Kabzaa Movie Songs: ‘ನಮಾಮಿ..’ ಹಾಡಿನಲ್ಲಿ ಮಿಂಚಿದ ನಟಿ ಶ್ರೀಯಾ ಶರಣ್​; ‘ಕಬ್ಜ’ ಚಿತ್ರದ ಅದ್ದೂರಿತನಕ್ಕೆ ಈ ಗೀತೆಯೇ ಸಾಕ್ಷಿ

|

Updated on: Feb 16, 2023 | 9:48 PM

Namaami Song | Shriya Saran: ಆರ್​. ಚಂದ್ರು ನಿರ್ದೇಶನದ ‘ಕಬ್ಜ’ ಸಿನಿಮಾ ಎಷ್ಟು ಶ್ರೀಮಂತವಾಗಿ ಮೂಡಿಬಂದಿರಬಹುದು ಎಂಬುದಕ್ಕೆ ‘ನಮಾಮಿ..’ ಹಾಡಿನಲ್ಲಿ ಝಲಕ್​ ಕಾಣಿಸಿದೆ. ಟ್ರೆಡಿಷನಲ್​ ಲುಕ್​ನಲ್ಲಿ ಶ್ರೀಯಾ ಶರಣ್​ ಮಿಂಚಿದ್ದಾರೆ.

Kabzaa Movie Songs: ‘ನಮಾಮಿ..’ ಹಾಡಿನಲ್ಲಿ ಮಿಂಚಿದ ನಟಿ ಶ್ರೀಯಾ ಶರಣ್​; ‘ಕಬ್ಜ’ ಚಿತ್ರದ ಅದ್ದೂರಿತನಕ್ಕೆ ಈ ಗೀತೆಯೇ ಸಾಕ್ಷಿ
ಶ್ರೀಯಾ ಶರಣ್
Follow us on

ಹಲವು ಕಾರಣಗಳಿಂದ ‘ಕಬ್ಜ’ ಸಿನಿಮಾ (Kabzaa Movie) ಕ್ರೇಜ್​ ಸೃಷ್ಟಿ ಮಾಡಿದೆ. ಪೋಸ್ಟರ್​, ಟೀಸರ್​ ಮತ್ತು ಟೈಟಲ್​ ಟ್ರ್ಯಾಕ್​ ಈಗಾಗಲೇ ಧೂಳೆಬ್ಬಿಸಿವೆ. ಈಗ ‘ಕಬ್ಜ’ ತಂಡದಿಂದ ಹೊಸ ಸಾಂಗ್​ ಬಿಡುಗಡೆ ಮಾಡಲಾಗಿದೆ. ನಟಿ ಶ್ರೀಯಾ ಶರಣ್​ (Shriya Saran) ಅವರು ಹೆಜ್ಜೆ ಹಾಕಿರುವ ‘ನಮಾಮಿ..’ ಹಾಡು ರಿಲೀಸ್​ ಆಗಿದೆ. ಚೆನ್ನೈನಲ್ಲಿ ಅದ್ದೂರಿ ಕಾರ್ಯಕ್ರಮ ಮಾಡಿ ಈ ಗೀತೆಯನ್ನು ಅನಾವರಣ ಮಾಡಲಾಗಿದೆ. ರವಿ ಬಸ್ರೂರು ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ‘ನಮಾಮಿ..’ ಹಾಡು (Namaami Song) ಎಲ್ಲರ ಗಮನ ಸೆಳೆಯುತ್ತಿದೆ. ಈ ಗೀತೆಯಿಂದಾಗಿ ‘ಕಬ್ಜ’ ಮೇಲೆ ಇರುವ ನಿರೀಕ್ಷೆ ಡಬಲ್ ಆಗಿದೆ. ಖ್ಯಾತ ಗಾಯಕಿ ಐಶ್ವರ್ಯಾ ರಂಗರಾಜನ್​ ಅವರ ಕಂಠದಲ್ಲಿ ಈ ಸಾಂಗ್​ ಮೂಡಿಬಂದಿದೆ. ಕಿನ್ನಾಲ್​ ರಾಜ್​ ಸಾಹಿತ್ಯ ಬರೆದಿ​ದ್ದಾರೆ.

ತುಂಬಾ ಅದ್ದೂರಿಯಾಗಿ ‘ನಮಾಮಿ..’ ಹಾಡು ಮೂಡಿಬಂದಿದೆ. ಟ್ರೆಡಿಷನಲ್​ ಆದಂತಹ ಲುಕ್​ನಲ್ಲಿ ಶ್ರೀಯಾ ಶರಣ್​ ಅವರು ಮಿಂಚಿದ್ದಾರೆ. ಬೃಹತ್​ ಸೆಟ್​ಗಳು ಕಣ್ಮನ ಸೆಳೆಯುವಂತಿವೆ. ಆನಂದ್​ ಆಡಿಯೋ ಯೂಟ್ಯೂಬ್​ ಚಾನೆಲ್​ನಲ್ಲಿ ಹಾಡು ನೋಡಿದ ಪ್ರೇಕ್ಷಕರು ಪಾಸಿಟಿವ್​ ಆಗಿ ಕಮೆಂಟ್​ ಮಾಡುತ್ತಿದ್ದಾರೆ. ಇದರಿಂದ ಚಿತ್ರತಂಡದ ಆತ್ಮವಿಶ್ವಾಸ ಹೆಚ್ಚಾಗಿದೆ. ಇಡೀ ಸಿನಿಮಾ ಎಷ್ಟು ಶ್ರೀಮಂತವಾಗಿ ಮೂಡಿಬಂದಿರಬಹುದು ಎಂಬುದಕ್ಕೆ ‘ನಮಾಮಿ..’ ಹಾಡಿನಲ್ಲಿ ಝಲಕ್​ ಕಾಣಿಸಿದೆ.

