ  ಗ್ರಾಮಸ್ಥರು ಹೀಗೊಂದು ಅಭಿಪ್ರಾಯ ಪಟ್ಟಿದ್ದಾರೆ.

2019ರಲ್ಲಿ ತೆರೆಗೆ ಬಂದ ‘ಕುರುಕ್ಷೇತ್ರ’  ಸಿನಿಮಾದಲ್ಲಿ ದರ್ಶನ್​ ಅವರು ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಾಗಣ್ಣ ನಿರ್ದೇಶನದ ಈ ಸಿನಿಮಾಗೆ ಮುನಿರತ್ನ ಅವರು ಬಂಡವಾಳ ಹೂಡಿದ್ದರು. ಈ ದುರ್ಯೋಧನನ ಪಾತ್ರ ದರ್ಶನ್​ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿದೆ ಅನ್ನೋದು ಗ್ರಾಮಸ್ಥರ ಅಭಿಪ್ರಾಯ.

‘ದುರ್ಯೋಧನನ ಪಾತ್ರ ಮಾಡಿದವರಿಗೆ ಅಹಂ ಭಾವ ಜಾಸ್ತಿಯಾಗುತ್ತದೆ. ಆ ಪಾತ್ರ ಮಾಡಿದವರು ಯಾರ ಮಾತನ್ನೂ ಕೇಳೋದಿಲ್ಲ. ಅವರು ಹೇಳಿದ್ದೇ ನಡೆಯಬೇಕು, ಅವರು ಹೇಳಿದ್ದೇ ಸರಿ ಅನ್ನುತ್ತಾರೆ. ನಮ್ಮ ಗ್ರಾಮದಲ್ಲಿ ದುರ್ಯೋಧನನ ಪಾತ್ರ ಮಾಡಿದ ಮೂವರು ಸಂಕಷ್ಟಕ್ಕೆ ಸಿಲುಕಿದ್ದರು. ಬಳಿಕ ಬೇರೆ ಪಾತ್ರ ಮಾಡಿದಮೇಲೆ ಸಂಕಷ್ಟ ನಿವಾರಣೆ ಆಯ್ತು’ ಎನ್ನುತ್ತಾರೆ ಈ ಗ್ರಾಮದವರು.

ಕಳೆದ ಹಲವು ವರ್ಷಗಳ ಹಿಂದೆ ಈ ಗ್ರಾಮದ ಚೌಡೇಗೌಡ, ಮಹಾದೇವಪ್ಪ ಹಾಗೂ ನಾಗರಾಜು ಎಂಬುವವರು ನಾಟಕದಲ್ಲಿ ದುರ್ಯೊಧನನ ಪಾತ್ರ ಮಾಡಿದ್ದರು. ಅಚ್ಚರಿ ಎಂಬಂತೆ, ನಾಟಕ ಮಾಡಿದ ನಂತರವೂ ಅವರಲ್ಲಿ ದುರ್ಯೋಧನನ ಗುಣ ಹೋಗಿರಲಿಲ್ಲ. ‘ನಮ್ಮಲ್ಲಿ ಅಹಂ ಭಾವ ಹೆಚ್ಚಾಗಿತ್ತು. ಈ ಗುಣದಿಂದ ನಮ್ಮ ಜೀವನದಲ್ಲಿ ಸಾಕಷ್ಟು ತೊಂದರೆಗಳು ಉಂಟಾದವು. ಬೇರೆ ಪೌರಾಣಿಕ ಪಾತ್ರಗಳನ್ನು ಮಾಡಿದ ಮೇಲೆ ನಮ್ಮ ಮನಸ್ಥಿತಿ ಸರಿ ಆಯಿತು. ಬದುಕು ಸುಧಾರಿಸಿತು. ಈಗ ನಟ ದರ್ಶನ್​​ಗೂ ಅದೇ ಆಗಿದೆ. ಅವರು ಕುರುಕ್ಷೇತ್ರ ಸಿನಿಮಾ‌ದಲ್ಲಿ ದುರ್ಯೋಧನನ‌ ಪಾತ್ರ ಮಾಡಿದ್ದಾರೆ. ಪಾತ್ರದ ಛಾಯೆ ಅವರ ಮೇಲಿರುವುದರಿಂದ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಬೇರೆ ಪೌರಾಣಿಕ ಪಾತ್ರ ಮಾಡಿದರೆ ಅವರಲ್ಲಿ ಬದಲಾವಣೆ ಆಗಲಿದೆ’ ಎನ್ನುತ್ತಾರೆ ಈ ಪಾತ್ರ ಮಾಡಿದವರು.

ಇದನ್ನೂ ಓದಿ: ವಂಚನೆ ಪ್ರಕರಣದ ಮೂಲ ಅರಿಯಲು ಕೈ ಜೋಡಿಸಿದರಾ ದರ್ಶನ್- ಉಮಾಪತಿ?

‘ದರ್ಶನ್​-ಇಂದ್ರಜಿತ್​ರನ್ನು ಐದು ವರ್ಷ ಚಿತ್ರರಂಗದಿಂದ ಬ್ಯಾನ್​ ಮಾಡಿ’; ಕೇಳಿ ಬಂತು ಹೊಸ ಆಗ್ರಹ