‘ಟಾಕ್ಸಿಕ್ ರಿಲೀಸ್ ಆಗುವ ಮುನ್ನ ಈ ಕೆಲಸ ಮಾಡಿ’; KVNಗೆ ಬೇಡಿಕೆ ಇಟ್ಟ ಫ್ಯಾನ್ಸ್

ಕೆವಿಎನ್ ಪ್ರೊಡಕ್ಷನ್ಸ್‌ನ 'ಜನ ನಾಯಗನ್', 'ಟಾಕ್ಸಿಕ್' ಮತ್ತು 'ಕೆಡಿ' ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದರೂ, ಅನೇಕ ವಿಘ್ನಗಳನ್ನು ಎದುರಿಸುತ್ತಿವೆ. 'ಜನ ನಾಯಗನ್' ಸೆನ್ಸಾರ್ ವಿಳಂಬದಿಂದ, 'ಟಾಕ್ಸಿಕ್' ರಿಲೀಸ್ ಮುಂದೂಡಿಕೆಯಿಂದ, 'ಕೆಡಿ' ವಿವಾದಗಳಿಂದ ಸುದ್ದಿಯಲ್ಲಿದೆ. ಈ ನಿರಂತರ ಸಮಸ್ಯೆಗಳಿಂದ ಅಭಿಮಾನಿಗಳು ಕಳವಳಗೊಂಡಿದ್ದು, 'ಟಾಕ್ಸಿಕ್' ಚಿತ್ರಕ್ಕೆ ಹೋಮ ಮಾಡಿಸುವಂತೆ ಬೇಡಿಕೆ ಇಟ್ಟಿದ್ದಾರೆ.

‘ಟಾಕ್ಸಿಕ್ ರಿಲೀಸ್ ಆಗುವ ಮುನ್ನ ಈ ಕೆಲಸ ಮಾಡಿ’; KVNಗೆ ಬೇಡಿಕೆ ಇಟ್ಟ ಫ್ಯಾನ್ಸ್
ಯಶ್​-ವೆಂಕಟ್

Updated on: Apr 25, 2026 | 3:00 PM

ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆ ‘ಕೆವಿಎನ್’ ಮೂರು ಬಿಗ್ ಬಜೆಟ್ ಚಿತ್ರಗಳನ್ನು ಘೋಷಣೆ ಮಾಡಿದಾಗಲೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿತ್ತು. ಈ ಚಿತ್ರಗಳಿಗೆ ‘ಜನ ನಾಯಗನ್’, ‘ಟಾಕ್ಸಿಕ್’, ‘ಕೆಡಿ’ ಎಂದು ಟೈಟಲ್ ಕೊಡಲಾಗಿದೆ. ಜನವರಿಯಲ್ಲಿ ಒಂದು, ಮಾರ್ಚ್ ಅಲ್ಲಿ ಒಂದು ಹಾಗೂ ಏಪ್ರಿಲ್ ಅಂತ್ಯಕ್ಕೊಂದು ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಪ್ಲ್ಯಾನ್ ಎಲ್ಲವೂ ಉಲ್ಟಾ ಆಗಿದೆ. ಒಂದಾದ ಬಳಿಕ ಒಂದು ವಿಘ್ನ ಈ ಚಿತ್ರಗಳಿಗೆ ಎದುರಾಗುತ್ತಿದೆ. ಹೀಗಾಗಿ, ಅಭಿಮಾನಿಗಳು ಕೋರಿಕೆ ಒಂದನ್ನು ಇಟ್ಟಿದ್ದಾರೆ.