ಇದನ್ನೂ ಓದಿ
Kabzaa Movie: ‘ಕಬ್ಜ’ ಆಡಿಯೋ ರಿಲೀಸ್​ಗೆ ಶಿಡ್ಲಘಟ್ಟದಲ್ಲಿ ಸಿದ್ಧವಾಗ್ತಿದೆ ಬೃಹತ್​ ವೇದಿಕೆ; ಸರ್ವರಿಗೂ ಆಹ್ವಾನ ನೀಡಿದ ಚಿತ್ರತಂಡ
Kabzaa: ನಾರ್ತ್​ ಅಮೆರಿಕದಲ್ಲಿ ಕನ್ನಡದ ‘ಕಬ್ಜ’ ಚಿತ್ರಕ್ಕೆ ಭಾರಿ ಡಿಮ್ಯಾಂಡ್​; ರಿಲೀಸ್​ಗೆ ಭರ್ಜರಿ ತಯಾರಿ
‘ಒಟಿಟಿಯವರು ಕಣ್ಮುಚ್ಚಿಕೊಂಡು ಕಬ್ಜ ಹಕ್ಕು ಖರೀದಿಸಿಲ್ಲ; ಟೀಕಾಕಾರರಿಗೆ ಚಂದ್ರು ಉತ್ತರ
Kabzaa: ಟ್ವಿಟರ್​ ಟ್ರೆಂಡಿಂಗ್​ನಲ್ಲಿ ‘ಪಠಾಣ್​’ ಚಿತ್ರವನ್ನೇ ಮೀರಿಸಿದ ‘ಕಬ್ಜ’: ಉಪ್ಪಿ-ಆರ್​. ಚಂದ್ರು ಕಮಾಲ್​

‘ಕಬ್ಜ’ ಬೆಡಗಿ ಶ್ರೀಯಾ ಶರಣ್​ ಸುಂದರ ಫೋಟೋಸ್​

ಉಪೇಂದ್ರ ಮತ್ತು ಸುದೀಪ್​ ಅವರು ‘ಕಬ್ಜ’ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ಪುನೀತ್ ರಾಜ್​ಕುಮಾರ್​​ ಜನ್ಮದಿನವಾದ ಮಾರ್ಚ್​ 17ರಂದು ವಿಶ್ವಾದ್ಯಂತ ಈ ಚಿತ್ರ ತೆರೆಕಾಣಲಿದೆ. ಬಿಡುಗಡೆಗೆ ಇನ್ನು ಒಂದು ತಿಂಗಳು ಬಾಕಿ ಇದ್ದು, ಪೂರ್ಣ ಪ್ರಮಾಣದಲ್ಲಿ ಪ್ರಚಾರ ಕಾರ್ಯಗಳು ನಡೆಯುತ್ತಿವೆ. ಫೆಬ್ರವರಿ 26ರಂದು ಶಿಡ್ಲಘಟ್ಟದಲ್ಲಿ ‘ಕಬ್ಜ’ ಆಡಿಯೋ ರಿಲೀಸ್ ಆಗಲಿದೆ. ಅಂದು ಸಂಜೆ 6 ಗಂಟೆಗೆ ಆರಂಭ ಆಗುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾರತೀಯ ಚಿತ್ರರಂಗದ ಹಲವು ದಿಗ್ಗಜ ನಟರಿಗೆ ಆಹ್ವಾನ ನೀಡಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದ್ದಾರೆ.

‘ಕಬ್ಜ’ ಚಿತ್ರವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ವಿದೇಶದ ಪ್ರೇಕ್ಷಕರು ಕೂಡ ಸಜ್ಜಾಗಿದ್ದಾರೆ. ನಾರ್ತ್​ ಅಮೆರಿಕದಲ್ಲಿ ಈ ಸಿನಿಮಾ ಭಾರಿ ಓಪನಿಂಗ್​ ಪಡೆಯುವ ಸಾಧ್ಯತೆ ದಟ್ಟವಾಗಿದೆ. ಅಲ್ಲಿನ ದೊಡ್ಡ ಸಂಸ್ಥೆಗಳು ‘ಕಬ್ಜ’ ವಿತರಣಾ ಹಕ್ಕುಗಳನ್ನು ಪಡೆಯುಲು ಮುಂದೆ ಬಂದಿವೆ. ‘ಪ್ರೈಂ ಶೋ ಎಂಟರ್​ಟೇನ್ಮೆಂಟ್​’ ಸಂಸ್ಥೆಯು ಈ ಚಿತ್ರದ ಹಕ್ಕುಗಳನ್ನು ಪಡೆದುಕೊಂಡಿದ್ದು, 450ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಬಿಡುಗಡೆ ಮಾಡಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:48 pm, Thu, 16 February 23