‘ಚಿಗುರಿದ ಕನಸು’ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದ ಈ ಕಲಾವಿದ ಈಗ ಬಾಲಿವುಡ್​ನ ಸ್ಟಾರ್ ಹೀರೋ

ಪಂಕಜ್ ತ್ರಿಪಾಠಿ ಅವರು ಇಂದು ತಮ್ಮ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಅವರು ಬಾಲಿವುಡ್ ನಲ್ಲಿ ಪ್ರಸಿದ್ಧ ನಟರಾಗಿದ್ದಾರೆ. ಆದರೆ ಅವರು ಕನ್ನಡ ಚಿತ್ರರಂಗದಲ್ಲಿಯೂ ಕಾಣಿಸಿಕೊಂಡಿದ್ದಾರೆ ಎಂಬುದು ಕೆಲವರಿಗೆ ತಿಳಿದಿಲ್ಲ. 2003ರಲ್ಲಿ ಬಿಡುಗಡೆಯಾದ "ಚಿಗುರಿದ ಕನಸು" ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆ ಅವರು ನಟಿಸಿದ್ದರು.

‘ಚಿಗುರಿದ ಕನಸು’ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದ ಈ ಕಲಾವಿದ ಈಗ ಬಾಲಿವುಡ್​ನ ಸ್ಟಾರ್ ಹೀರೋ
ಪಂಕಜ್
Updated By: ರಾಜೇಶ್ ದುಗ್ಗುಮನೆ

Updated on: Sep 05, 2025 | 8:39 AM

ಪಂಕಜ್ ತ್ರಿಪಾಠಿಗೆ ಇಂದು (ಸೆಪ್ಟೆಂಬರ್ 5) ಬರ್ತ್​ಡೇ. ಬಾಲಿವುಡ್​​ನ ