AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಡುಗಡೆ ಆಗುತ್ತಿದೆ ‘ನಾಟ್ ಔಟ್’: ಅರ್ಧ ಸಿನಿಮಾಕ್ಕೆ ಟಿಕೆಟ್ ಇಲ್ಲ!

‘ನಾಟ್ ಔಟ್’ ಕನ್ನಡ ಸಿನಿಮಾ ಜುಲೈ 19 ರಂದು ಬಿಡುಗಡೆ ಆಗುತ್ತಿದ್ದು, ಈ ಸಿನಿಮಾವನ್ನು ಉಚಿತವಾಗಿ ಚಿತ್ರತಂಡ ಪ್ರದರ್ಶನ ಮಾಡುತ್ತಿದೆ. ಆದರೆ ಒಂದು ಷರತ್ತಿದೆ. ಅರ್ಧ ಸಿನಿಮಾವನ್ನಷ್ಟೆ ಜನ ಉಚಿತವಾಗಿ ನೋಡಬಹುದು. ಇನ್ನರ್ಧ ನೋಡಲು ಮಾತ್ರವೇ ದುಡ್ಡು ಕೊಡಬೇಕು.

ಬಿಡುಗಡೆ ಆಗುತ್ತಿದೆ ‘ನಾಟ್ ಔಟ್’: ಅರ್ಧ ಸಿನಿಮಾಕ್ಕೆ ಟಿಕೆಟ್ ಇಲ್ಲ!
ನಾಟ್ ಔಟ್
Follow us
ಮಂಜುನಾಥ ಸಿ.
|

Updated on: Jul 07, 2024 | 12:05 PM

ಸಿನಿಮಾಗಳ ಟಿಕೆಟ್ ದರ ಹೆಚ್ಚಳ ಮಾಡಬೇಕೆಂದು ನೆರೆಯ ರಾಜ್ಯಗಳಲ್ಲಿ ಸರ್ಕಾರ ಹಾಗೂ ಚಿತ್ರರಂಗದ ನಡುವೆ ಕಿತ್ತಾಟ ನಡೆಯುತ್ತಿದೆ. ಕರ್ನಾಟಕದಲ್ಲಿಯೂ ಸಹ ಮಲ್ಟಿಪ್ಲೆಕ್ಸ್​ನಲ್ಲಿ ಟಿಕೆಟ್ ದರಗಳ ಬಗ್ಗೆ ಆಗಾಗ್ಗೆ ನಿರ್ಮಾಪಕರು ಹಾಗೂ ಮಲ್ಟಿಪ್ಲೆಕ್ಸ್ ನಡುವೆ ಕಿತ್ತಾಟ ನಡೆಯುತ್ತಲೇ ಇರುತ್ತವೆ. ಆದರೆ ಇದೀಗ ಕನ್ನಡದ ಸಿನಿಮಾ ಒಂದು ಉಚಿತವಾಗಿ ಸಿನಿಮಾವನ್ನು ಪ್ರೇಕ್ಷಕರಿಗೆ ತೋರಿಸಲು ಮುಂದಾಗಿದೆ. ಆದರೆ ಅರ್ಧ ಸಿನಿಮಾ ಮಾತ್ರ!

ಹೌದು, ‘ನಾಟ್ ಔಟ್’ ಹೆಸರಿನ ಕನ್ನಡ ಸಿನಿಮಾ ಒಂದು ಕೆಲವೇ ಜುಲೈ 19ಕ್ಕೆ ತೆರೆಗೆ ಬರಲಿದ್ದು, ಈ ಸಿನಿಮಾ ನೋಡಲು ಬಯಸುವ ಜನರಿಗೆ ಟಿಕೆಟ್ ಉಚಿತ ಆದರೆ ಒಂದು ಷರತ್ತಿದೆ. ಉಚಿತ ಟಿಕೆಟ್ ಇರುವುದು ಕೇವಲ ಅರ್ಧ ಸಿನಿಮಾಕ್ಕೆ ಮಾತ್ರ. ಇನ್ನರ್ಧ ಸಿನಿಮಾ ನೋಡಬೇಕು ಎಂದುಕೊಂಡರೆ ಆಗ ಟಿಕೆಟ್ ಖರೀದಿ ಮಾಡಬೇಕು. ಅರ್ಧ ಸಿನಿಮಾ ನೋಡಿ ಸಾಕಪ್ಪ ಎಂದುಕೊಂಡರೆ ಹಣ ಕೊಡದೆ ಚಿತ್ರಮಂದಿರದಿಂದ ಹೊರಗೆ ಹೋಗಬಹುದು. ಅರ್ಧ ಸಿನಿಮಾ ನೋಡಿದವರು ಹಣ ಕೊಟ್ಟಾದರೂ ಸಹ ಪೂರ್ತಿ ಸಿನಿಮಾ ನೋಡಿಯೇ ನೋಡುತ್ತಾರೆ ಎಂಬುದು ಚಿತ್ರತಂಡದ ನಂಬಿಕೆ.

