‘ಲವ್​ ಯೂ ರಚ್ಚು’ ತಂಡಕ್ಕೆ ದೊಡ್ಡ ರಿಲೀಫ್​ ನೀಡಿದ ರಾಮನಗರ ಕೋರ್ಟ್​

ದುರ್ಘಟನೆ ನಡೆದ ಬಳಿಕ ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಯಾರ ಕಣ್ಣಿಗೂ ಕಾಣಿಸಿಕೊಂಡಿಲ್ಲ. ಪ್ರಕರಣದಲ್ಲಿ ಅವರು ಕೂಡ ಪ್ರಮುಖ ಆರೋಪಿ ಆಗಿದ್ದಾರೆ. ಹಾಗಾಗಿ ಯಾವ ಸಮಯದಲ್ಲಿ ಬೇಕಿದ್ದರೂ ಅವರ ಬಂಧನ ಆಗುವ ಸಾಧ್ಯತೆ ಇತ್ತು.

‘ಲವ್​ ಯೂ ರಚ್ಚು’ ತಂಡಕ್ಕೆ ದೊಡ್ಡ ರಿಲೀಫ್​ ನೀಡಿದ ರಾಮನಗರ ಕೋರ್ಟ್​
ಗುರು ದೇಶಪಾಂಡೆ, ವಿವೇಕ್​, ಅಜಯ್​ ರಾವ್​
Edited By:

Updated on: Aug 26, 2021 | 6:59 PM

ರಚಿತಾ ರಾಮ್​ ಮತ್ತು ಅಜಯ್​ ರಾವ್ ಮುಖ್ಯಭೂಮಿಕೆ ನಿಭಾಯಿಸುತ್ತಿರುವ ‘ಲವ್ ಯೂ ರಚ್ಚು’ ಚಿತ್ರತಂಡ ಸಂಕಷ್ಟಕ್ಕೆ ಸಿಲುಕಿತ್ತು. ಫೈಟರ್ ವಿವೇಕ್​​ ಸಾವಿನ ನಂತರದಲ್ಲಿ ಚಿತ್ರ ತಂಡದ ಕೆಲವರನ್ನು ಅರೆಸ್ಟ್​ ಮಾಡಲಾಗಿತ್ತು. ಈಗ ನಟ ಅಜೇಯ್ ರಾವ್ ಮತ್ತು ಐವರು ಆರೋಪಿಗಳಿಗೆ ಜಾಮೀನು ನೀಡಿ ರಾಮನಗರದ ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

ದುರ್ಘಟನೆ ನಡೆದ ಬಳಿಕ ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಯಾರ ಕಣ್ಣಿಗೂ ಕಾಣಿಸಿಕೊಂಡಿಲ್ಲ. ಪ್ರಕರಣದಲ್ಲಿ ಅವರು ಕೂಡ ಪ್ರಮುಖ ಆರೋಪಿ ಆಗಿದ್ದಾರೆ. ಹಾಗಾಗಿ ಯಾವ ಸಮಯದಲ್ಲಿ ಬೇಕಿದ್ದರೂ ಅವರ ಬಂಧನ ಆಗುವ ಸಾಧ್ಯತೆ ಇತ್ತು. ಹೀಗಾಗಿ ಅವರು ಕೂಡ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ‘ಲವ್ ಯೂ ರಚ್ಚು’ ಚಿತ್ರದ ನಿರ್ದೇಶಕ ಶಂಕರಯ್ಯ, ಕ್ರೇನ್ ಆಪರೇಟರ್ ಮಹದೇವ್, ಸಾಹಸ ನಿರ್ದೇಶಕ ವಿನೋದ್ ಕುಮಾರ್ ಅವರು ಈಗ ನ್ಯಾಯಾಂಗ ಬಂಧನದಲ್ಲಿದ್ದರು. ಜಾಮೀನಿಗಾಗಿ ಅವರು ಕೂಡ ಅರ್ಜಿ ಸಲ್ಲಿಸಿದ್ದರು. ಅಜಯ್​ ರಾವ್​ ನಿರೀಕ್ಷಣಾ ಜಾಮಿನು ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಎಲ್ಲಾ ಅರ್ಜಿಗಳ ವಿಚಾರಣೆ ಇಂದು ನಡೆದಿದೆ.

