ಪಾಕಿಸ್ತಾನದ ಈ ವ್ಯಕ್ತಿ ಅಪ್ಪು ಅಭಿಮಾನಿ; ಕ್ಯಾಬ್​ನಲ್ಲಿ ಸದಾ ಪ್ಲೇ ಆಗುತ್ತೆ ಪುನೀತ್ ಸಾಂಗ್

ಪಾಕಿಸ್ತಾನದ ಕ್ಯಾಬ್ ಡ್ರೈವರ್ ಒಬ್ಬರು ಪುನೀತ್ ರಾಜ್ ಕುಮಾರ್ ಅವರ ಹಾಡುಗಳನ್ನು ತುಂಬಾ ಇಷ್ಟಪಡುತ್ತಾರಂತೆ. ಕರ್ನಾಟಕ ಮೂಲದ ದುಬೈ ನಿವಾಸಿ ಈ ವಿಚಾರ ತಿಳಿಸಿದ್ದಾರೆ. ಭಾರತ-ಪಾಕಿಸ್ತಾನದ ಉದ್ವಿಗ್ನತೆಯ ನಡುವೆಯೂ ಸಂಗೀತದ ಅಭಿಮಾನವು ಗಡಿಗಳನ್ನು ದಾಟಿದೆ ಎಂಬುದಕ್ಕೆ ಇದು ಒಳ್ಳೆಯ ಉದಾಹರಣೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಾಕಿಸ್ತಾನದ ಈ ವ್ಯಕ್ತಿ ಅಪ್ಪು ಅಭಿಮಾನಿ; ಕ್ಯಾಬ್​ನಲ್ಲಿ ಸದಾ ಪ್ಲೇ ಆಗುತ್ತೆ ಪುನೀತ್ ಸಾಂಗ್
ಪುನೀತ್

Updated on: Jun 26, 2025 | 7:08 AM

ಇತ್ತೀಚೆಗೆ ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಯಾವುದೂ ಸರಿ ಇಲ್ಲ. ಎರಡೂ ದೇಶಗಳ ಮಧ್ಯೆ ಯುದ್ಧ ಭಿತಿ ಕೂಡ ಶುರುವಾಗಿತ್ತು. ಈ ಕಾರಣದಿಂದಲೇ ಪಾಕಿಸ್ತಾನದ ಕಲಾವಿದರನ್ನು ಹಾಗೂ ಅಲ್ಲಿನ ಸಿನಿಮಾಗಳನ್ನು ಭಾರತದಲ್ಲಿ ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ. ಪಾಕಿಸ್ತಾನದವರ ಸೋಶಿಯಲ್ ಮೀಡಿಯಾ ಖಾತೆಯನ್ನು ಭಾರತದಲ್ಲಿ ಆ್ಯಕ್ಸೆಸ್ ಮಾಡಲು ಸಾಧ್ಯವಿಲ್ಲ. ಆದರೆ, ಅಭಿಮಾನಿವನ್ನು ಎಂದಾದರೂ ತಡೆಯಲು ಸಾಧ್ಯವೇ? ಇದಕ್ಕೆ ಪಾಕಿಸ್ತಾನದ ಈ ಕ್ಯಾಬ್ ಡ್ರೈವರ್ ಒಳ್ಳೆಯ ಉದಾಹರಣೆ. ಇವರ ಕಾರಿನಲ್ಲಿ ಪುನೀತ್ (Puneeth Rajkumar) ಹಾಡುಗಳು ಪ್ಲೇ ಆಗುತ್ತವೆ. ಈ ವಿಚಾರವನ್ನು ಕನ್ನಡದವರೊಬ್ಬರು ರಿವೀಲ್ ಮಾಡಿದ್ದಾರೆ.

ಪ್ರಿಯಾಂಕಾ ಎಂಬುವವರು ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರು ಕರ್ನಾಟಕದವರಾಗಿದ್ದು, ದುಬೈನಲ್ಲಿ ವಾಸವಾಗಿದ್ದಾರೆ. ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಒಂದು ಅಚ್ಚರಿಯ ವಿಚಾರ ರಿವೀಲ್ ಮಾಡಿದ್ದಾರೆ. ಅವರು ಕ್ಯಾಬ್ ಏರುತ್ತಿದ್ದಂತೆ ಆ ವ್ಯಕ್ತಿ ನೀವು ಯಾವ ಊರಿನವರು ಎಂದು ಕೇಳಿದರಂತೆ. ಅದಕ್ಕೆ ಇವರು ಕರ್ನಾಟಕ, ಭಾರತ ಎಂದಿದ್ದಾರೆ. ಆ ಕ್ಷಣಕ್ಕೆ ಡ್ರೈವರ್ ಬಾಯಿಂದ ಬಂದಿದ್ದು ‘ಪುನೀತ್ ರಾಜ್​ಕುಮಾರ್’  ಹೆಸರು.

