ಅಪ್ಪು ಬ್ಯುಸಿನೆಸ್ ಅಂತಿದಾನೆ, ಅವನು ನಟನಾದ್ರೆ ಸಾಕು ನಾನು ಸತ್ರು ಪರವಾಗಿಲ್ಲ ಅಂದಿದ್ರು ರಾಜ್ ಕುಮಾರ್: ನಕ್ಕೀರನ್ ಗೋಪಾಲ್

| Updated By: ಸಾಧು ಶ್ರೀನಾಥ್​

Updated on: Nov 03, 2021 | 2:04 PM

ಬೆಂಗಳೂರು: ಕಳೆದ ಶುಕ್ರವಾರ ವಿಧಿವಶರಾದ ಸ್ಯಾಂಡಲ್​ವುಡ್​ ಖ್ಯಾತ ನಟ ಪುನೀತ್ ರಾಜ್​ಕುಮಾರ್​ ಅವರಿಗೆ ಜನ ಸರದಿಯಲಿ ನಿಂತು ಸಂತಾಪ ಸಲ್ಲಿಸುತ್ತಿದ್ದಾರೆ. ಇನ್ನು ಸದಾಶಿವನಗರದಲ್ಲಿರುವ ದೊಡ್ಮನೆ ಮನೆಗೆ ಮತ್ತು ಮಾನ್ಯತಾ ಟೆಕ್​ ಪಾರ್ಕ್​ನಲ್ಲಿರುವ ಶಿವಣ್ಣ ಮನೆಗೆ ನಾನಾ ಕ್ಷೇತ್ರಗಳ ಜನ ಬಂದು ಸಾಂತ್ವನ ಸಲ್ಲಿಸುತ್ತಿದ್ದಾರೆ. ಇಂದು ಬೆಳಗ್ಗೆ ಮಾನ್ಯತಾ ಟೆಕ್‌ಪಾರ್ಕ್ ಬಳಿ ಇರುವ ನಟ ಶಿವರಾಜ್ ಕುಮಾರ್ ನಿವಾಸಕ್ಕೆ ತಮಿಳು ಪತ್ರಕರ್ತ ನಕ್ಕೀರನ್ ಗೋಪಾಲ್ ಆಗಮಿಸಿ, ಸಾಂತ್ವನ ಹೇಳಿದರು. ಈ ವೇಳೆ ಮಾತನಾಡಿದ ನಕ್ಕೀರನ್ ಗೋಪಾಲ್ ನಟ ಪುನೀತ್ […]

ಅಪ್ಪು ಬ್ಯುಸಿನೆಸ್ ಅಂತಿದಾನೆ, ಅವನು ನಟನಾದ್ರೆ ಸಾಕು ನಾನು ಸತ್ರು ಪರವಾಗಿಲ್ಲ ಅಂದಿದ್ರು ರಾಜ್ ಕುಮಾರ್: ನಕ್ಕೀರನ್ ಗೋಪಾಲ್
ಅಪ್ಪು ಬ್ಯುಸಿನೆಸ್ ಅಂತಾ ಹೋಗಿದ್ದಾನೆ, ಅವನು ನಟನಾದ್ರೆ ಸಾಕು ನಾನು ಸತ್ರು ಪರವಾಗಿಲ್ಲ ಅಂದಿದ್ರು ರಾಜ್ ಕುಮಾರ್: ನಕ್ಕೀರನ್ ಗೋಪಾಲ್
Follow us on

ಬೆಂಗಳೂರು: ಕಳೆದ ಶುಕ್ರವಾರ ವಿಧಿವಶರಾದ ಸ್ಯಾಂಡಲ್​ವುಡ್​ ಖ್ಯಾತ ನಟ ಪುನೀತ್ ರಾಜ್​ಕುಮಾರ್​ ಅವರಿಗೆ ಜನ ಸರದಿಯಲಿ ನಿಂತು ಸಂತಾಪ ಸಲ್ಲಿಸುತ್ತಿದ್ದಾರೆ. ಇನ್ನು ಸದಾಶಿವನಗರದಲ್ಲಿರುವ ದೊಡ್ಮನೆ ಮನೆಗೆ ಮತ್ತು ಮಾನ್ಯತಾ ಟೆಕ್​ ಪಾರ್ಕ್​ನಲ್ಲಿರುವ ಶಿವಣ್ಣ ಮನೆಗೆ ನಾನಾ ಕ್ಷೇತ್ರಗಳ ಜನ ಬಂದು ಸಾಂತ್ವನ ಸಲ್ಲಿಸುತ್ತಿದ್ದಾರೆ. ಇಂದು ಬೆಳಗ್ಗೆ ಮಾನ್ಯತಾ ಟೆಕ್‌ಪಾರ್ಕ್ ಬಳಿ ಇರುವ ನಟ ಶಿವರಾಜ್ ಕುಮಾರ್ ನಿವಾಸಕ್ಕೆ ತಮಿಳು ಪತ್ರಕರ್ತ ನಕ್ಕೀರನ್ ಗೋಪಾಲ್ ಆಗಮಿಸಿ, ಸಾಂತ್ವನ ಹೇಳಿದರು.

