ಪುನೀತ್ ರಾಜ್ಕುಮಾರ್ ಖ್ಯಾತಿ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ದೇಶ-ವಿದೇಶದಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಮೃತಪಟ್ಟ ನಂತರದಲ್ಲಿ ವಿದೇಶದಲ್ಲೂ ಅವರ ಬಗ್ಗೆ ಸುದ್ದಿಗಳು ಪ್ರಕಟವಾದವು. ಇನ್ನು, ಪುನೀತ್ ಸಮಾಧಿ ದರ್ಶನಕ್ಕೆ ರಾಜ್ಯದ ಮೂಲೆಮೂಲೆಯಿಂದಲೂ ಅಭಿಮಾನಿಗಳು ಬರುತ್ತಿದ್ದಾರೆ. ಅವರ ಸಮಾಧಿ ಎದುರು ಫ್ಯಾನ್ಸ್ ಭಾವುಕರಾಗುತ್ತಿರುವ ದೃಶ್ಯ ಕಂಡು ಬರುತ್ತಲೇ ಇದೆ. ಇಂದು ಅಪ್ಪು ಸಮಾಧಿಗೆ ಲಕ್ಷ್ಮೀ ನಾರಾಯಣ ಅವರು ಕೂಡ ಭೇಟಿ ನೀಡಿದ್ದಾರೆ.
‘ಪುನೀತ್ ರಾಜ್ಕುಮಾರ್ ಅವರು ಬಲಗೈಯಲ್ಲಿ ಕೊಟ್ಟಿದ್ದನ್ನು ಎಡಗೈಗೆ ಗೊತ್ತಾಗದಂತೆ ನೋಡಿಕೊಂಡಿದ್ದಾರೆ. ಹೀಗಿರುವಾಗ ಚಿನ್ನದ ಸರದ ಬಗ್ಗೆ ಹೇಳೋಕೆ ಇಷ್ಟ ಇಲ್ಲ. ಆದರೆ, ನೀವು ಕೇಳುತ್ತಿರುವುದಕ್ಕೆ ಹೇಳುತ್ತಿದ್ದೇನೆ’ ಎಂದು ಮಾತು ಆರಂಭಿಸಿದರು ಲಕ್ಷ್ಮೀ ನಾರಾಯಣ.
‘ನಾನು ವ್ಯಕ್ತಿತ್ವ ಬೆಳೆಸಿಕೊಳ್ಳುವುದು ಹೇಗೆ ಎನ್ನುವುದನ್ನು ವಿದ್ಯಾರ್ಥಿಗಳಿಗೆ ಹೇಳುತ್ತೇನೆ. ಮಾರ್ವಾಡಿಗಳಿಗೆ ಮಾತ್ರ ದುಡ್ಡು ಮಾಡುವುದು ಗೊತ್ತು. ಕನ್ನಡದವರಿಗೆ ದುಡ್ಡು ಹೇಗೆ ಗಳಿಸಬೇಕು ಎಂಬುದು ಗೊತ್ತಿಲ್ಲ. ಇಷ್ಟೊಂದು ಚಿನ್ನವನ್ನು ಹೇಗೆ ಗಳಿಸಬೇಕು ಎಂಬುದನ್ನು ನಾನು ಹೇಳಿ ಕೊಡ್ತೀನಿ. ವ್ಯಾಪಾರ ಹೇಗೆ ಮಾಡಬೇಕು, ದುಡ್ಡು ಹೇಗೆ ಮಾಡಬೇಕು ಎಂಬುದನ್ನು ನಾನು ಕಲಿಸಿಕೊಡ್ತೀನಿ. ಎಲ್ಲರೂ ಸರ್ಕಾರಿ ಕೆಲಸ ಎಂದು ಹೋಗ್ತಾರೆ. ಆದರೆ, ರೈತನಾಗಿಯೇ ದುಡ್ಡು ಮಾಡೋದು ಹೇಗೆ ಎನ್ನುವುದನ್ನು ನಾನು ಹೇಳಿ ಕೊಡ್ತೀನಿ’ ಎಂದಿದ್ದಾರೆ ಲಕ್ಷ್ಮೀ ನಾರಾಯಣ.
ಇದನ್ನೂ ಓದಿ: ‘ನಾನೂ ಅಪ್ಪು ಸಿನಿಮಾ ನೋಡುತ್ತಿದ್ದೆ’; ಪುನೀತ್ ಸಮಾಧಿ ದರ್ಶನಕ್ಕೆ ಅಮೆರಿಕದಿಂದ ಬಂದ ಅಭಿಮಾನಿ