Shiva Rajkumar Surgery: ಶಿವರಾಜ್​ಕುಮಾರ್​ ಆಪರೇಷನ್ ಸಕ್ಸಸ್​; ಇದಕ್ಕೆ ತೆಗೆದುಕೊಂಡ ಗಂಟೆಗಳೆಷ್ಟು?

ಶಿವರಾಜ್ ಕುಮಾರ್ ಅವರ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಅಮೆರಿಕದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಹಲವು ಗಂಟೆಗಳ ಕಾಲ ನಡೆದ ಈ ಶಸ್ತ್ರಚಿಕಿತ್ಸೆಯ ನಂತರ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಮತ್ತು ಕುಟುಂಬಸ್ಥರು ಈ ಸುದ್ದಿಯಿಂದ ಸಂತೋಷಗೊಂಡಿದ್ದಾರೆ. ಶಿವರಾಜ್ ಕುಮಾರ್ ಅವರು ಶೀಘ್ರದಲ್ಲೇ ಚೇತರಿಸಿಕೊಂಡು ನಟನೆಗೆ ಮರಳುವ ನಿರೀಕ್ಷೆಯಿದೆ.

Shiva Rajkumar Surgery: ಶಿವರಾಜ್​ಕುಮಾರ್​ ಆಪರೇಷನ್ ಸಕ್ಸಸ್​; ಇದಕ್ಕೆ ತೆಗೆದುಕೊಂಡ ಗಂಟೆಗಳೆಷ್ಟು?
ಶಿವಣ್ಣ
Follow us
Malatesh Jaggin
| Updated By: ರಾಜೇಶ್ ದುಗ್ಗುಮನೆ

Updated on:Dec 25, 2024 | 7:29 AM

ನಟ ಶಿವರಾಜ್​ಕುಮರ್ ಅವರ ಅಭಿಮಾನಿಗಳ ಕೋರಿಕೆ ಈಡೇರಿದೆ. ಅವರ ಸರ್ಜರಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಭಾರತೀಯ ಕಾಲಮಾನ ಮಂಗಳವಾರ (ಡಿಸೆಂಬರ್ 24) ಸಂಜೆ 6 ಗಂಟೆಗೆ (ಅಮೆರಿಕದ ಕಾಲ ಮಾನ ಬೆಳಿಗ್ಗೆ 8 ಗಂಟೆಗೆ) ಆಪರೇಷನ್ ಆರಂಭ ಆಯಿತು. 4-5 ಗಂಟೆಗಳ ಕಾಲ ಆಪರೇಷನ್ ನಡೆದಿದ್ದು ಅದು ಯಶಸ್ವಿಯಾಗಿದೆ ಎಂಬ ವಿಚಾರ ಗೊತ್ತಾಗಿದೆ. ಈ ಬಗ್ಗೆ ಆಪ್ತ ಮೂಲಗಳು ಮಾಹಿತಿ ರಿವೀಲ್ ಮಾಡಿವೆ.

ಶಿವರಾಜ್​ಕುಮಾರ್ ಮೊದಲಿನಿಂದಲೂ ಪಾಸಿಟಿವ್ ಆಗಿ ಯೋಚಿಸುತ್ತಾ ಬಂದವರು. ಅವರು ಎಲ್ಲವನ್ನೂ ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತಾರೆ. ಅದೇ ರೀತಿ ಸರ್ಜರಿ ನಡೆಯುತ್ತದೆ ಎಂದಾಗ ಅದನ್ನೂ ಪಾಸಿಟಿವ್ ಆಗಿ ತೆಗೆದುಕೊಂಡರಯ. ಜೋಶ್​ನಲ್ಲಿ ಅಮೆರಿಕ ತೆರಳಿದ ಅವರು ಶಸ್ತಚಿಕಿತ್ಸೆ ಪೂರ್ಣಗೊಳಿಸಿಕೊಂಡಿದ್ದಾರೆ. ಈ ವಿಚಾರ ತಿಳಿದು ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.

ಹೋಮ-ಹವನ

ಶಿವರಾಜ್​ಕುಮಾರ್ ಅವರು ಬೇಗ ಚೇತರಿಕೆ ಕಾಣಲಿ ಎಂದು ಹೋಮ-ಹವನಗಳು ನಡೆದಿದ್ದವು. ಸಾಕಷ್ಟು ಕಡೆಗಳಲ್ಲಿ ಪೂಜೆ ಪುನಸ್ಕಾರ ಮಾಡಲಾಯಿತು. ಶಿವಣ್ಣನ ಅಭಿಮಾನಿಗಳು ದೇವರ ಮೊರೆ ಹೋದರು. ಈ ಎಲ್ಲ ಪೂಜೆ-ಪುನಸ್ಕಾರ, ಹೋಮ-ಹವನ ಹಾಗೂ ಅಭಿಮಾನಿಗಳ ಪ್ರಾರ್ಥನೆ ಫಲ ಕೊಟ್ಟಿದೆ.

