For Regn: ಮಿಲನಾ-ಪೃಥ್ವಿ ಅದೃಷ್ಟದ ತಿಂಗಳಲ್ಲೇ ‘ಫಾರ್​ ರಿಜಿಸ್ಟ್ರೇಷನ್​’ ಚಿತ್ರ ರಿಲೀಸ್​; ಫೆ.10ಕ್ಕೆ ಡೇಟ್​ ಫಿಕ್ಸ್​

| Updated By: ಮದನ್​ ಕುಮಾರ್​

Updated on: Nov 03, 2022 | 7:30 AM

Pruthvi Ambaar | Milana Nagaraj: ‘ಫಾರ್​ ರಿಜಿಸ್ಟ್ರೇಷನ್​’ ಚಿತ್ರದ ಫಸ್ಟ್ ಲುಕ್ ಹಾಗೂ ಬಿಡುಗಡೆ ದಿನಾಂಕವನ್ನು ಅನಾವರಣ ಮಾಡಲಾಗಿದೆ. ಈ ಸಿನಿಮಾದಲ್ಲಿ ಮಿಲನಾ ನಾಗರಾಜ್​ ಹಾಗೂ ಪೃಥ್ವಿ ಅಂಬರ್​ ಜೋಡಿಯಾಗಿ ನಟಿಸಿದ್ದಾರೆ.

For Regn: ಮಿಲನಾ-ಪೃಥ್ವಿ ಅದೃಷ್ಟದ ತಿಂಗಳಲ್ಲೇ ‘ಫಾರ್​ ರಿಜಿಸ್ಟ್ರೇಷನ್​’ ಚಿತ್ರ ರಿಲೀಸ್​; ಫೆ.10ಕ್ಕೆ ಡೇಟ್​ ಫಿಕ್ಸ್​
ಪೃಥ್ವಿ ಅಂಬರ್, ಮಿಲನಾ ನಾಗರಾಜ್
Follow us on

ನಟಿ ಮಿಲನಾ ನಾಗರಾಜ್​ (Milana Nagaraj) ಅವರು ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ಹೀರೋಯಿನ್​ ಆಗಿ ಬ್ಯುಸಿಯಾಗಿದ್ದಾರೆ. ಅವರಿಗೆ ಫೆಬ್ರವರಿ ತಿಂಗಳು ತುಂಬಾ ಲಕ್ಕಿ. ಮಿಲನಾ ನಟಿಸಿದ್ದ ‘ಲವ್​ ಮಾಕ್ಟೇಲ್​’ ಚಿತ್ರ 2020ರ ಫೆಬ್ರವರಿ ಸನಿಹದಲ್ಲಿ (ಜ.31) ತೆರೆಕಂಡಿತ್ತು. ‘ಲವ್​ ಮಾಕ್ಟೇಲ್​ 2’ ಚಿತ್ರ 2022ರ ಫೆ.11ರಂದು ಬಿಡುಗಡೆಯಾಗಿ ಸೂಪರ್​ ಹಿಟ್​ ಆಯಿತು. ಅದೇ ರೀತಿ ಪೃಥ್ವಿ ಅಂಬರ್​ (Pruthvi Ambaar) ನಟಿಸಿದ್ದ ‘ದಿಯಾ’ ಚಿತ್ರ 2020ರ ಫೆ.7ರಂದು ತೆರೆಕಂಡು ಗಮನ ಸೆಳೆದಿತ್ತು. ಈಗ ಮಿಲನಾ ಮತ್ತು ಪೃಥ್ವಿ ಅಂಬರ್​ ಅವರು ಜೊತೆಯಾಗಿ ನಟಿಸಿರುವ ‘ಫಾರ್​ ರಿಜಿಸ್ಟ್ರೇಷನ್​’ (For Regn) ಸಿನಿಮಾ ಕೂಡ ಫೆಬ್ರವರಿ ತಿಂಗಳಲ್ಲೇ ರಿಲೀಸ್​ ಆಗುತ್ತಿರುವುದು ವಿಶೇಷ. 2023ರ ಫೆ.10ರಂದು ಈ ಸಿನಿಮಾ ತೆರೆಕಾಣಲಿದೆ.

ನಿರ್ಮಾಪಕ ನವೀನ್ ರಾವ್ ಹಾಗೂ ನಿರ್ದೇಶಕ ನವೀನ್ ದ್ವಾರಕನಾಥ್ ಅವರ ಪೋಷಕರು ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ‘ಫಾರ್​ ರಿಜಿಸ್ಟ್ರೇಷನ್​’ ಚಿತ್ರದ ಫಸ್ಟ್ ಲುಕ್ ಹಾಗೂ ಬಿಡುಗಡೆ ದಿನಾಂಕವನ್ನು ಅನಾವರಣ ಮಾಡಿದರು. ಈ ಸಿನಿಮಾದಲ್ಲಿ ಪೃಥ್ವಿ ಅಂಬರ್, ಮಿಲನಾ ನಾಗರಾಜ್ ಜೊತೆಗೆ ರವಿಶಂಕರ್, ಬಾಬು ಹಿರಣ್ಣಯ್ಯ, ಸ್ವಾತಿ, ಸುಧಾ ಬೆಳವಾಡಿ, ತಬಲ ನಾಣಿ, ರಮೇಶ್ ಭಟ್, ಸಿಹಿಕಹಿ ಚಂದ್ರು ಮುಂತಾದ ಕಲಾವಿದರು ನಟಿಸಿದ್ದಾರೆ.

