‘ಕೆಜಿಎಫ್​ 2’ ಚಿತ್ರದ ಮುಂದುವರಿದ ಭಾಗವೇ ‘ಸಲಾರ್​’? ‘ಕೆಜಿಎಫ್​ 3’ ಪ್ರಶ್ನೆಗೆ ಉತ್ತರ ಹುಡುಕಿದ ಫ್ಯಾನ್ಸ್​

‘ಕೆಜಿಎಫ್​ 2’ ಚಿತ್ರದ ಮುಂದುವರಿದ ಭಾಗವೇ ‘ಸಲಾರ್​’? ‘ಕೆಜಿಎಫ್​ 3’ ಪ್ರಶ್ನೆಗೆ ಉತ್ತರ ಹುಡುಕಿದ ಫ್ಯಾನ್ಸ್​
ಪ್ರಭಾಸ್​, ಯಶ್​

KGF 3: ‘ಕೆಜಿಎಫ್​ 3’ ಬಗ್ಗೆ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲಿ ಹಿಂಟ್​ ನೀಡಲಾಗಿದೆ. ಆ ಕುರಿತು ನೆಟ್ಟಿಗರು ಒಂದಷ್ಟು ಅಂಶಗಳನ್ನು ಪತ್ತೆ ಹಚ್ಚಿದ್ದಾರೆ.

TV9kannada Web Team

| Edited By: Madan Kumar

Apr 16, 2022 | 11:37 AM

ಪ್ರಶಾಂತ್​ ನೀಲ್​ ನಿರ್ದೇಶನದ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾ ತೆರೆಕಂಡ ಬೆನ್ನಲ್ಲೇ ‘ಕೆಜಿಎಫ್ 3’ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಯಶ್ ಅವರು ಬೇರೆ ನಿರ್ದೇಶಕರ ಜತೆ ಹೊಸ ಸಿನಿಮಾಗೆ ಸಹಿ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇನ್ನು, ಪ್ರಶಾಂತ್ ನೀಲ್ ಅವರು ಪ್ರಭಾಸ್​ ನಟನೆಯ ‘ಸಲಾರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಲಿದ್ದಾರೆ. ಹೀಗಿರುವಾಗ ‘ಕೆಜಿಎಫ್ 3’ (KGF 3) ಸಿನಿಮಾ ಶೂಟಿಂಗ್ ಯಾವಾಗ ಮಾಡಲಾಗುತ್ತದೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದರು. ಒಂದೊಮ್ಮೆ ‘ಸಲಾರ್’ (Salaar) ಬಳಿಕ ‘ಕೆಜಿಎಫ್ 3’ ಶೂಟಿಂಗ್ ಆರಂಭಿಸುತ್ತಾರೆ ಎಂದಾದರೆ, ಆ ಸಿನಿಮಾ ತೆರೆಗೆ ಬರೋಕೆ ಹಲವು ವರ್ಷಗಳೇ ಕಳೆಯುತ್ತವೆ. ಅಲ್ಲಿವರೆಗೆಕೆಜಿಎಫ್ 3 ಕ್ರೇಜ್ ಹೋಗಿಬಿಡಬಹುದು. ಇಷ್ಟೆಲ್ಲ ಚರ್ಚೆ ಆಗುತ್ತಿರುವಾಗಲೇ ‘ಕೆಜಿಎಫ್ 3’ ಬಗ್ಗೆ ಒಂದು ಹೊಸ ಗುಸುಗುಸು ಆರಂಭವಾಗಿದೆ. ‘ಕೆಜಿಎಫ್​ 2’ನ ಮುಂದುವರಿದ ಭಾಗವೇ ‘ಸಲಾರ್’ ಎನ್ನಲಾಗುತ್ತಿದೆ.

‘ಕೆಜಿಎಫ್ 2’ ಚಿತ್ರದಲ್ಲಿ ಫರ್ಮಾನ್ ಎನ್ನುವ ಪಾತ್ರ ಹೈಲೈಟ್ ಆಗಿದೆ. ಆತನಿಗೆ ರಾಕಿ ಎಂದರೆ ಎಲ್ಲಿಲ್ಲದ ಗೌರವ. ರಾಕಿಗೋಸ್ಕರ ಏನು ಮಾಡೋಕೂ ಆತ ರೆಡಿ. ಆದರೆ, ಆತನ ಪಾತ್ರ ‘ಕೆಜಿಎಫ್ 2’ನಲ್ಲಿ ಅಂತ್ಯವಾಗುತ್ತದೆ. ಆದರೆ, ಆತನ ಮುಖವನ್ನು ನಿರ್ದೇಶಕರು ತೋರಿಸದೆ ಆತ ಬದುಕಿದ್ದಾನೋ ಅಥವಾ ಸತ್ತಿದ್ದಾನೋ ಎನ್ನುವ ಪ್ರಶ್ನೆಯನ್ನು ಹಾಗೆಯೇ ಉಳಿಸಿದ್ದಾರೆ. ಈತನೇ ಬೆಳೆದು ದೊಡ್ಡವನಾಗಿ ‘ಸಲಾರ್’ ಆಗುತ್ತಾನೆ ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಇದಕ್ಕೆ ಸಾಕ್ಷ್ಯ ಕೂಡ ಒದಗಿಸಿದ್ದಾರೆ ನೆಟ್ಟಿಗರು.

ಈಶ್ವರಿ ರಾವ್ ಅವರು, ‘ಕೆಜಿಎಫ್ 2’ನಲ್ಲಿ ಫರ್ಮಾನ್ ತಾಯಿ ಪಾತ್ರ ಮಾಡಿದ್ದಾರೆ. ‘ಸಲಾರ್​’ ಚಿತ್ರದಲ್ಲಿ ಈಶ್ವರಿ ಅವರು ಸಲಾರ್​ನ ತಾಯಿ ಪಾತ್ರ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಇದು ಅನುಮಾನ ಹುಟ್ಟಿಕೊಳ್ಳಲು ದೊಡ್ಡ ಕಾರಣ. ಇನ್ನು, ಫರ್ಮಾನ್​ ಕತ್ತಿನಲ್ಲಿರುವ ಒಂದು ತಾಯತ, ‘ಸಲಾರ್’ ಪೋಸ್ಟರ್​ನಲ್ಲಿ ಪ್ರಭಾಸ್ ಕತ್ತಿನಲ್ಲೂ ಕಂಡಿದೆ.

‘ಕೆಜಿಎಫ್ 2’ ಸಿನಿಮಾದಲ್ಲಿ ಸಂಸತ್ತಿನ ಮೇಲೆ ರಾಕಿ ದಾಳಿ ಮಾಡುತ್ತಾನೆ. ಅದು ಅಷ್ಟು ಸುಲಭದ ಮಾತಲ್ಲ. ಇದಕ್ಕೆ ಆತ ‘ಸಲಾರ್ ಆರ್ಮಿ’ಯ ಸಹಾಯ ಪಡೆದಿದ್ದಾನೆ ಎಂದು ಚರ್ಚೆ ಆಗುತ್ತಿದೆ. ‘ಕೆಜಿಎಫ್ 2’ ಚಿತ್ರದಲ್ಲಿ 1979ರಿಂದ-81ರವರೆಗಿನ ಕಥೆಯನ್ನು ಸ್ಕಿಪ್ ಮಾಡಲಾಗಿದೆ. ಇದು ಉದ್ದೇಶಪೂರ್ವಕವಾಗಿದ್ದು, ಮೂರನೇ ಚಾಪ್ಟರ್​ನಲ್ಲಿ ಇದು ಹೈಲೈಟ್ ಆಗಲಿದೆ. ಹಾಗಾದಲ್ಲಿ, ‘ಸಲಾರ್’ ಚಿತ್ರದಲ್ಲಿ ಯಶ್ ಹಾಗೂ ಪ್ರಭಾಸ್ ಇಬ್ಬರೂ ಒಟ್ಟಿಗೆ ನಟಿಸಲಿದ್ದಾರೆ ಎಂದೆಲ್ಲ ನೆಟ್ಟಿಗರು ಲೆಕ್ಕಾಚಾರ ಹಾಕುತ್ತಿದ್ದಾರೆ.

