ಸಿನಿಮಾದಲ್ಲಿ ಬರುವ ಬೋಲ್ಡ್ ದೃಶ್ಯಗಳನ್ನು ಮಾಡೋಕೆ ಕೆಲ ನಟಿಯರು ಮುಜುಗರಪಟ್ಟುಕೊಳ್ಳುವುದೇ ಇಲ್ಲ. ಆದರೆ, ಕೆಲವರು ಈ ಬಗ್ಗೆ ಅಸಮಾಧಾನ ಹೊರ ಹಾಕುತ್ತಾರೆ. ನಾವು ಆ ರೀತಿಯ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿಬಿಡುತ್ತಾರೆ. ಈಗ ಪುನೀತ್ ನಟನೆಯ ‘ನಿನ್ನಿಂದಲೇ’ ಸಿನಿಮಾ ನಟಿ ಎರಿಕಾ ಫರ್ನಾಂಡಿಸ್ ಬೋಲ್ಡ್ ದೃಶ್ಯಗಳ ಬಗ್ಗೆ ಮಾತನಾಡಿದ್ದಾರೆ.
ನನಗೆ ಬೋಲ್ಡ್ ದೃಶ್ಯಗಳನ್ನು ಮಾಡೋಕೆ ಇಷ್ಟವಿಲ್ಲ. ನಾನು ಆ ಬಗ್ಗೆ ಮುಕ್ತವಾಗಿಯೇ ಹೇಳಿದ್ದೇನೆ. ಈ ರೀತಿಯ ಕೆಲ ಶೋಗಳಲ್ಲಿ ಪಾಲ್ಗೊಳ್ಳೋಕೆ ಅವಕಾಶ ಬಂದಿತ್ತು. ಆದರೆ, ನಾನು ಅದಕ್ಕೆ ನೋ ಎಂದಿದ್ದೇನೆ. ಜನರು ಶೋ ನೋಡಬೇಕು ಎನ್ನುವ ಕಾರಣಕ್ಕೆ ಈ ರೀತಿಯ ಬೋಲ್ಡ್ ಕಂಟೆಂಟ್ಗಳನ್ನು ತುರುಕುತ್ತಾರೆ ಎಂದೆನಿಸುತ್ತದೆ ಎಂದಿದ್ದಾರೆ ಎರಿಕಾ.
ನಾನು ಏನೇ ಮಾಡುತ್ತೀನಿ ಎಂದರೂ ಅದಕ್ಕೊಂದು ಲಾಜಿಕ್ ಬೇಕು. ಈ ರೀತಿಯ ವಿಚಾರಗಳು ಶೋನಲ್ಲಿ ಬೇಕು ಎಂದು ಹೇಳಿದಾಗ ಅದಕ್ಕೆ ಕಾರಣ ಕೇಳುತ್ತೇನೆ. ಅದಕ್ಕೆ ಅವರಿಂದ ಸರಿಯಾದ ಉತ್ತರ ಸಿಕ್ಕರೆ ನಾನು ಅದನ್ನು ಮಾಡುತ್ತೇನೆ. ಆದರೆ, ಜನರು ನೋಡುತ್ತಾರೆ ಎನ್ನುವ ಕಾರಣಕ್ಕೆ ಬೋಲ್ಡ್ ಕಂಟೆಂಟ್ಗಳನ್ನು ಮಾಡಲಾಗುತ್ತಿದೆ ಎಂದಿದ್ದಾರೆ.
‘555’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದರು ಎರಿಕಾ. 2014ರಲ್ಲಿ ತೆರೆಗೆ ಬಂದ ‘ನಿನ್ನಿಂದಲೇ’ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ಗೆ ಜತೆಯಾಗಿ ಎರಿಕಾ ನಟಿಸಿದ್ದರು. ವಿಜಯ್ ಕಿರಗಂದೂರು ನಿರ್ಮಾಣದ ಈ ಸಿನಿಮಾ ಪ್ಲಾಫ್ ಆಗಿತ್ತು. ‘ಬುಗುರಿ’ ಚಿತ್ರದಲ್ಲಿಯೂ ಎರಿಕಾ ನಟಿಸಿದ್ದರು. 2017ರ ಬಳಿಕ ಅವರು ಚಿತ್ರರಂಗದಲ್ಲಿ ಕಾಣಿಸಿಕೊಂಡಿಲ್ಲ. ಸದ್ಯ ಅವರು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.
ಎರಿಕಾ ಅಲ್ಲದೆ, ಸಾಕಷ್ಟು ನಟಿಯರು ಇದೇ ರೀತಿಯ ಆರೋಪ ಮಾಡಿದ್ದಿದೆ. ಅನೇಕ ನಿರ್ದೇಶಕರು ಸೊಂಟ ಬಳುಕಿಸೋಕೆ ಮಾತ್ರ ಹೀರೋಯಿನ್ಗಳನ್ನು ಬಳಕೆ ಮಾಡಿಕೊಳ್ಳುತ್ತಾರೆ ಎಂದು ಆರೋಪಿಸಿದ ಉದಾಹರಣೆ ಕೂಡ ಇದೆ.
ಇದನ್ನೂ ಓದಿ: ‘ಬುಲ್ಬುಲ್’ ಸಿನಿಮಾ ನಟಿ ಜತೆ ಅನುಷ್ಕಾ ಶರ್ಮಾ ಸಹೋದರನ ಡೇಟಿಂಗ್
ಮತ್ತೊಂದು ಸಿಡಿ ಪ್ರಕರಣ; ನಟಿ ಜತೆ ಮಾಜಿ ಸಚಿವನ ಲಿವ್ ಇನ್ ರಿಲೇಶನ್ಶಿಪ್, ಠಾಣೆ ಮೆಟ್ಟಿಲೇರಿದ ಕೇಸ್