ಮ್ಯಾಕ್ಸ್ ಸಿನಿಮಾ ನೋಡಿ ನೇರವಾಗಿ ಅಭಿಪ್ರಾಯ ತಿಳಿಸಿದ ಜನ; ಇಲ್ಲಿದೆ ಟ್ವಿಟರ್​ ವಿಮರ್ಶೆ

|

Updated on: Dec 25, 2024 | 12:32 PM

ಕಿಚ್ಚ ಸುದೀಪ್​ ಅವರ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ‘ಮ್ಯಾಕ್ಸ್’ ಸಿನಿಮಾ ಬಿಡುಗಡೆ ಆಗಿದೆ. ಕಾಲಿವುಡ್​ನ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್​ ಹೇಳಿದ್ದಾರೆ. ಕೆಲವರು ಈ ಸಿನಿಮಾವನ್ನು ತಮಿಳಿನ ‘ಕೈದಿ’ ಚಿತ್ರಕ್ಕೆ ಹೋಲಿಸುತ್ತಿದ್ದಾರೆ. ಒಟ್ಟಾರೆ ಜನರ ಅಭಿಪ್ರಾಯ ಏನಿದೆ ಎಂಬುದನ್ನು ತಿಳಿಸುವ ಟ್ವಿಟರ್​ ವಿಮರ್ಶೆ ಇಲ್ಲಿದೆ.

ಮ್ಯಾಕ್ಸ್ ಸಿನಿಮಾ ನೋಡಿ ನೇರವಾಗಿ ಅಭಿಪ್ರಾಯ ತಿಳಿಸಿದ ಜನ; ಇಲ್ಲಿದೆ ಟ್ವಿಟರ್​ ವಿಮರ್ಶೆ
Kichcha Sudeep
Follow us on

ಬರೋಬ್ಬರಿ ಎರಡೂವರೆ ವರ್ಷಗಳ ಬಳಿಕ ಕಿಚ್ಚ ಸುದೀಪ್ ಅವರು ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ನಟಿಸಿರುವ ‘ಮ್ಯಾಕ್ಸ್’ ಸಿನಿಮಾ ಇಂದು (ಡಿಸೆಂಬರ್​ 25) ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಮಾಸ್ ಅವತಾರದಲ್ಲಿ ಸುದೀಪ್​ ಅವರು ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ. ಈ ಚಿತ್ರದಲ್ಲಿನ ಆ್ಯಕ್ಷನ್ ಸೀನ್​ಗಳನ್ನು ನೋಡಿ ಪ್ರೇಕ್ಷಕರು ಎಂಜಾಯ್ ಮಾಡುತ್ತಿದ್ದಾರೆ. ಬಹುತೇಕ ಕಡೆಗಳಲ್ಲಿ ‘ಮ್ಯಾಕ್ಸ್’ ಹೌಸ್​ಫುಲ್ ಪ್ರದರ್ಶನ ಕಂಡಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಸೋಶಿಯಲ್ ಮೀಡಿಯಾ ಮೂಲಕ ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ.

‘ಮ್ಯಾಕ್ಸ್’ ಸಿನಿಮಾದಿಂದ ಜನರಿಗೆ ಮುಖ್ಯವಾಗಿ ಸಿಗುವುದು ಆ್ಯಕ್ಷನ್. ಹೊಡಿಬಡಿ ದೃಶ್ಯಗಳಿಗೆ ಈ ಸಿನಿಮಾದಲ್ಲಿ ಯಾವುದೇ ಕೊರತೆ ಇಲ್ಲ. ಸುದೀಪ್ ಅವರನ್ನು ಬಹಳ ದಿನಗಳ ಬಳಿಕ ಇಷ್ಟೊಂದು ಮಾಸ್ ಗೆಟಪ್​ನಲ್ಲಿ ನೋಡಿ ಫ್ಯಾನ್ಸ್ ಎಂಜಾಯ್ ಮಾಡುತ್ತಿದ್ದಾರೆ. ಸುದೀಪ್ ಅವರ ಅಭಿನಯಕ್ಕೆ ಮೆಚ್ಚುಗೆ ಕೇಳಿಬರುತ್ತಿದೆ.