ಚಿತ್ರದ ನಿರ್ದೇಶಕ ಶಂಕರಯ್ಯ,  ಸಾಹಸ ನಿರ್ದೇಶಕ ವಿನೋದ್ ಕುಮಾರ್, ಕ್ರೇನ್ ಚಾಲಕ ಮಹದೇವ್, ಸಾಹಸ ನಿರ್ದೇಶಕ ವಿನೋದ್ ಕುಮಾರ್​ಗೆ ಜಾಮೀನು ಸಿಕ್ಕಿದೆ. ನಟ ಅಜೇಯ್ ರಾವ್ ಹಾಗೂ ಗುರು ದೇಶಪಾಂಡೆಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ.

ವಿಚಾರಣೆ ಎದುರಿಸಿದ ಅಜಯ್​ ರಾವ್

‘ಲವ್​​ ಯೂ ರಚ್ಚು’ ಶೂಟಿಂಗ್ ವೇಳೆ ಫೈಟರ್​​ ವಿವೇಕ್​ ಮೃತಪಟ್ಟ ಘಟನೆಗೆ ಸಂಬಂಧಿಸಿ ನಟ ಅಜಯ್​ ರಾವ್​ ಅವರು ಇಂದು (ಆಗಸ್ಟ್​ 26) ಬಿಡದಿ ಪೊಲೀಸ್ ಠಾಣೆಗೆ ಬಂದು ವಿಚಾರಣೆ ಎದುರಿಸಿದ್ದಾರೆ. ನಂತರ ಮಾಧ್ಯಮದ ಜತೆ ಮಾತನಾಡಿದ ಅವರು, ‘ದುರಂತ ನಡೆದ ಬಳಿಕ ನಾನು ಎಲ್ಲೂ ಓಡಿಹೋಗಿಲ್ಲ’ ಎಂದಿದ್ದಾರೆ.

‘ಆಸ್ಪತ್ರೆಯಲ್ಲಿರುವವನಿಗೆ ಸುಳ್ಳು ಮಾಹಿತಿ ನೀಡಿ ಹೇಳಿಕೆ ಕೊಡಿಸಲಾಗಿದೆ. ಸೆಟ್​​ನಲ್ಲಿ ನಾನೊಬ್ಬನೇ ಇದ್ದೆನಾ? ಅಲ್ಲಿ ಎಲ್ಲರೂ ಇದ್ದರು. ಸಹಾಯ ಮಾಡಬೇಕು ಅಂದ್ರೆ ಏನು ಮಾಡಬೇಕು? ಯಾವ ರೀತಿ ಸಹಾಯ ಮಾಡಬೇಕು ಹೇಳಿ’ ಎಂದು ಪ್ರಶ್ನೆ ಮಾಡಿದ್ದಾರೆ ಅವರು.

‘ಪೊಲೀಸರು ಕೇಳಿದ ಪ್ರಶ್ನೆಗಳಿಗೆ ನಾನು ಉತ್ತರ ನೀಡಿದ್ದೇನೆ. ನಾನು ಹೆದರಿಕೊಂಡು ಕೋರ್ಟ್​​ಗೆ ಅರ್ಜಿಯನ್ನು ಸಲ್ಲಿಸಿಲ್ಲ. ನನ್ನ ನಂಬಿ ನಿರ್ಮಾಪಕರು ನನ್ನ ಮೇಲೆ ಹಣ ಹೂಡಿರುತ್ತಾರೆ. ನಾನು ಹೆದರಿಕೊಂಡು ಎಲ್ಲೂ ಓಡಿ ಹೋಗಿಲ್ಲ’ ಎಂದಿದ್ದಾರೆ ಅಜಯ್​ ರಾವ್​.

ಇದನ್ನೂ ಓದಿ: ‘ಸೆಟ್​ನಲ್ಲಿ ಏನೇ ಆದರೂ ಹೀರೋ ಹೋಗಬೇಕು ಅಂತ ರೂಲ್ಸ್​ ಮಾಡಿಬಿಡಿ’; ಅಜಯ್​ ರಾವ್​

Published On - 6:37 pm, Thu, 26 August 21