ವಿಶ್ವಕಪ್ ಜಯಿಸಿದ ಭಾರತ, ದರ್ಶನ್​ಗೆ ಧನ್ಯವಾದ ಹೇಳುತ್ತಿರುವ ನೆಟ್ಟಿಗರು

|

Updated on: Jun 30, 2024 | 7:27 AM

ಬಾರ್ಬಡೋಸ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗೆದ್ದ ಭಾರತ ಕಪ್ ತನ್ನದಾಗಿಸಿಕೊಂಡಿದೆ. ಆದರೆ ನೆಟ್ಟಿಗರು ದರ್ಶನ್​ಗೆ ಧನ್ಯವಾದ ಹೇಳುತ್ತಿದ್ದಾರೆ. ಅದೇಕೆ? ಕಾರಣ ಇಲ್ಲಿದೆ.

ವಿಶ್ವಕಪ್ ಜಯಿಸಿದ ಭಾರತ, ದರ್ಶನ್​ಗೆ ಧನ್ಯವಾದ ಹೇಳುತ್ತಿರುವ ನೆಟ್ಟಿಗರು
Follow us on

ಭಾರತ ಕ್ರಿಕೆಟ್ ತಂಡ ಐಸಿಸಿ ಟಿ20 ವಿಶ್ವಕಪ್ ಗೆದ್ದಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಬಾರ್ಬಡೋಸ್​ನಲ್ಲಿ ನಡೆದ ವಿಶ್ವಕಪ್ ಫೈನಲ್​ನಲ್ಲಿ ಸಂಘಟಿತ ಹೋರಾಟ ಮಾಡಿದ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದಿದ್ದು, ಇದು ಭಾರತಕ್ಕೆ ಎರಡನೇ ಟಿ20 ವಿಶ್ವಕಪ್ ಫೈನಲ್ ಗೆಲುವು, ಒಟ್ಟಾರೆಯಾಗಿ ನಾಲ್ಕನೇ ವಿಶ್ವಕಪ್. ಆದರೆ ಭಾರತ ತಂಡ ವಿಶ್ವಕಪ್ ಗೆದ್ದಿದ್ದಕ್ಕೆ ನೆಟ್ಟಿಗರು ನಟ ದರ್ಶನ್ ತೂಗುದೀಪ್​ಗೆ ಧನ್ಯವಾದ ಹೇಳುತ್ತಿದ್ದಾರೆ. ಅದ್ಯಾಕೆ? ಕಾರಣವೂ ಇದೆ.

ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಚಿತ್ರಗಳನ್ನು ಹಂಚಿಕೊಂಡು, ಭಾರತ ವಿಶ್ವಕಪ್ ಗೆಲ್ಲಲು ಕಾರಣವಾಗಿದ್ದಕ್ಕೆ ಧನ್ಯವಾದ ಎಂದು ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಏಕೆಂದರೆ ಭಾರತ ಕಳೆದ ಬಾರಿ ವಿಶ್ವಕಪ್ ಗೆದ್ದಿದ್ದು 2011 ರಲ್ಲಿ ಆ ವರ್ಷವೂ ಸಹ ದರ್ಶನ್ ಜೈಲು ಸೇರಿದ್ದರು. ಅದಾದ 13 ವರ್ಷಗಳ ಬಳಿಕ 2024 ರಲ್ಲಿ ದರ್ಶನ್​ ಮತ್ತೆ ಜೈಲಿಗೆ ಹೋಗಿದ್ದಾರೆ. ಈ ಬಾರಿ ಭಾರತ ಮತ್ತೆ ವಿಶ್ವಕಪ್ ಗೆದ್ದಿದೆ. ಹಾಗಾಗಿ ದರ್ಶನ್ ಜೈಲು ಸೇರಿದ್ದಕ್ಕೆ ಭಾರತ ವಿಶ್ವಕಪ್ ಗೆದ್ದಿದ್ದು ಎಂಬುದು ಕೆಲವರ ನಂಬಿಕೆ.