ಇದನ್ನೂ ಓದಿ:ಪವನ್​ ಕಲ್ಯಾಣ್​ರ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ನಿಂತು ಹೋಯಿತೇ?

ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ.ರವಿಕುಮಾರ್ ಹಾಗೂ ಶಂಶುದ್ದೀನ್ ಎ ಅವರುಗಳು ‘ನಾಟ್ ಔಟ್’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅಜಯ್ ಪೃಥ್ವಿ, ರಚನಾ ಇಂದರ್ ನಾಯಕ, ನಾಯಕಿಯಾಗಿ ನಟಿಸಿರುವ ಈ ಸಿನಿಮಾವನ್ನು ಅಂಬರೀಶ್ ಎಂ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಟ್ರೇಲರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ನಟ ಶ್ರೀನಗರ ಕಿಟ್ಟಿ, ನಿರ್ದೇಶಕ ಸಿಂಪಲ್ ಸುನಿ ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ ಕೇವಲ ನಾಲ್ಕು ಗಂಟೆಗಳಲ್ಲಿ ಮಗುವನ್ನು ಆಂಬುಲೆನ್ಸ್ ನಲ್ಲಿ ಕರೆತಂದ ಚಾಲಕ ಹನೀಫ್ ಮೂವರು ಸೇರಿ ಟ್ರೇಲರ್ ಬಿಡುಗಡೆ ಮಾಡಿ, ಸಿನಿಮಾಕ್ಕೆ ಶುಭ ಕೋರಿದರು.

ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಅಂಬರೀಶ್, ಲಾಕ್ ಡೌನ್ ಸಂದರ್ಭದಲ್ಲಿ ನಾನು ಬರೆದ ಕಥೆ‌ಯೇ ‘ನಾಟ್ ಔಟ್’. ಕಥೆ ಮೆಚ್ಚಿ ನಿರ್ಮಾಪಕರು ಹಣ ಹೂಡಲು ಮುಂದೆ ಬಂದರು. ಟೊರೊಂಟೊದಲ್ಲಿ ನಟನೆ ತರಬೇತಿ ಮುಗಿಸಿರುವ ಅಜಯ್ ಪೃಥ್ವಿ ಈ ಸಿನಿಮಾದ ನಾಯಕ. ರಚನಾ ಇಂದರ್ ನಾಯಕಿ. ರವಿಶಂಕರ್, ಕಾಕ್ರೋಚ್ ಸುಧೀರ್ ಇತರೆ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಡಾರ್ಕ್ ಹ್ಯೂಮರ್ ಇದೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಪರೇಷನ್ ಸಿಂಧೂರ್: ಯುದ್ಧವಾದರೆ ನಾವೂ ಸಿದ್ಧ ಎಂದ ಬಾಗಲಕೋಟೆ ಮಾಜಿ ಯೋಧರು
ಆಪರೇಷನ್ ಸಿಂಧೂರ್: ಯುದ್ಧವಾದರೆ ನಾವೂ ಸಿದ್ಧ ಎಂದ ಬಾಗಲಕೋಟೆ ಮಾಜಿ ಯೋಧರು
ಭಾರತೀಯ ಸೇನೆಯಿರುವಾಗ ನಮಗ್ಯಾವ ಭಯವೂ ಇಲ್ಲ: ಪ್ರವಾಸಿಗರು
ಭಾರತೀಯ ಸೇನೆಯಿರುವಾಗ ನಮಗ್ಯಾವ ಭಯವೂ ಇಲ್ಲ: ಪ್ರವಾಸಿಗರು
ಆಪರೇಷನ್ ಸಿಂಧೂರವನ್ನು ಹಣೆಗೆ ತಿಲಕ ಇಟ್ಟುಕೊಂಡೇ ಹೊಗಳಿದ ಸಿಎಂ ಸಿದ್ದರಾಮಯ್ಯ
ಆಪರೇಷನ್ ಸಿಂಧೂರವನ್ನು ಹಣೆಗೆ ತಿಲಕ ಇಟ್ಟುಕೊಂಡೇ ಹೊಗಳಿದ ಸಿಎಂ ಸಿದ್ದರಾಮಯ್ಯ
ಮನೆಮಾಳಿಗೆ ಮೇಲೆ ನಿಂತು ಧ್ವಂಸಗೊಂಡಿರುವ ಮಸೀದಿಯನ್ನು ವೀಕ್ಷಿಸಿದ ಜನ
ಮನೆಮಾಳಿಗೆ ಮೇಲೆ ನಿಂತು ಧ್ವಂಸಗೊಂಡಿರುವ ಮಸೀದಿಯನ್ನು ವೀಕ್ಷಿಸಿದ ಜನ
ಎಚ್ಚರಿಕೆಯನ್ನು ಹಗುರವಾಗಿ ತೆಗೆದುಕೊಂಡ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ!
ಎಚ್ಚರಿಕೆಯನ್ನು ಹಗುರವಾಗಿ ತೆಗೆದುಕೊಂಡ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ!
‘ಭಾಷೆ-ಸಂಸ್ಕೃತಿಗೆ ಗೌರವಿಸಬೇಕು’; ಸೋನು ನಿಗಮ್​ಗೆ ರಾಗಿಣಿ ಕಿವಿಮಾತು
‘ಭಾಷೆ-ಸಂಸ್ಕೃತಿಗೆ ಗೌರವಿಸಬೇಕು’; ಸೋನು ನಿಗಮ್​ಗೆ ರಾಗಿಣಿ ಕಿವಿಮಾತು
Live: ಆಪರೇಷನ್ ಸಿಂಧೂರ್ ಬೆನ್ನಲ್ಲೇ ಸೇನಾಧಿಕಾರಿಗಳಿಂದ ಸುದ್ದಿಗೋಷ್ಠಿ
Live: ಆಪರೇಷನ್ ಸಿಂಧೂರ್ ಬೆನ್ನಲ್ಲೇ ಸೇನಾಧಿಕಾರಿಗಳಿಂದ ಸುದ್ದಿಗೋಷ್ಠಿ
ಭಾರತದ ಬಲಿಷ್ಠ ಸೇನೆಯನ್ನು ತಡವಿರುವ ಪಾಕ್ ಪತರುಗುಟ್ಟಿದೆ: ಮಾಜಿ ಸೈನಿಕರು
ಭಾರತದ ಬಲಿಷ್ಠ ಸೇನೆಯನ್ನು ತಡವಿರುವ ಪಾಕ್ ಪತರುಗುಟ್ಟಿದೆ: ಮಾಜಿ ಸೈನಿಕರು
ಆಪರೇಷನ್ ಸಿಂಧೂರ್​ಗೆ ಉಗ್ರರ ನೆಲೆಗಳು ಧ್ವಂಸ, ಫೋಟೊಗಳು ಇಲ್ಲಿವೆ ನೋಡಿ
ಆಪರೇಷನ್ ಸಿಂಧೂರ್​ಗೆ ಉಗ್ರರ ನೆಲೆಗಳು ಧ್ವಂಸ, ಫೋಟೊಗಳು ಇಲ್ಲಿವೆ ನೋಡಿ
VIDEO: ಪವರ್​ಪ್ಲೇನಲ್ಲೇ 3 ಕ್ಯಾಚ್ ಕೈಚೆಲ್ಲಿದ ಗುಜರಾತ್ ಟೈಟಾನ್ಸ್
VIDEO: ಪವರ್​ಪ್ಲೇನಲ್ಲೇ 3 ಕ್ಯಾಚ್ ಕೈಚೆಲ್ಲಿದ ಗುಜರಾತ್ ಟೈಟಾನ್ಸ್