‘ಒಳ್ಳೆಯ ತಂಡದ ಜೊತೆ ಒಂದು ಒಳ್ಳೆಯ ಸಿನಿಮಾ ಮಾಡಿದ ಖುಷಿ ಇದೆ. ಈ ಸಿನಿಮಾದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ಫೆಬ್ರವರಿ ತಿಂಗಳು ನನಗೆ ಲಕ್ಕಿ. ಈ ಚಿತ್ರ ಕೂಡ ಅದೇ ತಿಂಗಳಲ್ಲಿ ತೆರೆಗೆ ಬರುತ್ತಿರುವುದು ಮತ್ತಷ್ಟು ಸಂತಸ ತಂದಿದೆ’ ಎಂದು ಮಿಲನಾ ನಾಗರಾಜ್ ಹೇಳಿದ್ದಾರೆ. ‘ಎಲ್ಲದಕ್ಕೂ ರಿಜಿಸ್ಟ್ರೇಷನ್ ಕಡ್ಡಾಯ. ಪ್ರೀತಿಗೂ ರಿಜಿಸ್ಟ್ರೇಷನ್ ಕಡ್ಡಾಯವಾದರೆ ಹೇಗಿರುತ್ತದೆ ಎಂಬುದನ್ನು ನಾವು ತೋರಿಸಿದ್ದೇವೆ’ ಎಂದಿದ್ದಾರೆ ಪೃಥ್ವಿ ಅಂಬರ್.

ಇದನ್ನೂ ಓದಿ
Milana Nagaraj: ‘ಡಿಯರ್​​ ವಿಕ್ರಮ್​’ ಹೇಗಿದೆ? ಸತೀಶ್​ ನೀನಾಸಂ, ಶ್ರದ್ಧಾ ಶ್ರೀನಾಥ್​ ನಟನೆಯ ಚಿತ್ರಕ್ಕೆ ಮಿಲನಾ ವಿಮರ್ಶೆ
Darling Krishna Birthday: ಬರ್ತ್​ಡೇ ಪ್ರಯುಕ್ತ ಮಾಲ್ಡೀವ್ಸ್​ಗೆ ತೆರಳಿದ ಡಾರ್ಲಿಂಗ್​ ಕೃಷ್ಣ-ಮಿಲನಾ; ಇಲ್ಲಿವೆ ಕ್ಯೂಟ್​ ಜೋಡಿಯ ಫೋಟೋ
‘ಅವತಾರ ಪುರುಷ’ ಸಿನಿಮಾ ನೋಡಿ ಕಣ್ಣಲ್ಲಿ ನೀರು ಬರುವಷ್ಟು ನಕ್ಕುಬಿಟ್ಟೆ ಎಂದ ಮಿಲನಾ ನಾಗರಾಜ್
ಸಿಂಗಾಪುರದಲ್ಲಿ ಮಿಲನಾ ನಾಗರಾಜ್​-ಡಾರ್ಲಿಂಗ್ ಕೃಷ್ಣ; ವೈರಲ್ ಆಯ್ತು ಫೋಟೋ

(ಫಾರ್ ರಿಜಿಸ್ಟ್ರೇಷನ್ ಚಿತ್ರತಂಡ)

ನಿರ್ದೇಶಕ ನವೀನ್ ದ್ವಾರಕನಾಥ್ ಹಾಗೂ ನಿರ್ಮಾಪಕ ನವೀನ್ ರಾವ್ ಅವರು ಬಹುಕಾಲದ ಸ್ನೇಹಿತರು. ‘ಕಿರುಚಿತ್ರಗಳನ್ನು ನಿರ್ದೇಶಿಸುತ್ತಿದ್ದ ನನಗೆ ಈ ಚಿತ್ರವನ್ನು ನಿರ್ದೇಶಿಸಲು ಪ್ರೇರೇಪಿಸಿದ್ದು ನನ್ನ ಸ್ನೇಹಿತ ನವೀನ್ ರಾವ್. ನಮ್ಮ ಸಿನಿಮಾ ಆರಂಭಿಸುವಾಗ ಪೃಥ್ವಿ ಅಂಬರ್​ ಅವರ ‘ದಿಯಾ’ ಹಾಗೂ ಮಿಲನಾ ನಾಗರಾಜ್ ಅವರು ‘ಲವ್​ ಮಾಕ್ಟೇಲ್​’ ಚಿತ್ರ ಯಶಸ್ವಿ ಆಗಿದ್ದವು. ಅವರಿಬ್ಬರೇ ನಮ್ಮ ಚಿತ್ರದ ನಾಯಕ-ನಾಯಕಿ ಅಂತ ನಾವು ನಿರ್ಧರಿಸಿದೆವು. ಈಗ ನಮ್ಮ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ’ ಎಂದು ನವೀನ್ ದ್ವಾರಕನಾಥ್ ಹೇಳಿದ್ದಾರೆ. ಈ ಚಿತ್ರಕ್ಕೆ ಆರ್​.ಕೆ. ಹರೀಶ್​ ಸಂಗೀತ ನಿರ್ದೇಶನ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.