ಕೊವಿಡ್​ ಇದ್ದರೂ ಅಣ್ಣನ ಅಂತ್ಯಸಂಸ್ಕಾರಕ್ಕೆ ಹೋದರಾ ಮಹೇಶ್​ ಬಾಬು? ವೈರಲ್​ ಆದ ಫೋಟೋದ ಅಸಲಿಯತ್ತೇನು?  

ಕಮೆಂಟ್​ ಬಾಕ್ಸ್​ನಲ್ಲಿ ಮಹೇಶ್​ ಬಾಬು ಕಣ್ಣೀರು ಒರೆಸಿಕೊಳ್ಳುತ್ತಿರುವ ಫೋಟೋ ಒಂದನ್ನು ಪೋಸ್ಟ್ ಮಾಡಲಾಗಿದೆ. ಈ ಫೋಟೋ ಅವರ ಅಣ್ಣನ ಅಂತಿಮ ಸಂಸ್ಕಾರದ ಸಂದರ್ಭದ್ದು ಎಂದು ಕೆಲವರು ನಂಬಿದ್ದಾರೆ.

ಕೊವಿಡ್​ ಇದ್ದರೂ ಅಣ್ಣನ ಅಂತ್ಯಸಂಸ್ಕಾರಕ್ಕೆ ಹೋದರಾ ಮಹೇಶ್​ ಬಾಬು? ವೈರಲ್​ ಆದ ಫೋಟೋದ ಅಸಲಿಯತ್ತೇನು?  
ಮಹೇಶ್​ ಬಾಬು- ರಮೇಶ್​ ಬಾಬು
Edited By:

Updated on: Jan 09, 2022 | 4:22 PM

ನಟ ಮಹೇಶ್​ ಬಾಬು ಚಿತ್ರರಂಗದಲ್ಲಿ ಬೇಡಿಕೆಯ ನಟನಾಗಿದ್ದಾರೆ. ಅವರು ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಅವರ ಕಾಲ್​ಶೀಟ್​ ಪಡೆಯೋಕೆ ನಿರ್ಮಾಪಕರು ಸರತಿಯಲ್ಲಿ ನಿಲ್ಲುತ್ತಾರೆ. ಮಹೇಶ್​ ಬಾಬು ಇಷ್ಟು ಎತ್ತರಕ್ಕೆ ಬೆಳೆಯೋಕೆ ಅವರ ಅಣ್ಣ ರಮೇಶ್​ ಬಾಬು ಮುಖ್ಯ ಕಾರಣ. ನಟನೆ, ನಿರ್ಮಾಣದಲ್ಲಿ ಹೆಸರು ಮಾಡಿದ್ದ ರಮೇಶ್​ ಬಾಬು ಈಗ ಮೃತಪಟ್ಟಿದ್ದಾರೆ. ಅವರನ್ನು ಕೊನೆಯ ಕ್ಷಣದಲ್ಲಿ ನೋಡೋಕೂ ಮಹೇಶ್​ ಬಾಬುಗೆ ಸಾಧ್ಯವಾಗಿಲ್ಲ ಅನ್ನೋದು ಬೇಸರದ ಸಂಗತಿ. ಈ ಮಧ್ಯೆ ಅವರು ಕಣ್ಣೀರು ಒರಿಸಿಕೊಳ್ಳುತ್ತಿರುವ ಫೋಟೋ ಒಂದು ವೈರಲ್​ ಆಗಿದೆ.

ಮಹೇಶ್​ ಬಾಬು ಅವರಿಗೆ ಇತ್ತೀಚೆಗೆ ಕೊವಿಡ್​ ಆಗಿತ್ತು. ಈ ಬಗ್ಗೆ ಟ್ವೀಟ್​ ಮಾಡಿದ್ದ ಅವರು, ‘ನನ್ನ ಎಲ್ಲಾ ಅಭಿಮಾನಿಗಳಿಗೆ ಮತ್ತು ಹಿತೈಷಿಗಳಿಗೆ ಈ ಪತ್ರ. ಎಲ್ಲಾ ರೀತಿಯ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ ಸಹ, ನನಗೆ ಕೊವಿಡ್​ 19 ಅಂಟಿದೆ. ನಾನು ಮನೆಯಲ್ಲಿ ಕ್ವಾರಂಟೈನ್​ ಆಗಿದ್ದೇನೆ. ವೈದ್ಯರ ಸೂಚನೆ ಹಾಗೂ ಮಾರ್ಗದರ್ಶನವನ್ನು ಅನುಸರಿಸುತ್ತಿದ್ದೇನೆ’ ಎಂದಿದ್ದರು. ಈಗ ಮಹೇಶ್​ ಬಾಬು ಕ್ವಾರಂಟೈನ್​ನಲ್ಲಿ ಇರುವಾಗಲೇ ಅವರ ಅಣ್ಣ ಮೃತಪಟ್ಟಿದ್ದಾರೆ. ಈ ಬಗ್ಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.

