
ಪವನ್ ಕುಮಾರ್ ನಿರ್ದೇಶನ ಮಾಡಿದ್ದ ‘ಲೂಸಿಯಾ’ ಸಿನಿಮಾ (Lucia Movie) ಗೆದ್ದು ಬೀಗಿತ್ತು. ಈ ಚಿತ್ರ ತೆರೆಗೆ ಬಂದು 12 ವರ್ಷಗಳು ಕಳೆದಿವೆ. 2013ರಲ್ಲಿ ಈ ಚಿತ್ರ ತೆರೆಗೆ ಬಂದಿತ್ತು. ಈ ಸಿನಿಮಾದ ವಿಶೇಷ ದೃಶ್ಯದ ಬಗ್ಗೆ ಪವನ್ ಕುಮಾರ್ ಅವರು ಮಾತನಾಡಿದರು. ಕೈರಾಮ್ ವಾಶಿ ಅವರಿಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ. ಆ ದೃಶ್ಯ ಹುಟ್ಟಿದ್ದು ಹೇಗೆ ಹಾಗೂ ದೃಶ್ಯದ ಹಿಂದಿನ ಸೆಂಟಿಮೆಂಟ್ ಬಗ್ಗೆ ಅವರು ಮಾತನಾಡಿದರು.
‘ಆ ದೃಶ್ಯ ಲೂಸಿಯಾ ಸಿನಿಮಾದ ಅಮೇಜಿಂಗ್ ಮೂಮೆಂಟ್. ನಿಕ್ಕಿ (ಸತೀಶ್) ಪಿಜ್ಜಾ ಸ್ಟೋರ್ಗೆ ಹೋಗಿ ಮದುವೆ ಆಗಬೇಕು ಎಂದು ಕೇಳುತ್ತಾನೆ. ಆಗ ನಾಯಕಿ (ಶ್ರುತಿ) ಬಂದು ಕೂತ್ಗೊಳಿ ಎಂದು ಹೇಳುತ್ತಾಳೆ. ಆತನಿಗೆ ಮೆನ್ಯೂ ಓದೋಕೆ ಬರಲ್ಲ. ಈ ಫುಡ್ ಚೆನ್ನಾಗಿರುತ್ತೆ ಎಂದು ಅವಳೇ ತೆಗೆದುಕೊಂಡು ಬರ್ತಾಳೆ. ನಾನು ಇಲ್ಲಿ ಕೆಲಸ ಮಾಡ್ತೀನಿ, ಇಷ್ಟು ಸಂಬಳ ಕೊಡ್ತಾಳೆ ಎಂದು ಹೇಳುತ್ತಾಳೆ. ಟಾರ್ಚ್ ಬಿಡೋರಿಗೆ ಅಷ್ಟು ಸಂಬಳ ಸಾಕಾ ಎಂದು ಆಕೆ ಕೇಳುತ್ತಾಳೆ’ ಎಂದು ದೃಶ್ಯದ ಬಗ್ಗೆ ವಿವರಿಸಿದರು ಪವನ್ ಕುಮಾರ್.
‘ಅವನು ಸಾಕಷ್ಟು ಪ್ರೀತಿ ಇಟ್ಟುಕೊಂಡು ಬಂದಿರ್ತಾಳೆ. ಆದರೆ ಅವಳು ಇನ್ಸರ್ಟ್ ಮಾಡುತ್ತಾಳೆ. ಬಯ್ಯೋದು ಇಲ್ಲ, ಆದರೆ ಕೋಲ್ಡ್ ಆಗಿ ಇನ್ಸಲ್ಟ್ ಮಾಡುತ್ತಾಳೆ. ನಿಕ್ಕಿ ನೋಡ್ತಾ ಇರ್ತಾನೆ. ಕಣ್ಣಲ್ಲಿ ನೀರು ಬರುತ್ತೆ. 450 ರೂಪಾಯಿ ಬಿಲ್ ಆಗುತ್ತೆ. ಅಷ್ಟು ಕೊಡುವಷ್ಟು ಹಣ ನಿಮ್ಮಲ್ಲಿ ಇದೆಯಾ ಎಂದು ಕೇಳುತ್ತಾಳೆ’ ಎಂದು ಪವನ್ ದೃಶ್ಯವನ್ನು ನೆನಪಿಸಿಕೊಂಡಳು.
ಇದನ್ನೂ ಓದಿ: ಲೂಸಿಯಾದಲ್ಲಿ ರಿಷಬ್ ಶೆಟ್ಟಿ ಮಾಡಿದ ಪಾತ್ರ ನೆನಪಿದೆಯೇ? 12 ವರ್ಷಗಳಲ್ಲಿ ಅದೆಷ್ಟು ಬದಲಾವಣೆ
‘ಸ್ಕ್ರಿಪ್ಟ್ನಲ್ಲಿ ಆತ ಎದ್ದು ಹೋಗುತ್ತಾನೆ ಎಂದಷ್ಟೇ ಇತ್ತು. ಸತೀಶ್ ಕುತಿದ್ದ. ಹಾಗೇ ಹೋಗೋ ಬದಲು ದುಡ್ಡು ಇಟ್ಟು ಹೋದರೆ ಚೆನ್ನಾಗಿರುತ್ತದೆ ಎಂದು ನನಗೆ ಅನಿಸಿತು. ಶ್ರುತಿ ಪಿಜ್ಜಾ ತೆಗೆದುಕೊಂಡು ಬಂದರೆ ಅವನು ಇರಲ್ಲ. 450 ರೂಪಾಯಿ ಇಟ್ಟು ಹೋಗಿರುತ್ತಾನೆ. ಇದು ಸಿನಿಮಾದ ಮಾಸ್ ಮೂಮೆಂಟ್. ಅವನು ಒಂದು ಮಾತನ್ನೂ ಹೇಳಲ್ಲ. ಆದರೆ, ಆಡಿಯನ್ಸ್ಗೆ ಅವನು ದುಡ್ಡ ಕೊಡುವುದರ ಮೂಲಕ ತಿರುಗೇಟು ಕೊಟ್ಟ ಎಂಬುದು ಗೊತ್ತಾಗುತ್ತದೆ’ ಎಂದು ಪವನ್ ಆ ದೃಶ್ಯ ಏಕೆ ವಿಶೇಷ ಎಂಬುದನ್ನು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.