2011 ರಲ್ಲಿ ಭಾರತ ತಂಡ ಎಂಎಸ್ ಧೋನಿ ನಾಯಕತ್ವದಲ್ಲಿ ಏಕದಿನ ಪಂದ್ಯ ವಿಶ್ವಕಪ್ ಗೆದ್ದು ಇತಿಹಾಸ ಬರೆದಿತ್ತು. ಫೈನಲ್ ಪಂದ್ಯದಲ್ಲಿ ಧೋನಿಯ ಆಟವನ್ನು ಯಾರೂ ಮರೆಯುವಂತಿಲ್ಲ. ಆದರೆ ಅದಕ್ಕೂ ದರ್ಶನ್​ಗೂ ಲಿಂಕ್ ಮಾಡಲಾಗುತ್ತಿದೆ. ಅಸಲಿಗೆ ಭಾರತ ವಿಶ್ವಕಪ್ ಗೆದ್ದ ಕೆಲವು ತಿಂಗಳು ಬಳಿಕ ದರ್ಶನ್ ಜೈಲಿಗೆ ಹೋಗಿದ್ದರೆ ಹೊರತು ವಿಶ್ವಕಪ್ ಗೆಲ್ಲುವ ಮೊದಲಲ್ಲ. 2011 ರ ಏಪ್ರಿಲ್ 2 ರಂದು ಭಾರತ ವಿಶ್ವಕಪ್ ಗೆದ್ದಿತ್ತು, ಅದಾದ ಕೆಲವು ತಿಂಗಳ ಬಳಿಕ ಅಂದರೆ ಸೆಪ್ಟೆಂಬರ್ 9 ರಂದು ನಟ ದರ್ಶನ್ ಜೈಲು ಸೇರಿದ್ದರು.

ಇದನ್ನೂ ಓದಿ:ಜೈಲಿನಲ್ಲಿ ದರ್ಶನ್​ ಭೇಟಿಯ ಬಳಿಕ ರಕ್ಷಿತಾ-ಪ್ರೇಮ್ ಹೇಳಿದ್ದಿಷ್ಟು?

2011 ರ ಸೆಪ್ಟೆಂಬರ್ ತಿಂಗಳಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ಭೀಕರ ಹಲ್ಲೆ ಮಾಡಿದ್ದರು ವಿಜಯಲಕ್ಷ್ಮಿ ಅವರ ಎರಡು ಕೈಗಳ ಮೂಳೆ ಮುರಿದಿತ್ತು, ಕತ್ತು, ತಲೆಯ ಭಾಗ ಎಲ್ಲವೂ ಗಂಭೀರವಾಗಿ ಗಾಯಗೊಂಡಿತ್ತು. ಆ ಪ್ರಕರಣದಲ್ಲಿ ದರ್ಶನ್ ಅನ್ನು ಬಂಧಿಸಿ ಇದೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿತ್ತು. ಆದರೆ ಬಳಿಕ ಪತ್ನಿ ವಿಜಯಲಕ್ಷ್ಮಿ ಅವರೇ ದರ್ಶನ್ ವಿರುದ್ಧ ನೀಡಿದ್ದ ದೂರು ವಾಪಸ್ ಪಡೆದರು. ಆ ಸಮಯದಲ್ಲಿ 28 ದಿನಗಳ ಕಾಲ ದರ್ಶನ್ ಜೈಲಿನಲ್ಲಿದ್ದರು.

ದರ್ಶನ್ ಜೈಲಿಗೆ ಹೋಗಿದ್ದರಿಂದಲೇ ವಿಶ್ವಕಪ್ ಗೆದ್ದಿತು ಎನ್ನುವಂತಿಲ್ಲ ಏಕೆಂದರೆ 2011 ರಲ್ಲಿ ಭಾರತ ವಿಶ್ವಕಪ್ ಗೆದ್ದ ಬಳಿಕ ದರ್ಶನ್ ಜೈಲಿಗೆ ಹೋಗಿದ್ದರು. ಈ ಬಾರಿ ವಿಶ್ವಕಪ್ ಶುರುವಾದ ಬಳಿಕ ದರ್ಶನ್ ಜೈಲು ಸೇರಿದರು. ಏನೇ ಆಗಲಿ ಭಾರತ ವಿಶ್ವಕಪ್ ಗೆದ್ದಿದೆ. ಟೂರ್ನಿಯುದ್ದಕ್ಕೂ ಅದ್ಭುತವಾಗಿ ಆಡುತ್ತಾ ಬಂದ ಭಾರತ ತಂಡಕ್ಕೆ ಅರ್ಹ ಗೆಲುವು ದೊರೆತಿದೆ. 13 ವರ್ಷಗಳ ವಿಶ್ವಕಪ್ ಬರ ನೀಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