‘ಜಿಗ್ರಾ’ To ‘ಮಾರ್ಟಿನ್’; ದಸರಾ ಸಂದರ್ಭದಲ್ಲಿ ರಿಲೀಸ್ ಆದ ಸಿನಿಮಾಗಳ ಗಳಿಕೆ ಲೆಕ್ಕ ಇಲ್ಲಿದೆ

ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಬಗ್ಗೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಈ ಚಿತ್ರವನ್ನು ರಿಲೀಸ್ ಮಾಡಲಾಯಿತು. ಅದ್ದೂರಿ ಬಜೆಟ್​ನಲ್ಲಿ ಸಿನಿಮಾ ಸಿದ್ಧವಾಗಿದೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಹಲವು ವರ್ಷಗಳು ಕಾದಿದ್ದರು. ಈಗ ಸಿನಿಮಾದ ಮೊದಲ ದಿನದ ಗಳಿಕೆ ವಿಚಾರದ ಬಗ್ಗೆ ಮಾಹಿತಿ ಸಿಕ್ಕಿದೆ.

‘ಜಿಗ್ರಾ’ To ‘ಮಾರ್ಟಿನ್’; ದಸರಾ ಸಂದರ್ಭದಲ್ಲಿ ರಿಲೀಸ್ ಆದ ಸಿನಿಮಾಗಳ ಗಳಿಕೆ ಲೆಕ್ಕ ಇಲ್ಲಿದೆ
‘ಜಿಗ್ರಾ’ To ‘ಮಾರ್ಟಿನ್’; ದಸರಾ ಸಂದರ್ಭದಲ್ಲಿ ರಿಲೀಸ್ ಆದ ಸಿನಿಮಾಗಳ ಗಳಿಕೆ ಲೆಕ್ಕ ಇಲ್ಲಿದೆ
Follow us
ರಾಜೇಶ್ ದುಗ್ಗುಮನೆ
|

Updated on: Oct 12, 2024 | 1:11 PM

‘ದಸರಾ’ ಹಬ್ಬದ ಪ್ರಯುಕ್ತ ಹಲವು ಸಿನಿಮಾಗಳು ಈ ವಾರ ರಿಲೀಸ್ ಆಗಿವೆ. ಒಂದಷ್ಟು ಸಿನಿಮಾಗಳು ಅಕ್ಟೋಬರ್ 10ರಂದು ತೆರೆಗೆ ಬಂದರೆ ಇನ್ನೂ ಕೆಲವು ಚಿತ್ರಗಳು ಅಕ್ಟೋಬರ್ 11ರಂದು ಬಿಡುಗಡೆ ಕಂಡಿವೆ. ದಸರಾ ಪ್ರಯುಕ್ತ ರಿಲೀಸ್ ಆದ ಚಿತ್ರಗಳ ಪೈಕಿ ಎಲ್ಲವೂ ಮಿಶ್ರಪ್ರತಿಕ್ರಿಯೆ ಪಡೆದಿದೆ. ಈ ವಾರ ರಿಲೀಸ್ ಆದ ಸಿನಿಮಾಗಳ ಗಳಿಕೆ ಬಗ್ಗೆ ಇಲ್ಲಿದೆ ಮಾಹಿತಿ.

‘ಮಾರ್ಟಿನ್’

ಧ್ರುವ ಸರ್ಜಾ ನಟನೆಯ, ಎಪಿ ಅರ್ಜುನ್ ನಿರ್ದೇಶನದ ‘ಮಾರ್ಟಿನ್’ ಸಿನಿಮಾ ಅಕ್ಟೋಬರ್ 11ರಂದು ರಿಲೀಸ್ ಆಗಿದೆ. ಈ ಸಿನಿಮಾಗೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಅವರ ಫ್ಯಾನ್ಸ್​ ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಈ ಚಿತ್ರಕ್ಕೆ ಉದಯ್ ಮೆಹ್ತಾ ನಿರ್ಮಾಣ ಇದೆ. ಈ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು 6.2 ಕೋಟಿ ರೂಪಾಯಿ ಎಂದು ವರದಿ ಆಗಿದೆ.

‘ಜಿಗ್ರಾ’

ಆಲಿಯಾ ಭಟ್ ನಟಿಸಿ, ನಿರ್ಮಿಸಿರೋ ‘ಜಿಗ್ರಾ’ ಸಿನಿಮಾ ಮೊದಲ ದಿನ 4 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರ ಬುಕ್ ಮೈ ಶೋನಲ್ಲಿ ಉತ್ತಮ ರೇಟಿಂಗ್ ಪಡೆದುಕೊಂಡಿದೆ. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಬಳಿಕ ರಿಲೀಸ್ ಆಗುತ್ತಿರುವ ಆಲಿಯಾ ನಟನೆಯ ಸಿನಿಮಾ ಇದಾಗಿದೆ.

ವೆಟ್ಟೈಯಾನ್

ರಜನಿಕಾಂತ್, ಅಮಿತಾಭ್ ಬಚ್ಚನ್ ಹಾಗೂ ಫಹಾದ್ ಫಾಸಿಲ್ ನಟನೆಯ ‘ವೆಟ್ಟೈಯಾನ್’ ಸಿನಿಮಾ ಅಕ್ಟೋಬರ್ 11ರಂದು ರಿಲೀಸ್ ಆಯಿತು. ಮೊದಲ ದಿನ 31 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಎರಡನೇ ದಿನ ಈ ಚಿತ್ರ 24 ಕೋಟಿ ರೂಪಾಯಿ ಕಲೆ ಹಾಕಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 55 ಕೋಟಿ ರೂಪಾಯಿ ಆಗಿದೆ.

ಇದನ್ನೂ ಓದಿ: ‘ಮಾರ್ಟಿನ್’ ಸಿನಿಮಾ ಗಳಿಸಿದ್ದೆಷ್ಟು? ಹೇಗಿದೆ ಓಪನಿಂಗ್ ಡೇ ಕಲೆಕ್ಷನ್? ಇಲ್ಲಿದೆ ಲೆಕ್ಕಾಚಾರ

‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ’

‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ’ ಸಿನಿಮಾ ಅಕ್ಟೋಬರ್ 11ರಂದು ಬಿಡುಗಡೆ ಕಂಡಿತು. ಈ ಚಿತ್ರವು ಮೊದಲ ದಿನ ಬರೋಬ್ಬರಿ 5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ರಾಜ್​ಕುಮಾರ್ ರಾವ್ ಹಾಗೂ ತೃಪ್ತಿ ದಿಮ್ರಿ ಒಟ್ಟಾಗಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.