ಇದನ್ನೂ ಓದಿ
‘ಆರ್ಯನ್ ಯಾವಾಗಲೂ ನಾನು ಮುಸ್ಲಿಂ ಎಂದೇ ಹೇಳುತ್ತಾನೆ’; ಗೌರಿ ಖಾನ್
‘ಆನಂದ್’ ಸಿನಿಮಾದ ಸಾಂಗ್ ಶೂಟಿಂಗ್ ವೇಳೆ ನಡೆದಿತ್ತು ಫನ್ನಿ ಘಟನೆ
‘ಅದು ನಡೆದಿಲ್ಲ’; ಹಾರ್ದಿಕ್ ಜೊತೆಗಿನ ಲವ್ವಿ-ಡವ್ವಿ ಬಗ್ಗೆ ಇಶಾ ಮಾತು
ಕನ್ನಡದ ಪ್ರಶಾಂತ್ ನೀಲ್ ಜೊತೆ ಕೈ ಜೋಡಿಸಿದ ಅಲ್ಲು ಅರ್ಜುನ್? ಖಡಕ್ ಟೈಟಲ್

‘ಈ ವ್ಯಕ್ತಿ ಪಾಕಿಸ್ತಾನದವರು. ಆದರೆ, ಇವರಿಗೆ ಕನ್ನಡ ಹಾಡು ಅದರಲ್ಲೂ ಪುನೀತ್ ರಾಜ್​ಕುಮಾರ್ ಹಾಡನ್ನು ಅವರು ಸಾಕಷ್ಟು ಇಷ್ಟಪಡುತ್ತಾರೆ’ ಎಂದರು ಪ್ರಿಯಾಂಕಾ. ಇದಕ್ಕೆ ಕ್ಯಾಬ್ ಡ್ರೈವರ್, ‘ನನಗೆ ಈ ಸಾಂಗ್ ತುಂಬಾನೇ ಇಷ್ಟ. ಪುನೀತ್ ಸಿನಿಮಾದ ಹಾಡು ನನಗೆ ಇಷ್ಟ’ ಎಂದು ಅವರು ಹೇಳಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

‘ಸೂರ್ಯ ಚಂದ್ರ ಇರೋವರೆಗೂ ಅಪ್ಪು ಬಾಸ್ ಅಮರ’ ಎಂದು ಕೆಲವರು ಈ ವಿಡಿಯೋಗೆ ಕಮೆಂಟ್ ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಪ್ರೀತಿಗೆ ಗಡಿ ಇಲ್ಲ’ ಎಂದಿದ್ದಾರೆ. ಇನ್ನೂ ಕೆಲವರು ಪುನೀತ್ ಅವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ಪುನೀತ್ ರಾಜ್​ಕುಮಾರ್ ಕನ್ನಡ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರು. ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. ಅವರು ನಮ್ಮನ್ನು ಅಗಲಿದರೂ ಅವರನ್ನು ನೆನಪು ಮಾಡಿಕೊಳ್ಳುವ ಕೆಲಸ ಈಗಲೂ ಆಗುತ್ತಿದೆ. ಪುನೀತ್ ಹೆಸರಲ್ಲಿ ರಸ್ತೆಗಳು ನಿರ್ಮಾಣ ಆಗಿವೆ. ಪಾರ್ಕ್​ಗಳಿಗೆ ಪುನೀತ್ ಹೆಸರನ್ನು ಕೂಡ ಇಡಲಾಗಿದೆ.

ಇದನ್ನೂ ಓದಿ: ‘ಅವನಿರಬೇಕಿತ್ತು’ ಸಿನಿಮಾ ಟ್ರೇಲರ್ ನೋಡಿ ಮೆಚ್ಚಿದ ಅಶ್ವಿನಿ ಪುನೀತ್ ರಾಜ್​ಕುಮಾರ್

ಪುನೀತ್ ರಾಜ್​ಕುಮಾರ್ ಅವರು 2021ರ ಅಕ್ಟೋಬರ್ 29ರಂದು ನಿಧನ ಹೊಂದಿದರು. ಅವರು ಇಲ್ಲ ಎಂಬ ನೋವನ್ನು ಈಗಲೂ ಅಭಿಮಾನಿಗಳ ಬಳಿ ಮರೆಯಲು ಸಾಧ್ಯವಾಗುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:07 am, Thu, 26 June 25