‘ದರ್ಶನ್ ಫ್ಯಾನ್ಸ್ ಇನ್ಸುರೆನ್ಸ್ ಮಾಡಿಸಿಕೊಂಡು ಬನ್ನಿ’; ಎಚ್ಚರಿಸಿದ ಲಾಯರ್ ಜಗದೀಶ್

|

Updated on: Jan 24, 2025 | 2:35 PM

ವಕೀಲ ಜಗದೀಶ್ ಅವರ ಮೇಲೆ ನಡೆದ ಹಲ್ಲೆ ಪ್ರಯತ್ನದ ನಂತರ, ಅವರು ದರ್ಶನ್ ಅಭಿಮಾನಿಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಜಗದೀಶ್ ಅವರು ಅಭಿಮಾನಿಗಳು ತಮ್ಮ ಆಸ್ತಿ ಮತ್ತು ಜೀವಕ್ಕೆ ಅಪಾಯವನ್ನುಂಟುಮಾಡುತ್ತಿದ್ದಾರೆ ಎಂದು ಆರೋಪಿಸಿದ್ದು, ಅವರು ಭೇಟಿ ನೀಡುವ ಮುನ್ನ ವಿಮೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಈ ಘಟನೆಯು ದೇವಸ್ಥಾನದ ಪೆಂಡಾಲ್ ನಿರ್ಮಾಣದ ಸುತ್ತ ನಡೆದ ಜಗಳದಿಂದ ಉಂಟಾಗಿದೆ. ಜಗದೀಶ್ ಅವರು ಅಭಿಮಾನಿಗಳ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

‘ದರ್ಶನ್ ಫ್ಯಾನ್ಸ್ ಇನ್ಸುರೆನ್ಸ್ ಮಾಡಿಸಿಕೊಂಡು ಬನ್ನಿ’; ಎಚ್ಚರಿಸಿದ ಲಾಯರ್ ಜಗದೀಶ್
ಜಗದೀಶ್-ದರ್ಶನ್
Follow us on

ಲಾಯರ್ ಜಗದೀಶ್ ಹಾಗೂ ದರ್ಶನ್ ಅಭಿಮಾನಿಗಳ ಮಧ್ಯೆ ಇರುವ ಕಿರಿಕ್ ಸಧ್ಯಕ್ಕೆ ಕೊನೆ ಆಗುವ ಸೂಚನೆ ಸಿಗುತ್ತಿಲ್ಲ. ಜಗದೀಶ್ ಅವರ ಮೇಲೆ ಇತ್ತೀಚೆಗೆ ಹಲ್ಲೆಗೆ ಯತ್ನ ಆಗಿತ್ತು. ಈ ವೇಳೆ 40ಕ್ಕೂ ಅಧಿಕ ಜನರು ಇದ್ದರು. ಇದನ್ನು ಮಾಡಿದ್ದು ದರ್ಶನ್ ಅಭಿಮಾನಿಗಳು ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಬರೆದುಕೊಂಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಜಗದೀಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಏನಿದು ಘಟನೆ?

ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಕಿರಿಕ್ ಆಗಿತ್ತು. ಜಗದೀಶ್ ಅವರಿಗೆ ಸೇರಿದ ಕಾಂಪ್ಲೆಕ್ಸ್ ಒಂದು ಇಲ್ಲಿದೆ. ಈ ದಾರಿಯಲ್ಲಿ ಅಣ್ಣಮ್ಮ ದೇವಿಯನ್ನು ಕೂರಿಸಲು ಪೆಂಡಾಲ್ ಹಾಕಲಾಗಿತ್ತು. ಇದಕ್ಕೆ ಜಗದೀಶ್ ಅವರು ಆಕ್ಷೇಪ ತೆಗೆದಿದ್ದಾರೆ. ಪೆಂಡಾಲ್ ತೆಗೆಯಲು ಸ್ಥಳಿಯರು ಒಪ್ಪಿಲ್ಲ. ಈ ವಿಚಾರವಾಗಿ ಜಗದೀಶ್ ಹಾಗೂ ಇವರ ಮಧ್ಯೆ ಕಿರಿಕ್ ಆಗಿದೆ.