ಆಗಿದ್ದೇನು?

ಶಿವರಾಜ್​ಕುಮಾರ್ ಅವರಿಗೆ ಕ್ಯಾನ್ಸರ್ ಇತ್ತು. ಇದಕ್ಕಾಗಿ ಅವರು ಅಮೆರಿಕದ ಫ್ಲೋರಿಡಾದ್ಲಿರುವ ಮಿಯಾಮಿ ಕ್ಯಾನ್ಸರ್ ಇನ್​ಸ್ಟಿಟ್ಯೂಟ್​ನಲ್ಲಿ ಸರ್ಜರಿ ಮಾಡಿಸಿಕೊಂಡರು. ಆರು ಗಂಟೆಗಳ ಕಾಲ ಆಪರೇಷನ್ ನಡೆದಿದೆ. ಡಾ. ಮುರುಗೇಶ್ ನೇತೃತ್ವದಲ್ಲಿ ಈ ಆಪರೇಷನ್ ನಡೆದಿದೆ. 4 ಗಂಟೆಗಳ ಕಾಲ ಆಪರೇಷನ್ ನಡೆದಿದೆ.

ಇದನ್ನೂ ಓದಿ:  ಅಮೆರಿಕದಲ್ಲಿ ಶಿವರಾಜ್​ಕುಮಾರ್​ಗೆ ಶಸ್ತ್ರ ಚಿಕಿತ್ಸೆ; ದೂರವಾಣಿ ಮೂಲಕ ಮಾತಾಡಿದ ಸಿಎಂ

ಬ್ರೇಕ್

ಶಿವರಾಜ್​ಕುಮಾರ್ ಅವರು ಈಗ ನಟನೆಯಿಂದ ದೊಡ್ಡ ಬ್ರೇಕ್ ಪಡೆದಿದ್ದಾರೆ. ಅವರು ಸಿನಿಮಾ ಕೆಲಸಗಳಿಗೆ ಅಲ್ಪವಿರಾಮ ಹಾಕಿ ಸಂಪೂರ್ಣಗಮನ ಆರೋಗದ್ಯದ ಮೇಲೆ ಹಾಕಿದ್ದಾರೆ. ಹೋಂ ಬ್ಯಾನರ್​ನಲ್ಲಿ ಮೂಡಿ ಬಂದ ‘ಭೈರತಿ ರಣಗಲ್’ ಚಿತ್ರದ ಕೆಲಸಗಳನ್ನು ಪೂರ್ಣಗೊಳಿಸಿದ ಅವರು, ಇದರ ಪ್ರಚಾರದಲ್ಲಿ ಭಾಗಿ ಆದರು. ಅಲ್ಲಿಯವರೆಗೆ ಶಿವಣ್ಣನಿಗೆ ಅನಾರೋಗ್ಯ ಎಂಬುದಷ್ಟೇ ಸುದ್ದಿ ಇತ್ತು. ಪ್ರಚಾರದ ವೇಳೆ ಅವರು ಈ ವಿಚಾರ ಒಪ್ಪಿಕೊಂಡರು. ಸಂದರ್ಶನದ ಸಂದರ್ಭದಲ್ಲಿ ತಮಗೆ ಅನಾರೋಗ್ಯ ಉಂಟಾಗಿರೋದು ಸತ್ಯ ಎಂದರು. ಅಮೆರಿಕಕ್ಕೆ ಹೋಗುವುದಕ್ಕೂ ಮೊದಲು ತಮಗೆ ಕ್ಯಾನ್ಸರ್ ಎಂಬ ವಿಚಾರ ರಿವೀಲ್ ಮಾಡಿದರು.

ಇದನ್ನೂ ಓದಿ: ‘ಅಪ್ಪನ ಹೆಸರನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದಕ್ಕೆ ಶಿವರಾಜ್​ಕುಮಾರ್ ಒಳ್ಳೆಯ ಉದಾಹರಣೆ’; ಧನುಷ್

ಈಗ ಅವರ ನಟನೆಯ ‘45’ ಸಿನಿಮಾ ಕೆಲಸಗಳು ಪೂರ್ಣಗೊಂಡಿವೆ. ಈ ಚಿತ್ರ 2025ರಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಇದೆ. ಈಗ ಅವರು ಕೆಲ ತಿಂಗಳು ಬ್ರೇಕ್ ಪಡೆಯಲಿದ್ದು ಆ ಬಳಿಕ ನಟನೆಗೆ ಮರಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:01 am, Wed, 25 December 24