Pogaru Audio Release: ‘ಪೊಗರು’ ಆಡಿಯೋ ಲಾಂಚ್​​​​ಗೆ ಬರಲಿದ್ದಾರೆ ಸಿದ್ದರಾಮಯ್ಯ; ದಾವಣಗೆರೆಯಲ್ಲಿ ಅದ್ದೂರಿ ಸಮಾರಂಭಕ್ಕೆ ಸಿದ್ದರಾಮಯ್ಯಗೆ ಆಹ್ವಾನ

| Updated By: Digi Tech Desk

Updated on: Feb 13, 2021 | 9:11 AM

Siddaramaiah: ಸ್ಯಾಂಡಲ್​ವುಡ್​ನ ಮೋಸ್ಟ್​ ಎಕ್ಸ್​ಪೆಕ್ಟೆಡ್​ ಸಿನಿಮಾ ಆದ ಧ್ರುವ ಸರ್ಜಾ ನಟನೆಯ ಪೊಗರು ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಮುಹೂರ್ತ ಫಿಕ್ಸ್​ ಆಗಿದೆ. ಫೆ.14ರಂದು ದಾವಣಗೆರೆಯಲ್ಲಿ ‘ಪೊಗರು’ ಸಿನಿಮಾದ ಆಡಿಯೋ ಲಾಂಚ್​ ಸಮಾರಂಭವನ್ನು ಆಯೋಜಿಸಲಾಗಿದೆ.

Pogaru Audio Release: ‘ಪೊಗರು’ ಆಡಿಯೋ ಲಾಂಚ್​​​​ಗೆ ಬರಲಿದ್ದಾರೆ ಸಿದ್ದರಾಮಯ್ಯ; ದಾವಣಗೆರೆಯಲ್ಲಿ ಅದ್ದೂರಿ ಸಮಾರಂಭಕ್ಕೆ ಸಿದ್ದರಾಮಯ್ಯಗೆ ಆಹ್ವಾನ
ಬೆಣ್ಣೆನಗರಿಯಲ್ಲಿ ಅದ್ದೂರಿ ಸಮಾರಂಭಕ್ಕೆ ಸಿದ್ದರಾಮಯ್ಯಗೆ ಆಹ್ವಾನ
Follow us on

ಬೆಂಗಳೂರು: ಸ್ಯಾಂಡಲ್​ವುಡ್​ನ ಮೋಸ್ಟ್​ ಎಕ್ಸ್​ಪೆಕ್ಟೆಡ್​ ಸಿನಿಮಾ ಆದ ಧ್ರುವ ಸರ್ಜಾ ನಟನೆಯ ಪೊಗರು ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಮುಹೂರ್ತ ಫಿಕ್ಸ್​ ಆಗಿದೆ. ಫೆ.14ರಂದು ದಾವಣಗೆರೆಯಲ್ಲಿ ‘ಪೊಗರು’ ಸಿನಿಮಾದ ಆಡಿಯೋ ಲಾಂಚ್​ ಸಮಾರಂಭವನ್ನು ಆಯೋಜಿಸಲಾಗಿದೆ.

ಈ ನಡುವೆ, ಪೊಗರು ಆಡಿಯೋ ಲಾಂಚ್​ ಸಮಾರಂಭಕ್ಕೆ ಚಿತ್ರತಂಡ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಆಹ್ವಾನ ನೀಡಿದೆ. ನಟ ಧ್ರುವ ಸರ್ಜಾ ಹಾಗೂ ಚಿತ್ರದ ನಿರ್ದೇಶಕ ನಂದಕಿಶೋರ್ ಸಿದ್ದರಾಮಯ್ಯನವರನ್ನು ಇಂದು ಭೇಟಿಯಾಗಿ ಸಮಾರಂಭಕ್ಕೆ ಆಹ್ವಾನ ನೀಡಿದರು. ಈ ವೇಳೆ, ಶಾಸಕ ಬೈರತಿ ಸುರೇಶ್ ಮತ್ತು ನಟ ಪ್ರಥಮ್ ಸಹ ಉಪಸ್ಥಿತರಿದ್ದರು.

ಅಂದ ಹಾಗೆ,ಚಿತ್ರತಂಡವು ಹಲವು ರಾಜಕಾರಣಿಗಳು ಮತ್ತು ಕಲಾವಿದರನ್ನು ಸಮಾರಂಭಕ್ಕೆ ಆಹ್ವಾನಿಸಿದೆ. ಪ್ರೇಮಿಗಳ ದಿನದಂದೇ ಬೆಣ್ಣೆನಗರಿಯಲ್ಲಿ ಆಡಿಯೋ ರಿಲೀಸ್ ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ: You’ll All See 7 ವರ್ಷಗಳ ಸತತ ಪರಿಶ್ರಮದಿಂದ ಮೂಡಿದ 264 ಪುಟಗಳ ಪುಸ್ತಕ: ದಿವ್ಯಾಂಗನ ಸಾಧನೆಯನ್ನು ಒಮ್ಮೆ ‘ನೀವೂ ನೋಡಿ’!

Published On - 11:38 pm, Fri, 12 February 21