ಜನವರಿ 9ರಂದು ತಮಿಳಿನ ‘ಜನ ನಾಯಗನ್’ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರವೇ ಸಿಕ್ಕಿಲ್ಲ. ಡಿಸೆಂಬರ್​​ನಲ್ಲಿಯೇ ಚಿತ್ರ ತಂಡದವರು ಸೆನ್ಸಾರ್ ಮಂಡಳಿಗೆ ಸಿನಿಮಾ ಸಲ್ಲಿಕೆ ಮಾಡಿದ್ದರು. ಇಂದು ಏಪ್ರಿಲ್ 25. ಅಂದರೆ ಒಂದು ಸಿನಿಮಾಗೆ ಐದು ತಿಂಗಳಾದರೂ ಸೆನ್ಸಾರ್ ಮಂಡಳಿಯವರು ಪ್ರಮಾಣಪತ್ರ ಕೊಟ್ಟಿಲ್ಲ ಎಂಬುದು ದುರಂತವೇ ಸರಿ. ಈ ಸಿನಿಮಾ ಬಿಡುಗಡೆ ಇನ್ನೂ ಯಾವಾಗ ಎಂದು ಘೋಷಣೆ ಆಗಿಲ್ಲ.

‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ತೆರೆಗೆ ಬರಬೇಕಿತ್ತು. ಆದರೆ, ಇದರ ರಿಲೀಸ್ ದಿನಾಂಕ ಜೂನ್ 4ಕ್ಕೆ ಮುಂದಕ್ಕೆ ಹೋಗಿದೆ. ಇದಕ್ಕೆ ವಾರ್ ಕಾರಣವನ್ನು ತಂಡದವರು ನೀಡಿದರೂ, ಅಭಿಮಾನಿಗಳು ಸಂಪೂರ್ಣವಾಗಿ ಇದನ್ನು ಒಪ್ಪಿಕೊಳ್ಳಲು ರೆಡಿ ಇಲ್ಲ. ಇದರ ಹಿಂದೆ ಕಾಣದ ಕಾರಣ ಇರಬಹುದು ಎಂದು ಊಹಿಸಿದ್ದಾರೆ.

ಈಗ ‘ಕೆಡಿ’ ಸಿನಿಮಾ ರಿಲೀಸ್ ಆಗುತ್ತಿದೆ. ಏಪ್ರಿಲ್ 30ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಈ ಮೊದಲು ರಿಲೀಸ್ ಆದ ‘ಸರ್ಸೆ ಸರ್ಸೆ..’ ಹಾಡು ವಿವಾದ ಸೃಷ್ಟಿ ಮಾಡಿ ಅದನ್ನು ಯೂಟ್ಯೂಬ್​​ನಿಂದಲೇ ತೆಗೆಯಬೇಕಾಯಿತು. ಇತ್ತೀಚೆಗೆ ತೆರೆಗೆ ಬಂದ ಟ್ರೇಲರ್ ಕೂಡ ತೆಗೆದು, ಹೊಸ ಟ್ರೇಲರ್ ಅಪ್​ಲೋಡ್ ಮಾಡಲಾಗಿದೆ.

ಇದನ್ನೂ ಓದಿ: ಕಾಣಿಸುತ್ತಿಲ್ಲ ‘ಕೆಡಿ’ ಸಿನಿಮಾ ಟ್ರೇಲರ್; ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಗೆ ಇನ್ನೊಂದು ವಿಘ್ನ

ಈ ಬೆಳವಣಿಗೆ ಯಶ್ ಅಭಿಮಾನಿಗಳಿಗೆ ಆತಂಕ ಮೂಡಿಸಿದೆ. ಹೀಗಾಗಿ, ‘ಟಾಕ್ಸಿಕ್’ ರಿಲೀಸ್​ಗೂ ಮೊದಲೇ ಒಂದು ಹೋಮ-ಹವನ ಮಾಡಿಸುವಂತೆ ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ. ಕೆವಿಎನ್​ ಅಂತಹ ದೊಡ್ಡ ಸಂಸ್ಥೆಗೆ ಹೀಗಾದರೆ ಹೇಗೆ ಎಂಬ ಪ್ರಶ್ನೆಯನ್ನು ಅನೇಕರು ಕೇಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us