ಇನ್ನೂ ಕೆಲವು ಕಡೆಗಳಲ್ಲಿ ‘ಸಲಾರ್ 2’ ಹಾಗೂ ‘ಕೆಜಿಎಫ್ 3’ ಒಂದೇ ಸಿನಿಮಾ ಎನ್ನುವ ಮಾತು ಕೇಳಿ ಬರುತ್ತಿದೆ. ‘ಸಲಾರ್’ ಚಿತ್ರದಲ್ಲಿ ಸಂಪೂರ್ಣವಾಗಿ ಸಲಾರ್ ಕಥೆ ಹೇಳಿ, ‘ಸಲಾರ್ 2’ಗೆ, ‘ಕೆಜಿಎಫ್ 3’ಗೆ ಕನೆಕ್ಷನ್ ನೀಡಲಾಗುತ್ತದೆ ಎನ್ನಲಾಗುತ್ತಿದೆ. ಇದಕ್ಕೆ ಚಿತ್ರತಂಡವೇ ಉತ್ತರ ನೀಡಬೇಕಿದೆ.

ಸದ್ಯಕ್ಕಂತೂ ಬಾಕ್ಸ್​ ಆಫೀಸ್​ನಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ನಾಗಾಲೋಟ ಮುಂದುವರಿದಿದೆ. ಮೊದಲ ದಿನವೇ 134.5 ಕೋಟಿ ರೂಪಾಯಿ ಮಾಡುವ ಮೂಲಕ ಎಲ್ಲರನ್ನೂ ಬೆರಗಾಗಿಸಿದೆ. ಎರಡನೇ ದಿನವಾದ ಶುಕ್ರವಾರ (ಏ.15) ಕೂಡ ಬಹುತೇಕ ಕಡೆಗಳಲ್ಲಿ ಈ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಂಡಿದೆ. ಶನಿವಾರ (ಏ.16) ಮತ್ತು ಭಾನುವಾರ (ಏ.17) ವೀಕೆಂಡ್​ ಆದ್ದರಿಂದ ಭಾರೀ ಕಲೆಕ್ಷನ್​ ಆಗುವ ನಿರೀಕ್ಷೆ ಇದೆ. ಈ ಚಿತ್ರದ ಲೈಫ್​ಟೈಮ್​ ಕಲೆಕ್ಷನ್​ ಎಷ್ಟು ಆಗಬಹುದು ಎಂಬ ಕೌತುಕ ಮೂಡಿದೆ.

ಇದನ್ನೂ ಓದಿ:

‘ಕೆಜಿಎಫ್​ 2’ ಬ್ಲಾಕ್​ ಬಸ್ಟರ್​ ಗೆಲುವು ಕಂಡ ಬಳಿಕ ‘ಪುಷ್ಪ 2’ ಚಿತ್ರತಂಡಕ್ಕೆ ಚಿಂತೆ ಶುರು; ಏನಿದು ಟಾಕ್​?

‘ಕೆಜಿಎಫ್​ 2’ಗೆ ಕೆಟ್ಟ ವಿಮರ್ಶೆ ಮಾಡಿ, ಯಶ್​ ಬಗ್ಗೆ ವ್ಯಂಗ್ಯದ ಮಾತಾಡಿದ ‘ದೇಶದ್ರೋಹಿ’ ನಟ:​ ಸಿಡಿದೆದ್ದ ಫ್ಯಾನ್ಸ್​

Follow us on

Related Stories

Most Read Stories

Click on your DTH Provider to Add TV9 Kannada