ಮದುವೆ ರಿಸೆಪ್ಷನ್​ನಲ್ಲಿ ಸಿನಿಮಾ ಘೋಷಣೆ ಮಾಡಿದ ನಾಗಭೂಷಣ್

Nagabhushan: ನಟ ನಾಗಭೂಷಣ್ ಅವರ ಮದುವೆ ಇತ್ತೀಚೆಗಷ್ಟೆ ಬೆಳಗಾವಿಯಲ್ಲಿ ನಡೆದಿದೆ. ನಿನ್ನೆ ಮೈಸೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು, ಇದೇ ಸಂದರ್ಭದಲ್ಲಿ ನಾಗಭೂಷಣ್ ಅವರ ಹೊಸ ಸಿನಿಮಾ ಘೋಷಣೆ ಮಾಡಲಾಗಿದೆ.

ಮದುವೆ ರಿಸೆಪ್ಷನ್​ನಲ್ಲಿ ಸಿನಿಮಾ ಘೋಷಣೆ ಮಾಡಿದ ನಾಗಭೂಷಣ್
ನಾಗಭೂಷಣ್
Follow us
ಮಂಜುನಾಥ ಸಿ.
|

Updated on: Feb 03, 2024 | 3:45 PM

ನಟ ನಾಗಭೂಷಣ್ (Nagabhushan), ಹಾಸ್ಯ ನಟನಿಂದ ನಾಯಕ ನಟನಾಗಿ ಬಡ್ತಿ ಪಡೆದಿದ್ದಾರೆ. ಕೋವಿಡ್ ಸಮಯದಲ್ಲಿ ಬಿಡುಗಡೆ ಆಗಿದ್ದ ‘ಇಕ್ಕಟ್ಟು’, ಇತ್ತೀಚೆಗೆ ಬಿಡುಗಡೆ ಆದ ‘ಟಗರು ಪಲ್ಯ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ಇನ್ನೂ ಕೆಲವು ಹಾಸ್ಯಪ್ರಧಾನ ಸಿನಿಮಾಗಳಲ್ಲಿ ನಾಯಕ ನಟನಾಗಿ ನಾಗಭೂಷಣ್ ಕಾಣಿಸಿಕೊಳ್ಳಲಿದ್ದು, ಇದೀಗ ತಮ್ಮ ಮದುವೆ ಆರತಕ್ಷದಲ್ಲಿಯೇ ನಾಗಭೂಷಣ್ ತಮ್ಮ ಹೊಸ ಸಿನಿಮಾದ ಘೋಷಣೆ ಮಾಡಿದ್ದಾರೆ.

ಇತ್ತೀಚೆಗಷ್ಟೆ ನಟ ನಾಗಭೂಷಣ್ ಪೂಜಾ ಪ್ರಕಾಶ್ ಎಂಬುವರೊಟ್ಟಿಗೆ ಬೆಳಗಾವಿಯಲ್ಲಿ ವಿವಾಹವಾದರು. ಮದುವೆಯಲ್ಲಿ ನಾಗಭೂಷಣ್ ಅವರ ಆತ್ಮೀಯ ಗೆಳೆಯರು ಭಾಗವಹಿಸಿದ್ದರು. ನಿನ್ನೆ (ಫೆಬ್ರವರಿ 2) ಮೈಸೂರಿನಲ್ಲಿ ನಾಗಭೂಷಣ್ ಹಾಗೂ ಪೂಜಾ ಪ್ರಕಾಶ್ ಅವರ ಮದುವೆ ರಿಸೆಪ್ಷನ್ ನಡೆಯಿತು. ಈ ವೇಳೆ ನಾಗಭೂಷಣ್ ಅವರ ಹೊಸ ಸಿನಿಮಾ ಘೋಷಣೆ ಸಹ ಆಯ್ತು. ರಿಸೆಪ್ಷನ್ ವೇದಿಕೆ ಮೇಲೆಯೇ ಹೊಸ ಸಿನಿಮಾದ ಸಂಭಾವನೆಯ ಅಡ್ವಾನ್ಸ್ ಚೆಕ್ ಅನ್ನು ನಾಗಭೂಷಣ್​ಗೆ ನೀಡಿದ್ದು ವಿಶೇಷ.

ಇದನ್ನೂ ಓದಿ:ಅಪಘಾತ ಪ್ರಕರಣದಲ್ಲಿ ನಟ ನಾಗಭೂಷಣ್​ಗೆ ಹೆಚ್ಚಿತು ಸಂಕಷ್ಟ; ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಕೆ

ನಿಹಾರಿಕಾ ಮೂವಿಸ್‌ನಿಂದ ಪ್ರೊಡಕ್ಷನ್‌ ನಂ.3 ಸಿನಿಮಾ ಅನೌನ್ಸ್‌ ಆಗಿದ್ದು, ನಿರ್ಮಾಪಕ ಶ್ರೀಹರಿಯವರು ನಾಗಭೂಷಣರನ್ನ ನಾಯಕ ನಟ ನಾಗಿ ಆಯ್ಕೆ ಮಾಡಿದ್ದಾರೆ. ನಿನ್ನೆ (ಫೆಬ್ರವರಿ 2) ರಂದು ಮೈಸೂರಿನಲ್ಲಿ ನಡೆದ ನಾಗಭೂಷಣ್ ಅವರ ಆರತಕ್ಷತೆಗೆ ಅತಿಥಿಯಾಗಿ ಆಗಮಿಸಿದ್ದ ನಿರ್ಮಾಪಕ ಶ್ರೀಹರಿಯವರು, ವೇದಿಕೆ ಮೇಲೆ ನಾಗಭೂಷಣ್ ಆವರಿಗೆ ತಮ್ಮ ಮುಂದಿನ ಸಿನಿಮಾದ ಸಂಭಾವನೆಯ ಅಡ್ವಾನ್ಸ್ ಹಣವನ್ನು ನೀಡಿದರು.

ನಾಗಭೂಷಣ್ ನಾಯಕನಾಗಿ ನಟಿಸಿರುವ ಎರಡೂ ಸಿನಿಮಾಗಳು ‘ಇಕ್ಕಟ್’ ಹಾಗೂ ‘ಟಗರು ಪಲ್ಯ’ ತಕ್ಕಮಟ್ಟಿಗೆ ಯಶಸ್ವಿಯೇ ಆಗಿವೆ. ನಾಗಭೂಷಣ್ ಅವರ ವಿಶಿಷ್ಟ ಮ್ಯಾನರಿಸಂನ ಹಾಸ್ಯಕ್ಕೆ ಅವರದ್ದೇ ಆದ ಅಭಿಮಾನಿ ಬಳಗವೂ ಸೃಷ್ಟಿಯಾಗಿದೆ. ‘ಬಡವ ರಾಸ್ಕಲ್’, ‘ಕೌಸಲ್ಯ ಸುಪ್ರಜಾ ರಾಮ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಗಭೂಷಣ್ ಮಾಡಿರುವ ಹಾಸ್ಯ ಪಾತ್ರಗಳು ಜನರಿಗೆ ಇಷ್ಟವಾಗಿದ್ದು ಅವರೊಬ್ಬ ಜನಪ್ರಿಯ ನಟರಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