Max Movie Review: ‘ಮ್ಯಾಕ್ಸ್’ ಸಿನಿಮಾಗೆ ಬಲ ತುಂಬಿದ ಕಥೆಯ ಶರವೇಗ, ಕಿಚ್ಚನ ಆವೇಗ

ಈ ಸಿನಿಮಾ ನೋಡುವಾಗ ಕಿಂಚಿತ್ತೂ ಬೋರ್​ ಆಗಲ್ಲ ಎಂದು ಸುದೀಪ್ ಅಭಿಮಾನಿಗಳು ಹೇಳಿದ್ದಾರೆ. ಕತೆ ತುಂಬ ವೇಗವಾಗಿ ಸಾಗುವುದರಿಂದ ಜನರಿಗೆ ಇಷ್ಟ ಆಗುತ್ತಿದೆ. ಇದು ಸುದೀಪ್ ಅವರ ಒನ್​ ಮ್ಯಾನ್​ ಶೋ ಕೂಡ ಹೌದು. ಪಕ್ಕಾ ಅಭಿಮಾನಿಗಳಿಗಾಗಿ ‘ಮ್ಯಾಕ್ಸ್’ ಮೂಡಿಬಂದಿದೆ. ಸೂಪರ್ ಹಿಟ್ ಆಗಲಿದೆ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ.

ಚಿತ್ರಮಂದಿರದಲ್ಲಿ ‘ಮ್ಯಾಕ್ಸಿಮಮ್ ಮಾಸ್​..’ ಹಾಡು ಬಂದಾಗ ಜನರು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಸೆಲೆಬ್ರೇಷನ್ ಜೋರಾಗಿದೆ ಎಂದು ಅಭಿಮಾನಿಗಳು ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ. ಅನೇಕರು ಸಿನಿಮಾಗೆ ಪಾಸಿಟಿವ್ ವಿಮರ್ಶೆ ನೀಡುತ್ತಿದ್ದಾರೆ.

ಮೊದಲ ದಿನ ‘ಮ್ಯಾಕ್ಸ್’ ಸಿನಿಮಾಗೆ ಉತ್ತಮ ಓಪನಿಂಗ್ ಸಿಕ್ಕಿದೆ. ಬಹುತೇಕ ಶೋಗಳ ಟಿಕೆಟ್​ಗಳು ಸೋಲ್ಡ್​ ಔಟ್ ಆಗಿವೆ. ಇದಕ್ಕಾಗಿ ಸಿನಿಪ್ರಿಯರು ಅಭಿನಂದನೆ ತಿಳಿಸುತ್ತಿದ್ದಾರೆ. ಕ್ರಿಸ್​ಮಸ್​ ಮತ್ತು ವೀಕೆಂಡ್​ ರಜೆ ಇರುವುದರಿಂದ ಈ ಚಿತ್ರ ಉತ್ತಮ ಕಲೆಕ್ಷನ್ ಮಾಡುವ ಸೂಚನೆ ಸಿಕ್ಕಿದೆ.

ತಾಂತ್ರಿಕವಾಗಿಯೂ ‘ಮ್ಯಾಕ್ಸ್’ ಉತ್ತಮವಾಗಿ ಮೂಡಿಬಂದಿದೆ. ಮುಖ್ಯವಾಗಿ ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತಕ್ಕೆ ಮೆಚ್ಚುಗೆ ಸಿಗುತ್ತಿದೆ. ಅದೇ ರೀತಿ, ಶೇಖರ್​ ಚಂದ್ರ ಅವರ ಛಾಯಾಗ್ರಹಣ ಕೂಡ ಹೈಲೈಟ್ ಆಗಿದೆ. ಉಗ್ರಂ ಮಂಜು ಅವರಿಗೆ ಸುದೀಪ್ ಜೊತೆ ಉತ್ತಮ ಸ್ಕ್ರೀನ್​ ಸ್ಪೇಸ್ ಸಿಕ್ಕಿದೆ.

ಕೆಲವು ಪ್ರೇಕ್ಷಕರಿಂದ ನೆಗೆಟಿವ್ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಕಥೆಯಲ್ಲಿ ಇನ್ನಷ್ಟು ಹೊಸತನ ಬೇಕಿತ್ತು. ಆ್ಯಕ್ಷನ್ ಹೊರತಾಗಿ ಈ ಸಿನಿಮಾದಲ್ಲಿ ಬೇರೆ ಏನೂ ಇಲ್ಲ ಎಂದು ಕೂಡ ಕೆಲವರು ಹೇಳಿದ್ದಾರೆ. ಒಟ್ಟಾರೆ ಸೋಶಿಯಲ್ ಮೀಡಿಯಾದಲ್ಲಿ ‘ಮ್ಯಾಕ್ಸ್’ ಸಿನಿಮಾದ ಬಗ್ಗೆ ಟಾಕ್​ ಜೋರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.