‘ಸಮರ್ಪಣಾ ಭಾವಕ್ಕೆ ಹೃದಯಪೂರ್ವಕ ಸಲ್ಯೂಟ್’; ಪಿಎಂ ಮೋದಿ ಸಾಧನೆಗೆ ಕಿಚ್ಚನ ಮೆಚ್ಚುಗೆ

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ರಾಜಕೀಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಸತತ ಮೂರನೇ ಬಾರಿಗೆ ದೇಶ ಮುನ್ನಡೆಸುತ್ತಿರುವ ಮೋದಿ, ನೆಹರು ಅವರ ದಾಖಲೆಯನ್ನು (4,398 ದಿನಗಳು) ಹಿಂದಿಕ್ಕಿ, ಅತಿ ಹೆಚ್ಚು ದಿನ ಸೇವೆ ಸಲ್ಲಿಸಿದ ಮೊದಲ ಚುನಾಯಿತ ಪ್ರಧಾನಿಯಾಗಿದ್ದಾರೆ (4,399 ದಿನಗಳು). ಈ ಐತಿಹಾಸಿಕ ಸಾಧನೆಗೆ ಕನ್ನಡ ನಟ ಕಿಚ್ಚ ಸುದೀಪ್ ಸೇರಿದಂತೆ ಹಲವರು ಶ್ಲಾಘಿಸಿದ್ದಾರೆ, ಮೋದಿ ಅವರ ಅಚಲ ಸಮರ್ಪಣೆ ಮತ್ತು ನಾಯಕತ್ವವನ್ನು ಹೊಗಳಿದ್ದಾರೆ.

‘ಸಮರ್ಪಣಾ ಭಾವಕ್ಕೆ ಹೃದಯಪೂರ್ವಕ ಸಲ್ಯೂಟ್’; ಪಿಎಂ ಮೋದಿ ಸಾಧನೆಗೆ ಕಿಚ್ಚನ ಮೆಚ್ಚುಗೆ
ಮೋದಿ-ಸುದೀಪ್

Updated on: Jun 11, 2026 | 1:08 PM

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ರಾಜಕೀಯ ಇತಿಹಾಸದಲ್ಲಿ ಮತ್ತೊಂದು ಅತ್ಯಪೂರ್ವ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಸತತ ಮೂರನೇ ಬಾರಿಗೆ ದೇಶದ ಚುಕ್ಕಾಣಿ ಹಿಡಿದು ಯಶಸ್ವಿಯಾಗಿ ಮುನ್ನಡೆಸುತ್ತಿರುವ ನರೇಂದ್ರ ಮೋದಿ ಅವರು, ಭಾರತದಲ್ಲಿ ಅತಿ ದೀರ್ಘಾವಧಿಗೆ ಸೇವೆ ಸಲ್ಲಿಸಿದ ಮೊದಲ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಮೊದಲು ಈ ದಾಖಲೆ ಮಾಜಿ ಪ್ರಧಾನಿ ಜವಾಹರ್​​ಲಾಲ್ ನೆಹರು ಹೊಂದಿದ್ದರು.  ಪ್ರಧಾನಿ ಮೋದಿ ಅವರ ಈ ಐತಿಹಾಸಿಕ ಸಾಧನೆಗೆ ದೇಶದ ಗಣ್ಯರು, ಜಾಗತಿಕ ನಾಯಕರು ಹಾಗೂ ಕೋಟ್ಯಂತರ ನಾಗರಿಕರು ಸಾಮಾಜಿಕ ಜಾಲತಾಣವಾದ ಎಕ್ಸ್ (ಟ್ವಿಟರ್) ಮೂಲಕ ಶುಭಕೋರುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡದ ನಟ ಕಿಚ್ಚ ಸುದೀಪ್ (Sudeep) ಕೂಡ ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿಯವರ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ನೆಹರು 1952ರಲ್ಲಿ ಮೊದಲ ಬಾರಿಗೆ ಚುನಾಯಿತ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನದಿಂದ ಒಟ್ಟು 4,398 ದಿನಗಳ ಕಾಲ ಆ ಹುದ್ದೆಯಲ್ಲಿದ್ದರು. ನರೇಂದ್ರ ಮೋದಿ, ಸದ್ಯ 4,399 ದಿನಗಳನ್ನು ಪೂರೈಸುವ ಮೂಲಕ ನೆಹರು ದಾಖಲೆಯನ್ನು
ಅಧಿಕೃತವಾಗಿ ಹಿಂದಿಕ್ಕಿದ್ದಾರೆ.

‘ಭಾರತದಲ್ಲಿ ಅತಿ ದೀರ್ಘಾವಧಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿ. ಈ ಅಪರೂಪದ ಸಾಧನೆಯನ್ನು ನಾವೆಲ್ಲರೂ ಒಂದು ಕ್ಷಣ ನಿಂತು ಗೌರವಿಸಲೇಬೇಕು. 12 ವರ್ಷಗಳು, ಅದೇ ಎನರ್ಜಿ, ಅದೇ ವೇಗ, ಎಲ್ಲೂ ಕಿಂಚಿತ್ತೂ ದಣಿವೇ ಇಲ್ಲ. ನರೇಂದ್ರ ಮೋದಿ ಅವರೇ ನಿಮ್ಮ ಈ ಅಪಾರ ಸಮರ್ಪಣಾ ಭಾವ ಹಾಗೂ ಸಾಧನೆಗೆ ನನ್ನ ಹೃದಯಪೂರ್ವಕ ಸಲ್ಯೂಟ್. ಇದೊಂದು ಹೆಮ್ಮೆಯ ಕ್ಷಣ ಸರ್. ನಿಮಗೆ ಮುಂದೆಯೂ ಸದಾ ಯಶಸ್ಸು ಸಿಗಲಿ. ಎಲ್ಲವೂ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳಿಗೆ ಕಿಚ್ಚನ್ ಸರ್​​ಪ್ರೈಸ್; ಸುದೀಪ್ ಕಡೆಯಿಂದ ಬ್ಯಾಕ್ ಟು ಬ್ಯಾಕ್ ಸಿನಿಮಾ

ಕಳೆದ 12 ವರ್ಷಗಳಿಂದ ದಣಿವರಿಯಿಲ್ಲದೆ ದೇಶಕ್ಕಾಗಿ ಶ್ರಮಿಸುತ್ತಿರುವ ನರೇಂದ್ರ ಮೋದಿ ಅವರ ದಕ್ಷ ನಾಯಕತ್ವಕ್ಕೆ ಮತ್ತು ಅವರ ಅಚಲವಾದ ಉತ್ಸಾಹಕ್ಕೆ ಸುದೀಪ್ ನೀಡಿರುವ ಈ ಗೌರವದ ನುಡಿಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:00 pm, Thu, 11 June 26

ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us