ಮೇ 30ರಿಂದ ‘ಪ್ರೇಮಲೋಕ 2’ ಶೂಟಿಂಗ್; 25 ಸಾಂಗ್, ಜನಸಾಮಾನ್ಯರಿಗೂ ನಟಿಸೋ ಅವಕಾಶ
ಕೊಪ್ಪಳದ ಕನಕಗಿರಿ ಉತ್ಸವದಲ್ಲಿ ರವಿಚಂದ್ರನ್ ಅವರು ‘ಪ್ರೇಮಲೋಕ 2’ ಬಗ್ಗೆ ಮಾತನಾಡಿದ್ದಾರೆ. ‘ಪ್ರೇಮಲೋಕ’ ಸಿನಿಮಾದಲ್ಲಿ 11 ಹಾಡುಗಳು ಇದ್ದವು. ಈ ಚಿತ್ರದಲ್ಲಿ 25 ಹಾಡುಗಳು ಇರಲಿವೆ. ‘ಪ್ರೇಮಲೋಕದ ಗೆಲುವು ನಿಮ್ಮದು. ಆ ಸಿನಿಮಾ ನಿಮ್ಮದು. ನೀವು ಗೆಲ್ಲಿಸಿರೋದು. ಮತ್ತೆ ಪ್ರೇಮಲೋಕ ಸೃಷ್ಟಿ ಮಾಡಬೇಕು ಎನ್ನುವ ಆಸೆ ನನ್ನದು’ ಎಂದಿದ್ದಾರೆ ರವಿಚಂದ್ರನ್. ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.
1987ರಲ್ಲಿ ರಿಲೀಸ್ ಆದ ‘ಪ್ರೇಮಲೋಕ’ ಸಿನಿಮಾ (PremaLoka Movie) ಸೂಪರ್ ಹಿಟ್ ಆಯಿತು. ಈ ಚಿತ್ರವನ್ನು ರವಿಚಂದ್ರನ್ ಅವರೇ ನಿರ್ಮಾಣ ಮಾಡಿ, ನಟಿಸಿ, ನಿರ್ದೇಶನ ಮಾಡಿದ್ದರು. ಈ ಸಿನಿಮಾ ಅಂದಿನಕಾಲದಲ್ಲಿ ದೊಡ್ಡ ಮಟ್ಟದ ಗೆಲುವು ಪಡೆದಿತ್ತು. ಈ ಚಿತ್ರದಿಂದ ರವಿಚಂದ್ರನ್ ಖ್ಯಾತಿ ಹೆಚ್ಚಿತು. ಈಗ ರವಿಚಂದ್ರನ್ ಅವರು ‘ಪ್ರೇಮಲೋಕ 2’ ಮಾಡಲು ಹೊರಟಿದ್ದಾರೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಕೊಪ್ಪಳದ ಕನಕಗಿರಿ ಉತ್ಸವದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.
‘ಪ್ರೇಮಲೋಕ’ ಸಿನಿಮಾದಲ್ಲಿ 11 ಹಾಡುಗಳು ಇದ್ದವು. ಈ ವಿಚಾರ ಕೇಳಿ ಯಾರೊಬ್ಬರೂ ಸಿನಿಮಾ ನಿರ್ಮಾಣ ಮಾಡಲು ಮುಂದೆ ಬಂದಿರಲಿಲ್ಲ. ಹೀಗಾಗಿ, ಅವರೇ ನಿರ್ಮಾಣ ಮಾಡಿದರು. ಈ ವೇಳೆ ಬೆಂಬಲಕ್ಕೆ ನಿಂತಿದ್ದು ರವಿಚಂದ್ರನ್ ತಂದೆ ವೀರಸ್ವಾಮಿ. ಸಿನಿಮಾ ಮಾಡಲು ಬೆಂಬಲ ಕೊಟ್ಟರು. ಈ ಚಿತ್ರ ಯಾರೂ ಊಹಿಸದ ರೀತಿಯಲ್ಲಿ ಗೆಲುವು ಕಂಡಿತ್ತು. ಈಗ ಈ ಚಿತ್ರಕ್ಕೆ ಸೀಕ್ವೆಲ್ ಮಾಡುವ ಬಗ್ಗೆ ರವಿಚಂದ್ರನ್ ಮಾತನಾಡಿದ್ದಾರೆ.
‘ಮೇ 30ಕ್ಕೆ ಪ್ರೇಮಲೋಕ 2 ಸಿನಿಮಾ ಶುರುವಾಗುತ್ತದೆ. ದೊಡ್ಡ ಮಗ ಮನೋರಂಜನ್ ನಟಿಸುತ್ತಾನೆ. ಚಿಕ್ಕ ಮಗ ಚಿಕ್ಕ ಪಾತ್ರ ಮಾಡುತ್ತಾನೆ. ನಾನು ತಂದೆಯ ಪಾತ್ರ ಮಾಡುತ್ತೇನೆ. 20-25 ಹಾಡುಗಳು ಇರುತ್ತವೆ. ಎಲ್ಲಾ ವಯಸ್ಸಿನವರಿಗೂ ಸಿನಿಮಾ ಇಷ್ಟ ಆಗುತ್ತದೆ. ಸಿನಿಮಾದಲ್ಲಿ ಪ್ರೀತಿ ಮೆಲುಕು ಹಾಕುತ್ತಾ ಹೋಗುತ್ತೀರಾ. ಇಲ್ಲಿ ಜಾತಿ, ರಾಜಕೀಯದ ವಿಚಾರ ಇಲ್ಲ. ಕೇವಲ ಪ್ರೀತಿ ವಿಚಾರ ಇದೆ’ ಎಂದಿದ್ದಾರೆ ಅವರು.
‘ಪ್ರೇಮಲೋಕ 2 ಚಿತ್ರದಲ್ಲಿ ಕಥೆ ನಡೆಯೋದು ಜನರ ಮಧ್ಯೆ. ಪ್ರತಿಯೊಬ್ಬರಿಗೂ ಸಿನಿಮಾದಲ್ಲಿ ನಟಿಸೋ ಅವಕಾಶ ಇದೆ. ಆ ಸಿನಿಮಾದಲ್ಲಿ ಯಾರೆಲ್ಲ ನಟಿಸಬೇಕು ಎಂದಿದ್ದೀರೋ ಇನ್ಸ್ಟಾಗ್ರಾಮ್ ಅಕೌಂಟ್ಗೆ ಫ್ಯಾಮಿಲಿ ಫೋಟೋ ಹಾಕ್ಕೊಂಡು ಬನ್ನಿ. ನಾನು ಅವರನ್ನು ಕರೆಸಿ ಶೂಟ್ ಮಾಡುತ್ತೇನೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ಇವತ್ತು ಜೇಬು ಹಾಗೂ ಹೃದಯ ಎರಡೂ ಖಾಲಿ ಆಗಿದೆ ಎಂದ ರವಿಚಂದ್ರನ್
‘ಪ್ರೇಮಲೋಕದ ಗೆಲುವು ನಿಮ್ಮದು. ಆ ಸಿನಿಮಾ ನಿಮ್ಮದು. ನೀವು ಗೆಲ್ಲಿಸಿರೋದು. ಮತ್ತೆ ಪ್ರೇಮಲೋಕ ಸೃಷ್ಟಿ ಮಾಡಬೇಕು ಎನ್ನುವ ಆಸೆ ನನ್ನದು’ ಎಂದಿದ್ದಾರೆ ರವಿಚಂದ್ರನ್. ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