Puneeth Rajkumar: ಕನ್ನಡ ಧ್ವಜದಲ್ಲಿ ಅಪ್ಪು ಫೋಟೋ ಹಾಕಿದ್ದಕ್ಕೆ ಮಹಿಳೆ ವಿರೋಧ; ಸಿಡಿದೆದ್ದ ಪುನೀತ್​ ಅಭಿಮಾನಿಗಳು

Puneeth Rajkumar | Kannada Flag: ಕನ್ನಡ ಬಾವುಟದಲ್ಲಿ ಪುನೀತ್​ ಫೋಟೋ ಹಾಕಿದ್ದನ್ನು ಮಹಿಳೆಯೊಬ್ಬರು ವಿರೋಧಿಸಿದ್ದಾರೆ. ಮಹಿಳೆಯ ವರ್ತನೆಗೆ ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Puneeth Rajkumar: ಕನ್ನಡ ಧ್ವಜದಲ್ಲಿ ಅಪ್ಪು ಫೋಟೋ ಹಾಕಿದ್ದಕ್ಕೆ ಮಹಿಳೆ ವಿರೋಧ; ಸಿಡಿದೆದ್ದ ಪುನೀತ್​ ಅಭಿಮಾನಿಗಳು
ವಿವಾದ ಎಬ್ಬಿಸಿದ ಮಹಿಳೆ, ಕನ್ನಡ ಧ್ವಜದಲ್ಲಿ ಅಪ್ಪು ಪೋಟೋ
Follow us
TV9 Web
| Updated By: ಮದನ್​ ಕುಮಾರ್​

Updated on:Nov 03, 2022 | 7:52 PM

ನಟ ಪುನೀತ್ ರಾಜ್​ಕುಮಾರ್ (Puneeth Rajkumar)​ ಎಂದರೆ ಅಭಿಮಾನಿಗಳ ಪಾಲಿಗೆ ಒಂದು ಎಮೋಷನ್​. ಕನ್ನಡ ಧ್ವಜದಲ್ಲಿ ಪುನೀತ್​ ರಾಜ್​ಕುಮಾರ್​ ಅವರ ಫೋಟೋ ಹಾಕಿ ಫ್ಯಾನ್ಸ್​ ಗೌರವ ಸಲ್ಲಿಸುತ್ತಿದ್ದಾರೆ. ಆದರೆ ಈ ರೀತಿ ಕನ್ನಡದ ಬಾವುಟದಲ್ಲಿ ಪುನೀತ್​ ಅವರ ಫೋಟೋ ಹಾಕಿದ್ದನ್ನು ಮಹಿಳೆಯೊಬ್ಬರು ವಿರೋಧಿಸಿದ್ದಾರೆ. ಮಹಿಳೆಯ ವರ್ತನೆಗೆ ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದಲ್ಲಿ ಈ ಘಟನೆ ನಡೆದಿದೆ. ಕರ್ನಾಟಕದ ಬಾವುಟದಲ್ಲಿ (Kannada Flag) ಅಪ್ಪು ಫೋಟೋ ಇರುವುದನ್ನು ಮಹಿಳೆ ವಿರೋಧಿಸುತ್ತಿರುವ ವಿಡಿಯೋ ಲಭ್ಯವಾಗಿದೆ. ಈ ಮಹಿಳೆ ಕ್ಷಮೆ ಕೇಳಬೇಕು ಎಂದು ‘ಪವರ್​ ಸ್ಟಾರ್​’ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ.

‘ನಾವು ಕೂಡ ಕನ್ನಡವರೇ. ನಮ್ಮ ಫೋಟೋ ಬಾವುಟದಲ್ಲಿ ಯಾಕೆ ಇಲ್ಲ? ಪುನೀತ್​ ಅಂದ್ರೆ ಕನ್ನಡಾಂಬೆ ಅಲ್ಲ. ಪುನೀತನ ಚಿತ್ರ ಬಾವುಟದಲ್ಲಿ ಬರಬಾರದು’ ಎಂದು ಮಹಿಳೆಯು ಕೂಗಾಡಿದ್ದಾರೆ. ಈ ಘಟನೆಯನ್ನು ಅಪ್ಪು ಅಭಿಮಾನಿಗಳು ಖಂಡಿಸಿದ್ದಾರೆ. ಮಹಿಳೆ ಹೇಳಿದ ಮಾತುಗಳನ್ನು ಸ್ಥಳದಲ್ಲೇ ಇದ್ದ ಆಟೋ ಚಾಲಕರು ವಿರೋಧಿಸಿದ್ದಾರೆ.

ಈ ಘಟನೆ ಬಗ್ಗೆ ಪುನೀತ್​ ಅಭಿಮಾನಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ‘ಆಟೋದವರು ಪುನೀತ್​ ಫೋಟೋ ಇರುವ ಬಾವುಟ ಹಾಕಿಕೊಂಡಿದ್ದರು. ಅದನ್ನು ನೋಡಿ ಈ ಮಹಿಳೆ ವಿರೋಧ ವ್ಯಕ್ತಪಡಿಸಿದರು. ತಾವು ಯಾರಿಗೂ ಹೆದರುವುದಿಲ್ಲ ಅಂತ ಕೂಗಾಡಿದ್ದಾರೆ. ಆಕೆ ಕ್ಷಮೆ ಕೇಳಬೇಕು. ಪ್ರತಿ ಮನೆಯಲ್ಲೂ ಪುನೀತ್ ರಾಜ್​ಕುಮಾರ್​ ಅವರ ಫೋಟೋ ಇಟ್ಟು ಪೂಜೆ ಮಾಡಲಾಗುತ್ತಿದೆ. ಅಂಥವರ ಬಗ್ಗೆ ಈ ರೀತಿ ಮಾತಾಡಿದ್ದು ಸರಿಯಲ್ಲ. ಬಾವುಟದಲ್ಲಿ ಅಪ್ಪು ಫೋಟೋ ಹಾಕಿದ್ದಕ್ಕೆ ಸರ್ಕಾರವೇ ಆಕ್ಷೇಪಿಸಿಲ್ಲ. ನಿಧನರಾದ ವ್ಯಕ್ತಿ ಬಗ್ಗೆ ಈ ಮಹಿಳೆ ಈ ರೀತಿ ಮಾತನಾಡಿದ್ದು ತಪ್ಪು. ಲೈವ್​ನಲ್ಲಿ ಬಂದು ಅವರು ಕ್ಷಮೆ ಕೇಳಬೇಕು’ ಎಂದು ಅಪ್ಪು ಅಭಿಮಾನಿ ಹೇಳಿದ್ದಾರೆ.

ಇದನ್ನೂ ಓದಿ
Image
Puneeth Rajkumar: ಪುನೀತ್​ ರಾಜ್​ಕುಮಾರ್ ಇಲ್ಲದೇ ಕಳೆಯಿತು 11 ತಿಂಗಳು; ಸಮಾಧಿ ಬಳಿ ಕಣ್ಣೀರು ಹಾಕಿದ ಫ್ಯಾನ್ಸ್​
Image
ಹೊಸಪೇಟೆ ಪುನೀತ್ ಪುತ್ಥಳಿಗೆ ವಿನಯ್ ರಾಜ್​ಕುಮಾರ್ ಮಾಲಾರ್ಪಣೆ
Image
Kantara: ‘ಕಾಂತಾರ’ ಚಿತ್ರಕ್ಕೆ ಪುನೀತ್​ ಹೀರೋ ಆಗ್ಬೇಕಿತ್ತು; ಆ ಸ್ಥಾನಕ್ಕೆ ರಿಷಬ್ ಶೆಟ್ಟಿ ಬಂದಿದ್ದು ಹೇಗೆ? ಇಲ್ಲಿದೆ ಉತ್ತರ
Image
ಪುನೀತ್ ಜನ್ಮದಿನ ಇನ್ಮುಂದೆ ‘ಸ್ಫೂರ್ತಿ ದಿನ’; ಸಚಿವ ಸುನೀಲ್ ಕುಮಾರ್ ಮನವಿ ಪುರಸ್ಕರಿಸಿದ ಸಿಎಂ ಬೊಮ್ಮಾಯಿ

ಪುನೀತ್​ ರಾಜ್​ಕುಮಾರ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ, ‘ಗಂಧದ ಗುಡಿ’ ಸಾಕ್ಷ್ಯಚಿತ್ರ ಬಿಡುಗಡೆ, ಕನ್ನಡ ರಾಜ್ಯೋತ್ಸವ ಆಚರಣೆ, ಅಪ್ಪುಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ… ಈ ವಿಶೇಷ ದಿನಗಳು ಒಂದರ ಹಿಂದೊಂದು ಬಂದಿರುವ ಕಾರಣ ಅಭಿಮಾನಿಗಳು ಎಲ್ಲವನ್ನೂ ಒಟ್ಟಾಗಿ ಆಚರಿಸಿದ್ದಾರೆ. ಅನೇಕ ರಸ್ತೆಗಳಲ್ಲಿ ಪುನೀತ್​ ರಾಜ್​ಕುಮಾರ್​ ಅವರ ಭಾವಚಿತ್ರ ಇರುವ ಕನ್ನಡದ ಬಾವುಟ ಹಾರಾಡುತ್ತಿದೆ. ಹಲವು ಬಗೆಯಲ್ಲಿ ಅಭಿಮಾನಿಗಳು ಅಪ್ಪುಗೆ ನಮನ ಸಲ್ಲಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:27 pm, Thu, 3 November 22

ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?