ಕನ್ನಡದಲ್ಲೂ ಬಿಡುಗಡೆ ಆಗಲಿದೆ ಮಂಚು ಲಕ್ಷ್ಮೀ ನಟನೆಯ ‘ಆದಿಪರ್ವ’ ಸಿನಿಮಾ

|

Updated on: Mar 04, 2024 | 9:23 PM

‘ಆದಿಪರ್ವ’ ಸಿನಿಮಾದ ಪೋಸ್ಟರ್​ ಕೌತುಕ ಮೂಡಿಸುವಂತಿದೆ. ನಟಿ ಮಂಚು ಲಕ್ಷ್ಮೀ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಪೋಸ್ಟರ್​ನಲ್ಲಿ ಅವರ ಗೆಟಪ್​ ಗಮನ ಸೆಳೆಯುತ್ತಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರ ಕನ್ನಡದಲ್ಲೂ ಬಿಡುಗಡೆ ಆಗಲಿದೆ. ‘ಆದಿಪರ್ವ’ ಸಿನಿಮಾ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..

ಕನ್ನಡದಲ್ಲೂ ಬಿಡುಗಡೆ ಆಗಲಿದೆ ಮಂಚು ಲಕ್ಷ್ಮೀ ನಟನೆಯ ‘ಆದಿಪರ್ವ’ ಸಿನಿಮಾ
ಲಕ್ಷ್ಮೀ ಮಂಚು
Follow us on

ಟಾಲಿವುಡ್ ನಟ ಮೋಹನ್ ಬಾಬು ಅವರ ಪುತ್ರಿ ಮಂಚು ಲಕ್ಷ್ಮೀ (Lakshmi Manchu) ಅವರು ‘ಆದಿಪರ್ವ’ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಡುತ್ತಿದ್ದಾರೆ. ಈ ಸಿನಿಮಾ ಕನ್ನಡ ಸೇರಿದಂತೆ ಒಟ್ಟು 5 ಭಾಷೆಗಳಲ್ಲಿ ಮೂಡಿಬರುತ್ತಿದೆ. ಸಂಜೀವ್ ಕುಮಾರ್ ಮೆಗೋಟಿ ಅವರು ‘ಆದಿಪರ್ವ’ (Adiparva Movie) ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ‘ಅನ್ವಿಕಾ ಆರ್ಟ್ಸ್’ ಹಾಗೂ ‘ಅಮೆರಿಕಾ ಇಂಡಿಯಾ ಎಂಟರ್‌ಟೈನ್‌ಮೆಂಟ್’ (ಎ.ಐ ಎಂಟರ್‌ಟೈನ್‌ಮೆಂಟ್ ) ಬ್ಯಾನರ್ ಮೂಲಕ ನಿರ್ಮಾಣ ಆಗುತ್ತಿರುವ ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆ ಆಗಲಿದೆ.

ಮಂಚು ಲಕ್ಷ್ಮೀ ಮಾತ್ರವಲ್ಲದೇ ಎಸ್ತರ್, ಸತ್ಯಪ್ರಕಾಶ್ ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡ, ತಮಿಳು, ಮರಾಠಿ, ಮಲಯಾಳಂ ಹಾಗೂ ಹಿಂದಿ ಚಿತ್ರರಂಗದ ನಟ-ನಟಿಯರು ‘ಆದಿಪರ್ವ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಕನ್ನಡಿಗ ಹರೀಶ್ ಅವರು ಈ ಚಿತ್ರಕ್ಕೆ ಛಾಯಗ್ರಹಣ ಮಾಡಿದ್ದಾರೆ. ರಾಮ್ ಸುಧಿ (ಸುಧೀಂದ್ರ) ಅವರು ಸಂಭಾಷಣೆ ಹಾಗೂ ಸಾಹಿತ್ಯ ಬರೆದಿದ್ದಾರೆ.

‘ಆದಿಪರ್ವ’ ಸಿನಿಮಾದಲ್ಲಿ ಬಹು ತಾರಾಗಣ ಇದೆ. ವಿಶೇಷ ಏನೆಂದರೆ, ಈ ಸಿನಿಮಾ 2 ಭಾಗಗಳಲ್ಲಿ ಬಿಡುಗಡೆ ಆಗಲಿದೆ. ಆ ಮೂಲಕ ಪ್ರೇಕ್ಷಕರಿಗೆ ಬ್ಯಾಕ್​ ಟು ಬ್ಯಾಕ್​ ಮನರಂಜನೆ ನೀಡಲಿದೆ. ಮಾರ್ಚ್ 8ರಂದು ಶಿವರಾತ್ರಿ ಹಬ್ಬದ ಪ್ರಯುಕ್ತ ಈ ಸಿನಿಮಾದ ಟ್ರೇಲರ್ ಬಿಡುಗಡೆ ಆಗಲಿದೆ. ಅದೇ ದಿನ ಒಂದು ಸಾಂಗ್​ ರಿಲೀಸ್​ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ. ಏಪ್ರಿಲ್ ತಿಂಗಳ 2ನೇ ವಾರದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಆದಿಪರ್ವ’ ಸಿನಿಮಾ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಈಗಲೇ ಸಿಕ್ಕಿದೆ ‘ಶೈತಾನ್​’ ಅಬ್ಬರಿಸುವ ಸೂಚನೆ; ಜೋರಾಗಿದೆ ಅಡ್ವಾನ್ಸ್​ ಬುಕಿಂಗ್​

ರವಿ ಕಿರಣ್ ನಿರ್ದೇಶನ ಮಾಡಿದ್ದ ‘ಬದುಕು’ ಚಿತ್ರಕ್ಕೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುವ ಮೂಲಕ ಕನ್ನಡದ ಸಿನಿಪ್ರಿಯರಿಗೆ ಪರಿಚಿತವಾದ ಸಂಜೀವ್ ಕುಮಾರ್ ಮೆಗೋಟಿ ಅವರು, ನಂತರ ಪೂಜಾ ಗಾಂಧಿ ನಟನೆಯ ‘ಆಪ್ತ’, ‘ಕ್ಯೂ’ ಚಿತ್ರಗಳನ್ನು ನಿರ್ದೇಶಿಸಿದರು. ಕಳೆದ 8 ವರ್ಷಗಳಿಂದ ತೆಲುಗು ಹಾಗೂ ಕನ್ನಡ ಚಿತ್ರರಂಗದಲ್ಲಿ ಅವರು ಆ್ಯಕ್ಟೀವ್​ ಆಗಿದ್ದಾರೆ. 50ಕ್ಕೂ ಹೆಚ್ಚು ಧಾರಾವಾಹಿಗಳಿಗೆ ಕಥೆ, ಚಿತ್ರಕಥೆ ಬರೆದಿದ್ದಾರೆ. ತಮ್ಮದೇ ಬ್ಯಾನರ್ ಹೊಂದಿರುವ ಅವರು ಧಾರಾವಾಹಿಗಳನ್ನು ನಿರ್ಮಿಸುತ್ತಿದ್ದಾರೆ. ಈಗ ಬಹುದಿನಗಳ ಬಳಿಕ ಹಿರಿತೆರೆಗೆ ಮರಳಿದ್ದು, ‘ಆದಿಪರ್ವ’ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.