
ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಕನ್ನಡದಲ್ಲಿ ಹಲವು ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಆದರೆ, ಇತ್ತೀಚೆಗೆ ಸಿನಿಮಾ ನಿರ್ಮಾಣದಲ್ಲಿ ಅವರು ನಿಧಾನತೆ ತೋರಿದ್ದಾರೆ. ‘ಅವತಾರ ಪುರುಷ 2’ ಬಳಿಕ ಅವರ ನಿರ್ಮಾಣದ ಯಾವುದೇ ಹೊಸ ಸಿನಿಮಾ ರಿಲೀಸ್ ಆಗಿಲ್ಲ. ಹೀಗಿರುವಾಗಲೇ ಅವರು ನಾನಿ ಸಿನಿಮಾ ವಿರುದ್ಧ ಕಿಡಿಕಾರಿದ್ದಾರೆ. ‘ಹಕ್ಕು ಪಡೆಯದೆ ನಮ್ಮ ಸಿನಿಮಾನ ರಿಮೇಕ್ ಮಾಡಿದ್ದಾರೆ’ ಎಂದು ನಾನಿ ವಿರುದ್ಧ ಪುಷ್ಕರ್ ಅವರು ಕಿಡಿಕಾರಿದ್ದಾರೆ.
‘ರಿಮೇಕ್ ಹಕ್ಕು ಪಡೆಯದೆ ‘ಹಾಯ್ ನಾನ್ನ’ ಸಿನಿಮಾ ಮಾಡಲಾಗಿದೆ. ‘ಭೀಮ ಸೇನ ನಳಮಹರಾಜ’ ಚಿತ್ರದ ರಿಮೇಕ್ ಇದು. ನಾನಿ ಅವರೇ ಎಷ್ಟು ಕೀಳುಮಟ್ಟದ ಕೆಲಸ ಮಾಡಿದ್ದೀರಿ’ ಎಂದು ಪುಷ್ಕರ್ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರೋ ಸ್ಕ್ರೀನ್ಶಾಟ್ ವೈರಲ್ ಆಗಿದೆ. ತೆಲುಗು ಚಿತ್ರರಂಗದಲ್ಲಿ ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
Pushkara Mallikarjunaiah, the producer of #BheemasenaNalamaharaja (Kannada film), slams the makers of #HiNanna for remaking their film without purchasing the official remake rights.@NameisNani #Nani pic.twitter.com/QFyCpKuNQ7
— cinepics (@cinepiccollx) January 30, 2025
‘ಭೀಮ ಸೇನ ನಳಮಹರಾಜ’ ಹಾಗೂ ‘ಹಾಯ್ ನಾನ್ನ’ ಸಿನಿಮಾದ ಕಥೆಯ ಎಳೆಯನ್ನು ನೋಡಿದರೆ ಎರಡೂ ಒಂದೇ ರೀತಿ ಎನಿಸುತ್ತದೆ. ‘ಭೀಮ ಸೇನ ನಳಮಹರಾಜ’ ಚಿತ್ರದಲ್ಲೂ ಕಥಾ ನಾಯಕನಿಗೆ ಎಲ್ಲವೂ ಮರೆತು ಹೋಗಿರುತ್ತದೆ. ಆದರೆ, ಆರಂಭದಲ್ಲಿ ಕಥಾ ನಾಯಕಿಗೇ ಎಲ್ಲವೂ ಮರೆತಿದೆ ಎಂಬ ರೀತಿಯಲ್ಲಿ ತೋರಿಸಲಾಗುತ್ತದೆ. ‘ಹಾಯ್ ನಾನ್ನ’ ಚಿತ್ರದಲ್ಲೂ ಇದೇ ರೀತಿಯ ಕಥೆ ಇದೆ. ಎರಡೂ ಚಿತ್ರದ ಮೇಕಿಂದ ಬೇರೆ ಬೇರೆ ಇದ್ದರೂ ಕಥೆಯ ಎಳೆ ಒಂದೇ ರೀತಿ ಇತ್ತು. ‘ಹಾಯ್ ನಾನ್ನ’ ಸಿನಿಮಾ ರಿಲೀಸ್ ಆದಾಗಾಲೂ ಇದೇ ರೀತಿಯ ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿತ್ತು. ಸದ್ಯದ ಮಟ್ಟಿಗೆ ‘ಹಾಯ್ ನಾನ್ನ’ ಚಿತ್ರದ ನಿರ್ದೇಶಕ ಶೌರ್ಯೇವ್ ಅವರಾಗಲೀ ಚಿತ್ರದ ಹೀರೋ ನಾನಿ ಆಗಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ: ‘ರಕ್ಷಿತ್ ಸಿನಿಮಾ ಮಾಡಲು ನಿರ್ಮಾಪಕರಿದ್ದಾರೆ, ಅವರಿಗೆ ಸದ್ಯಕ್ಕಂತೂ ನನ್ನ ಅನಿವಾರ್ಯತೆ ಇಲ್ಲ’; ಪುಷ್ಕರ್
2016ರಲ್ಲಿ ಬಂದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ಮೂಲಕ ಸಿನಿಮಾ ನಿರ್ಮಾಣ ಆರಂಭಿಸಿದವರು ಪುಷ್ಕರ್. ಆ ಬಳಿಕ ‘ಕಿರಿಕ್ ಪಾರ್ಟಿ’, ‘ಹಂಬಲ್ ಪೊಲಿಟೀಷಿಯನ್ ನೋಗ್ರಾಜ್’, ‘ಕಥೆಯೊಂದು ಶುರುವಾಗಿದೆ’, ‘ಅವನೇ ಶ್ರೀಮನ್ನಾರಾಯಣ’ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡಿದರು. 2020ರಲ್ಲಿ ‘ಭೀಮಸೇನ ನಳಮಹರಾಜ’ ಚಿತ್ರವನ್ನು ನಿರ್ಮಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:29 am, Fri, 31 January 25