ಈ ವೇಳೆ ಮಾತನಾಡಿದ ನಕ್ಕೀರನ್ ಗೋಪಾಲ್ ನಟ ಪುನೀತ್ ನಿಧನದ ಸುದ್ದಿ ನಂಬಲು ಸಾಧ್ಯವಿಲ್ಲ. ಶಿವರಾಜ್ ಕುಮಾರ್ ಅವರ ಭೇಟಿಯಾದೆ. ಅವರು ತುಂಬಾ ದುಃಖದಲ್ಲಿದ್ದಾರೆ. ಒಬ್ಬ ವ್ಯಕ್ತಿ ಇಷ್ಟೆಲ್ಲಾ ಮಾಡಬಹುದು ಅಂತಾ ಅಪ್ಪು ತೋರಿಸಿಕೊಟ್ಟಿದ್ದಾರೆ ಎಂದರು.

ಇನ್ನು, ಡಾ.ರಾಜ್ ಕುಮಾರ್ ಅವರನ್ನ ವೀರಪ್ಪನ್ ಅಪಹರಣ ಮಾಡಿದ್ದಾಗ ನಾನೂ ಕಾಡಿಗೆ ಹೋಗಿದ್ದೆ. ರಾಜ್ ಕುಮಾರ್ ಅವನ್ನ ಭೇಟಿಯಾದೆ. ಆಗ ರಾಜ್ ಕುಮಾರ್ ಅವರಿಗೆ ಅಪ್ಪು ಅವರದ್ದೇ ಚಿಂತೆಯಾಗಿತ್ತು. ವೀರಪ್ಪನ್ ಅಪಹರಣ ಮಾಡಿದ್ದಾಗಲೂ ಅಪ್ಪುವಿನದ್ದೇ ಚಿಂತೆಯಾಗಿತ್ತು ಅವರಿಗೆ. ಅಪ್ಪು ಬ್ಯುಸಿನೆಸ್ ಅಂತಾ ಹೋಗಿದ್ದಾನೆ, ಅವನು ನಟನಾದ್ರೆ ಸಾಕು ನಾನು ಸತ್ತರೂ ಪರವಾಗಿಲ್ಲ ಅಂದಿದ್ದರು. ಅದನ್ನ ನಾನು ಪುನೀತ್ ಗೆ ಬಂದು ಆಗ ಹೇಳಿದ್ದೆ. ಈಗ ಪುನೀತ್ ತುಂಬಾ ದೊಡ್ಡ ಮಟ್ಟಕ್ಕೆ ಬೆಳೆದು, ನಮ್ಮನ್ನು ಅಗಲಿದ್ದಾರೆ ಎಂದು ಸಂತಾಪ ವ್ಯಕ್ತಪಡಿಸಿದರು.

Nakkeeran Gopal Visits Shiva Rajkumar’s House To Condoles Puneeth Rajkumar Demise

ಇದನ್ನೂ ಓದಿ:
ಪಟಾಕಿ ಹಚ್ಚೋದು ಬೇಡ, ದೇಹದ ಕ್ಯಾಲೋರಿ ಬರ್ನ್ ಮಾಡೋಣ; ದೀಪಾವಳಿಗೆ ಮನವಿ ಮಾಡಿದ್ದ ಪುನೀತ್ ಹಳೆಯ ವಿಡಿಯೋ ವೈರಲ್​

(Nakkeeran gopal visits shivarajkumar house to condole the death of puneeth rajkumar reebers rajkumar kidanp days)

Published On - 12:34 pm, Wed, 3 November 21