‘ನೀನು ನನಗೆ ಸ್ಫೂರ್ತಿಯಾಗಿದ್ದೆ. ನೀನು ನನ್ನ ಶಕ್ತಿಯಾಗಿದ್ದೆ. ನೀನು ನನ್ನ ಧೈರ್ಯ. ನೀನೇ ನನ್ನ ಸರ್ವಸ್ವ. ನೀನಿಲ್ಲದಿದ್ದರೆ ನಾನು ಈಗಿರುವ ಅರ್ಧಕ್ಕೂ ಬೆಳೆಯಲು ಆಗುತ್ತಿರಲಿಲ್ಲ. ನೀನು ನನಗಾಗಿ ಮಾಡಿದ ಎಲ್ಲ ಸಹಾಯಕ್ಕೆ ಧನ್ಯವಾದಗಳು. ಈಗ ಕೇವಲ ವಿಶ್ರಾಂತಿ. ಈ ಬದುಕಿನಲ್ಲಿ ಮತ್ತು ಮುಂದಿನ ಜನ್ಮದಲ್ಲೂ ನೀನು ನನ್ನ ಅಣ್ಣಯ್ಯ. ಲವ್​ ಯೂ’ ಎಂದು ಮಹೇಶ್​ ಬಾಬು ಬರೆದುಕೊಂಡಿದ್ದಾರೆ.

ಕಮೆಂಟ್​ ಬಾಕ್ಸ್​ನಲ್ಲಿ ಮಹೇಶ್​ ಬಾಬು ಕಣ್ಣೀರು ಒರೆಸಿಕೊಳ್ಳುತ್ತಿರುವ ಫೋಟೋ ಒಂದನ್ನು ಪೋಸ್ಟ್ ಮಾಡಲಾಗಿದೆ. ಈ ಫೋಟೋ ಅವರ ಅಣ್ಣನ ಅಂತಿಮ ಸಂಸ್ಕಾರದ ಸಂದರ್ಭದ್ದು ಎಂದು ಕೆಲವರು ನಂಬಿದ್ದಾರೆ. ಆದರೆ, ಇದು ಸುಳ್ಳು. ಈ ಮೊದಲು ಅವರ ಕುಟುಂಬದ ಸದಸ್ಯರೊಬ್ಬರು ಮೃತಪಟ್ಟಾಗ ತೆಗೆದ ಫೋಟೋ ಇದಾಗಿದೆ. ಮಹೇಶ್​ ಬಾಬುಗೆ ಕೊವಿಡ್​ ಆಗಿರುವುದರಿಂದ ಅವರಿಗೆ ಅಣ್ಣನ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ‘ಪುಷ್ಪ’ ಚಿತ್ರವನ್ನು ಹಾಡಿ ಹೊಗಳಿದ ಮಹೇಶ್​ ಬಾಬು; ಈ ಪರಿ ಪ್ರಶಂಸೆಗೆ ಅಲ್ಲು ಅರ್ಜುನ್​ ಪ್ರತಿಕ್ರಿಯೆ ಏನು?

ರಶ್ಮಿಕಾ ಮಂದಣ್ಣ ನಟನೆಗಿಲ್ಲ ಮಹೇಶ್​ ಬಾಬು ಮೆಚ್ಚುಗೆ; ಪ್ರಿನ್ಸ್​ಗೆ ಧನ್ಯವಾದ ಹೇಳಿದ ಅಭಿಮಾನಿಗಳು

Published On - 4:22 pm, Sun, 9 January 22