ಜಗದೀಶ್ ಪ್ರತಿಕ್ರಿಯೆ

‘ಒಬ್ಬನ ಮೇಲೆ 40 ಜನರ ಕಳಿಸಿದ್ದೀಯಂತಲ್ಲೋ ದರ್ಶನ. ನಿನ್ನ ಗಲೀಜ್ ಫ್ಯಾನ್ಸ್ ಹಾಗೆ ಹೇಳುತ್ತಿದ್ದಾರೆ. ಅದಕ್ಕೆ ಕೇಳುತ್ತಾ ಇದ್ದೇನೆ. ಗನ್ ಮ್ಯಾನ್ ಇರಲಿಲ್ಲ. ಇದ್ದಿದ್ರೆ ಗುಂಡಿನ ಸದ್ದು ಕೇಳಬೇಕಿತ್ತು. ನಮ್ಮ ಪ್ರಾಣ, ಆಸ್ತಿಗೆ ಕುತ್ತು ಬಂದರೆ ಗುಂಡು ಹಾರಿಸಲೇಬೇಕು. ನನಗೂ ಗನ್ ಲೈಸೆನ್ಸ್ ಬರುತ್ತದೆ. ಪ್ರಾಣಕ್ಕೆ ತೊಂದರೆ ಕೊಡೋಕೆ ಬಂದರೆ ಸುಮ್ಮನೆ ಇರಲ್ಲ’ ಎಂದು ಜಗದೀಶ್ ಹೇಳಿದ್ದಾರೆ.

‘ದರ್ಶನ್​ನ ಕೇಳಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳಿ. ಈಗಲೇ ಫೀಲಿಂಗ್​ನಲ್ಲಿದ್ದಾನೆ. 40 ಜನರಲ್ಲಿ ಯಾರು ನಿಮ್ಮ ಹುಡುಗರು ಅಂತು ಹೇಳಿ. ಸ್ವಲ್ಪ ಎಚ್ಚರವಾಗಿರಿ. ನಿನ್ನೆ ಗುಂಡಿನ ಶಬ್ದ ಕೇಳಬೇಕಿತ್ತು. ಹೇಗೋ ಬಚಾವ್ ಆದರು. ನೀವು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡರೂ ತೊಂದರೆ ಇಲ್ಲ. ಹಾಗೆಲ್ಲ ಮಾಡಬೇಡಿ ಫ್ಯಾನ್ಸ್. ದರ್ಶನ್​ನ ಸಿಕ್ಕಾಕಿಸಬೇಡಿ. ಹೊಡೆದವರ ಹೆಸರು ಹೇಳೋಕೆ ಹೇಳು. ಮತ್ತೆ ಜೈಲಿಗೆ ಹೋಗೊಕೆ ದರ್ಶನ್​ಗೆ ಇಷ್ಟ ಇಲ್ಲ. ಟ್ರೋಲ್ ಮಾಡೋಕೆ ನನಗೂ ಬರುತ್ತದೆ’

ಇದನ್ನೂ ಓದಿ: ಸ್ಥಳೀಯರ ಜೊತೆ ಕೈ ಕೈ ಮಿಲಾಯಿಸಿದ ಜಗದೀಶ್; ಹಲ್ಲೆ ನಡೆದಿದ್ದು ಏಕೆ?

‘ದರ್ಶನ್ ಹುಡುಗರು ಗಲೀಜ್ ಹುಡುಗರು. ದರ್ಶನ್ ಫ್ಯಾನ್ಸ್ ಎಂದುಕೊಂಡು ಅವನಿಗೇ ಗುನ್ನ ಇಡ್ತೀರಲ್ಲೋ. ದರ್ಶನ್ ಬರೋಕೆ ಮುಂಚೆ ಮನೆಯಲ್ಲಿ ಹೇಳಿಕೊಂಡು ಬನ್ನಿ, ಇನ್ಸುರೆನ್ಸ್ ಮಾಡಿಕೊಂಡು ಬನ್ನಿ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.