AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Meghana Raj: ಶಾಲೆಗೆ ಸೇರಿದ ರಾಯನ್​ ರಾಜ್ ಸರ್ಜಾ; ಮೇಘನಾ ರಾಜ್ ಮಗನ ವಯಸ್ಸೆಷ್ಟು?

Raayan Raj Sarja: ರಾಜ್ಯದ ಎಲ್ಲ ಕಡೆಗಳಲ್ಲಿ ಶಾಲೆ ಆರಂಭ ಆಗಿದೆ. ಮೊದಲ ದಿನ ಎಲ್ಲ ಕಡೆಗಳಲ್ಲಿ ಶಾಲಾ ಆರಂಭೋತ್ಸವ ಮಾಡಲಾಗಿದೆ. ಮೇಘನಾ ರಾಜ್​ ಕೂಡ ಮಗನನ್ನು ಶಾಲೆಗೆ ಸೇರಿಸಿ ಸಂಭ್ರಮಿಸಿದ್ದಾರೆ.

Meghana Raj: ಶಾಲೆಗೆ ಸೇರಿದ ರಾಯನ್​ ರಾಜ್ ಸರ್ಜಾ; ಮೇಘನಾ ರಾಜ್ ಮಗನ ವಯಸ್ಸೆಷ್ಟು?
ರಾಯನ್​ ಜೊತೆ ಮೇಘನಾ ರಾಜ್​
ರಾಜೇಶ್ ದುಗ್ಗುಮನೆ
|

Updated on:Jun 02, 2023 | 7:38 AM

Share

ನಟಿ ಮೇಘನಾ ರಾಜ್ (Meghana Raj) ಬಾಳಲ್ಲಿ ಇತ್ತೀಚೆಗೆ ಎಲ್ಲವೂ ಒಳ್ಳೆಯದೇ ಆಗುತ್ತಿದೆ. ಚಿರಂಜೀವಿ ಸರ್ಜಾ ಮೃತಪಟ್ಟ ನಂತರ ಅವರಿಗೆ ದಿಕ್ಕೇ ತೋಚದಂತಾಗಿತ್ತು. ಚಿರು ಮೃತಪಡುವಾಗ ಅವರು ಪ್ರೆಗ್ನೆಂಟ್ ಆಗಿದ್ದರು. ನಂತರ ರಾಯನ್ (Raayan Raj Sarja ) ಹುಟ್ಟಿದ. ಈಗ ಆತನನ್ನು ಶಾಲೆಗೆ ಸೇರಿಸುವ ಕೆಲಸ ಆಗಿದೆ. ಈ ಖುಷಿಯನ್ನು ಮೇಘನಾ ರಾಜ್ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ. ನಟಿಯ ಸಂಭ್ರಮದಲ್ಲಿ ಅಭಿಮಾನಿಗಳು ಕೂಡ ಕೈ ಜೋಡಿಸಿದ್ದಾರೆ. ಹಾಗಾದರೆ ರಾಯನ್ ರಾಜ್ ಸರ್ಜಾಗೆ ಈಗ ವಯಸ್ಸೆಷ್ಟು? ಆ ಬಗ್ಗೆ ಇಲ್ಲಿದೆ ಮಾಹಿತಿ.

ಮೇ 31ರಂದು ರಾಜ್ಯದ ಎಲ್ಲ ಕಡೆಗಳಲ್ಲಿ ಶಾಲೆ ಆರಂಭ ಆಗಿದೆ. ಮೊದಲ ದಿನ ಎಲ್ಲ ಕಡೆಗಳಲ್ಲಿ ಶಾಲಾ ಆರಂಭೋತ್ಸವ ಮಾಡಲಾಗಿದೆ. ಮೇಘನಾ ರಾಜ್​ ಕೂಡ ಮಗನನ್ನು ಶಾಲೆಗೆ ಸೇರಿಸಿ ಸಂಭ್ರಮಿಸಿದ್ದಾರೆ. ‘ಇಂದು ವಿಶೇಷ ದಿನ. ರಾಯನ್​ಗೆ ಶಾಲೆಯ ಮೊದಲ ದಿನ. ನಾನು ಅನುಭವಿಸಿದ ಭಾವನೆಗಳನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಶಿಕ್ಷಣ, ಜ್ಞಾನ ಮತ್ತು ಮುಖ್ಯವಾಗಿ ಜೀವನ ಪಾಠಗಳ ಕಡೆಗೆ ಅವನ ಮೊದಲ ಹೆಜ್ಜೆ. ನಮ್ಮ ಪುಟ್ಟ ಮಗುವಿಗೆ ನಿಮ್ಮೆಲ್ಲರ ಶುಭಾಶಯ ಮತ್ತು ಆಶೀರ್ವಾದ ಬೇಕು’ ಎಂದು ಬರೆದುಕೊಂಡಿದ್ದಾರೆ.

ರಾಯನ್​ಗೆ ಈಗ ಎರಡು ವರ್ಷ ಏಳು ತಿಂಗಳು. ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಮೇಘನಾ ರಾಜ್ ಅವರು ರಾಯನ್​​ನ ಮಾಂಟೆಸ್ಸರಿ ಶಾಲೆಗೆ ಸೇರಿಸಿದ್ದಾರೆ. ಮೇಘನಾ ರಾಜ್​​ ಮಗ ರಾಯನ್ ಉತ್ತಮ ಶಿಕ್ಷಣ ಪಡೆಯಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.

View this post on Instagram

A post shared by Meghana Raj Sarja (@megsraj)

ಇದನ್ನೂ ಓದಿ: Meghana Raj: ಬರ್ತ್​ಡೇ ಸಂಭ್ರಮದಲ್ಲಿ ಪತಿ ಚಿರು ಸರ್ಜಾ ನೆನಪಿಸಿಕೊಂಡ ಮೇಘನಾ ರಾಜ್

ಕೆಲವು ವರ್ಷಗಳಿಂದ ನಟಿ ಮೇಘನರಾಜ್ ಯಾವುದೇ ಚಿತ್ರದಲ್ಲಿ ಅಭಿನಯಿಸಿರಲಿಲ್ಲ. ಅವರು ಮರಳಿ ಚಿತ್ರರಂಗಕ್ಕೆ ಬರಬೇಕು ಎಂಬುದು ಅಭಿಮಾನಿಗಳ ಕೋರಿಕೆ ಆಗಿತ್ತು. ಈ ಕೋರಿಕೆ ಈಡೇರಿದೆ. ‘ತತ್ಸಮ ತದ್ಭವ’ ಸಿನಿಮಾ ಮೂಲಕ ಅವರು ಕಂಬ್ಯಾಕ್ ಮಾಡುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.

ಮೇಘನಾ ರಾಜ್ ಗೆಳೆಯ ಪನ್ನಗ ಭರಣ ಅವರು ಈ ಚಿತ್ರಕ್ಕೆ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಇದೆ. ಅನೇಕ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:37 am, Fri, 2 June 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್