
ವಿಜಯ್ ರಾಘವೇಂದ್ರ, ಪ್ರಿಯಾಂಕಾ ತಿಮ್ಮೇಶ್ ಒಟ್ಟಿಗೆ ನಟಿಸಿರುವ ಆಕ್ಷನ್-ಥ್ರಿಲ್ಲರ್ ಸಿನಿಮಾ ‘ರುದ್ರಾಭಿಷೇಕಂ’ ಸಿನಿಮಾ ನಾಳೆ (ಶುಕ್ರವಾರ) ರಿಲೀಸ್ ಆಗಲಿದೆ. ಒಂಬತ್ತು ಮಂದಿ ರೈತರು ಒಟ್ಟಿಗೆ ಸೇರಿ ನಿರ್ಮಿಸಿರುವ ಈ ಸಿನಿಮಾ ಸಾಕಷ್ಟು ನಿರೀಕ್ಷೆಯನ್ನು ಸೃಷ್ಟಿಸಿದೆ.
ಡಾಲಿ ಧನಂಜಯ್ ನಿರ್ಮಾಣ ಮಾಡಿ, ಮೈಸೂರು ಪೂರ್ಣ, ಅದಿತಿ ಸಾಗರ್ ನಟನೆ ಮಾಡಿರುವ ಹಾಸ್ಯ ಪ್ರಧಾನ ಎಮೋಷನಲ್ ಸಿನಿಮಾ ಆಗಿರುವ ‘ಹೆಗ್ಗಣ ಮುದ್ದು’ ಈ ವಾರ ರಿಲೀಸ್ ಆಗಿದೆ. ಸಿನಿಮಾ ಅನ್ನು ಅವಿನಾಶ್ ನಿರ್ದೇಶನ ಮಾಡಿದ್ದಾರೆ.
ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ನಾಯಕನಾಗಿ ನಟಿಸಿರುವ ‘ಸ್ಪಾರ್ಕ್’ ಸಿನಿಮಾ ಸಹ ಈ ವಾರ ರಿಲೀಸ್ ಆಗಿದೆ. ಸಿನಿಮಾನಲ್ಲಿ ಪ್ರೇಮ್ ವಿಲನ್ ಆಗಿ ನಟಿಸಿದ್ದಾರೆ. ಸಿನಿಮಾನಲ್ಲಿ ಜನಪ್ರಿಯ ನಟಿ ಭಾವನಾ ಸಹ ಇದ್ದಾರೆ. ಈ ಸಿನಿಮಾ ಸಹ ಸಾಕಷ್ಟು ಕುತೂಹಲ ಕೆರಳಿಸಿದೆ.
ಮನೋಜ್ ಕುಮಾರ್ ನಿರ್ದೇಶನ ಮಾಡಿರುವ ‘ಪ್ರೇಮದ ಊರಲಿ’ ಸಿನಿಮಾ ನಾಳೆ (ಸೆಪ್ಟೆಂಬರ್ 25) ರಿಲೀಸ್ ಆಗುತ್ತಿದೆ. ಹೆಸರೇ ಹೇಳುವಂತೆ ರೊಮ್ಯಾಂಟಿಕ್ ಸಿನಿಮಾ ಇದಾಗಿದ್ದು, ಸಿನಿಮಾನಲ್ಲಿ ರಂಗಾಯಣ ರಘು ಜೊತೆಗೆ, ಶ್ರೀರಾಮ್, ತಪಸ್ವಿನಿ, ರಮಿಕಾ ಅವರುಗಳು ನಟಿಸಿದ್ದಾರೆ.
ಈ ಹಿಂದೆ ‘ಕರೆಬೇಟೆ’ ಹೆಸರಿನ ಸಿನಿಮಾದ ಮೂಲಕ ಗಮನ ಸೆಳೆದಿದ್ದ ನಟ ಗೌರಿಶಂಕರ್ ನಟನೆ ಮಾಡಿರುವ ಹೊಸ ಸಿನಿಮಾ ‘ಕಾಮನ್ ಮ್ಯಾನ್’. ರಾಜಕೀಯ ಕುರಿತಾದ ಕತೆಯುಳ್ಳ ಈ ಸಿನಿಮಾ ಓಂ ಸಾಯಿ ಪ್ರಕಾಶ್ ನಿರ್ದೇಶಕರು. ಸಿನಿಮಾ ಶುಕ್ರವಾರ ರಿಲೀಸ್ ಆಗುತ್ತಿದೆ.
ರಾಗಿಣಿ ದ್ವಿವೇದಿ, ಆರ್ಕೆ ಚಂದನ್, ರಾಜೇಶ್ ನಟರಂಗ ಇನ್ನೂ ಕೆಲವು ಪ್ರತಿಭಾವಂತ ನಟ-ನಟಿಯರು ನಟಿಸಿರುವ ಕನ್ನಡ ಸಿನಿಮಾ ‘ಬಿಂಗೊ’ ಸಹ ಇದೇ ಶುಕ್ರವಾರ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ.
ತೆಲುಗಿನ ಜನಪ್ರಿಯ ನಟ ನಾನಿ ನಟನೆ ಮಾಡಿರುವ ‘ದಿ ಪ್ಯಾರಡೈಸ್’ ಸಿನಿಮಾ ಈ ವಾರ ತೆರೆಗೆ ಬಂದಿದೆ. ಗುರುವಾರವೇ ಸಿನಿಮಾ ರಿಲೀಸ್ ಆಗಿದ್ದು, ಮೊದಲ ದಿನ ಮಿಶ್ರ ಪ್ರತಿಕ್ರಿಯೆಗಳನ್ನು ಈ ಸಿನಿಮಾ ಪಡೆದುಕೊಂಡಿದೆ.
ತಮನ್ನಾ ಭಾಟಿಯಾ, ಸಿದ್ಧಾರ್ಥ್ ಮಲ್ಹೋತ್ರಾ ಮುಖ್ಯ ಪಾತ್ರದಲ್ಲಿ ನಟನೆ ಮಾಡಿರುವ ಹಾರರ್ ಥ್ರಿಲ್ಲರ್ ಸಿನಿಮಾ ‘ವಿವಾನ್: ಫೋರ್ಸ್ ಆಫ್ ದಿ ಫಾರೆಸ್ಟ್’ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರಲಿದೆ.
‘ಅವೇಂಜರ್ಸ್: ಎಂಡ್ಗೇಮ್ ಎನ್ಕೋರ್’ ಸಿನಿಮಾ ಕೆಲವು ಹೆಚ್ಚುವರಿ ದೃಶ್ಯಗಳ ಜೊತೆಗೆ ಇದೇ ಶುಕ್ರವಾರ ವಿಶ್ವದಾದ್ಯಂತ ಮರು ಬಿಡುಗಡೆ ಆಗುತ್ತಿದೆ. ಇದೇ ಡಿಸೆಂಬರ್ಗೆ ‘ಅವೇಂಜರ್ಸ್: ಡೂಮ್ಸ್ಡೇ’ ಸಿನಿಮಾ ರಿಲೀಸ್ ಆಗುತ್ತಿದ್ದು, ಅದಕ್ಕೆ ಮುಂಚೆ ಎಂಡ್ಗೇಮ್ ಸಿನಿಮಾಕ್ಕೆ ಹೆಚ್ಚುವರಿ ದೃಶ್ಯಗಳನ್ನು ಸೇರಿಸಿ ರಿಲೀಸ್ ಮಾಡಲಾಗಿದೆ.