ಗುರುಶಿಷ್ಯರಿಗೆ ಕೊನೆಗೂ ಸಿಕ್ಕಳು ನಾಯಕಿ; ಹಳ್ಳಿ ಹುಡುಗಿ ಲುಕ್​ನಲ್ಲಿ ನಿಶ್ವಿಕಾ ನಾಯ್ಡು ಮಿಂಚಿಂಗ್ ​

|

Updated on: May 19, 2021 | 6:40 PM

‘ಅಮ್ಮ ಐ ಲವ್ ಯು’, ‘ಪಡ್ಡೆ ಹುಲಿ’, ‘ಜಂಟಲ್​ಮನ್’ ಮುಂತಾದ ಚಿತ್ರಗಳಲ್ಲಿ ಯಶಸ್ಸು ಪಡೆದ ನಿಶ್ವಿಕಾ ನಾಯ್ಡು ಈಗ ‘ಗುರುಶಿಷ್ಯರು‘ ಚಿತ್ರದ ಸೆಟ್​ ಸೇರಿಕೊಂಡಿದ್ದಾರೆ. ಅವರು ಶರಣ್​ಗೆ ಜತೆಯಾಗಿ ನಟಿಸುತ್ತಿದ್ದಾರೆ.

ಗುರುಶಿಷ್ಯರಿಗೆ ಕೊನೆಗೂ ಸಿಕ್ಕಳು ನಾಯಕಿ; ಹಳ್ಳಿ ಹುಡುಗಿ ಲುಕ್​ನಲ್ಲಿ ನಿಶ್ವಿಕಾ ನಾಯ್ಡು ಮಿಂಚಿಂಗ್ ​
ಗುರುಶಿಷ್ಯರು ಸಿನಿಮಾದಲ್ಲಿ ಗುರುಶಿಷ್ಯರು
Follow us on

 ಶರಣ್​ ನಟನೆಯ ‘ಗುರುಶಿಷ್ಯರು’ ಸಿನಿಮಾ ಘೋಷಣೆ ಆದ ದಿನದಿಂದಲೂ ಸಾಕಷ್ಟು ಕುತೂಹಲ ಮೂಡಿಸಿತ್ತು. ಆದರೆ, ಈ ಚಿತ್ರಕ್ಕೆ ನಾಯಕಿ ಯಾರು ಎಂಬುದನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಈಗ ಈ ವಿಚಾರವನ್ನು ಕೊನೆಗೂ ಚಿತ್ರತಂಡ ಬಹಿರಂಗಗೊಳಿಸಿದೆ. ಈ ಚಿತ್ರಕ್ಕೆ ನಿಶ್ವಿಕಾ ನಾಯ್ಡು ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

‘ಅಮ್ಮ ಐ ಲವ್ ಯು’, ‘ಪಡ್ಡೆ ಹುಲಿ’, ‘ಜಂಟಲ್​ಮನ್’ ಮುಂತಾದ ಚಿತ್ರಗಳಲ್ಲಿ ಯಶಸ್ಸು ಪಡೆದ ನಿಶ್ವಿಕಾ ನಾಯ್ಡು ಈಗ ‘ಗುರುಶಿಷ್ಯರು‘ ಚಿತ್ರದ ಸೆಟ್​ ಸೇರಿಕೊಂಡಿದ್ದಾರೆ. ಅವರು ಶರಣ್​ಗೆ ಜತೆಯಾಗಿ ನಟಿಸುತ್ತಿದ್ದಾರೆ. ಇಂದು ನಿಶ್ವಿಕಾ ಜನ್ಮದಿನ. ಹೀಗಾಗಿ ಚಿತ್ರತಂಡ ಫಸ್ಟ್​ಲುಕ್​ ಬಿಡುಗಡೆ ಮಾಡಿದೆ.

ನಿಶ್ವಿಕಾ ಚಿತ್ರದ ನಾಯಕಿಯಾಗಿ ಆಯ್ಕೆ ಆಗುವುದಕ್ಕೆ ಸಾಕಷ್ಟು ಅಡೆ-ತಡೆಗಳನ್ನು ಎದುರಿಸಿ ಬಂದಿದ್ದಾರಂತೆ. ‘30 ಹೊಸ ಕಲಾವಿದೆಯರು, ಕನ್ನಡ ಚಿತ್ರರಂಗದ ಅನೇಕ ನಟಿಯರು, ಪರಭಾಷಾ ನಟಿಯರನ್ನು ಕೂಡ ಗುರು ಶಿಷ್ಯರು ಚಿತ್ರಕ್ಕೆ ಪರಿಗಣಿಸಲಾಗಿತ್ತು. ಕೊನೆಗೆ ಈ ಪಾತ್ರಕ್ಕೆ ನಿಶ್ವಿಕಾ ಆಯ್ಕೆ ಆಗಿದ್ದಾರೆ’ ಎಂದು ಚಿತ್ರತಂಡ ಹೇಳಿಕೊಂಡಿದೆ.

ಶರಣ್ ಈ ಚಿತ್ರದ ಹೀರೋ. ದೈಹಿಕ ಶಿಕ್ಷಕರಾಗಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಜೊತೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಅಪ್ಪಟ ಹಳ್ಳಿ ಹುಡುಗಿಯಾಗಿ, ರವಿಚಂದ್ರನ್ ಅಭಿಮಾನಿಯಾಗಿ, ಹಾಲಿನ ಡೈರಿ ನಡೆಸುವ ಯುವತಿಯಾಗಿ ಕಾಣಿಸಿಕೊಂಡಿದ್ದಾರೆ. ಗುರುಶಿಷ್ಯರು ಚಿತ್ರದ ಕಥೆ 1995 ರಲ್ಲಿ ನಡೆಯುವಂಥದ್ದು. ಹೀಗಾಗಿ ಈ ಚಿತ್ರ ರೆಟ್ರೋ ಲುಕ್​ನಲ್ಲಿ ಇರಲಿದೆ.

ಕೊರೊನಾ ವೈರಸ್​ ಮಿತಿಮೀರಿ ಹರಡುತ್ತಿದೆ. ಹೀಗಾಗಿ, ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಇದರಿಂದ ಸಿನಿಮಾ ಶೂಟಿಂಗ್​ ನಿಂತಿದೆ. ಗುರುಶಿಷ್ಯರು ಸಿನಿಮಾದ ಶೇ. 60 ಚಿತ್ರೀಕರಣ ಪೂರ್ಣಗೊಂಡಿದೆ. ಉಳಿದ ಭಾಗದ ಚಿತ್ರೀಕರಣ ಲಾಕ್​ಡೌನ್ ಮುಗಿದ ನಂತರ ನಡೆಸಲಾಗುತ್ತದೆ.

ನಿಶ್ವಿಕಾ ಇಷ್ಟು ದಿನ ಗ್ಲಾಮರ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಈಗ ಇದೇ ಮೊದಲ ಬಾರಿಗೆ ಅವರು ಹಳ್ಳಿ ಹುಡುಗಿಯ ಪಾತ್ರ ಮಾಡುತ್ತಿದ್ದಾರೆ. ಅವರ ಫಸ್ಟ್​ ಲುಕ್​ ಕೂಡ ರಿಲೀಸ್​ ಆಗಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: Happy Birthday Sharan: ಅಣ್ಣ ಶರಣ್​ಗೆ ಪ್ರೀತಿಯಿಂದ ಶುಭಾಶಯ ಕೋರಿದ ನಟಿ ಶ್ರುತಿ

Published On - 6:33 pm, Wed, 19 May 21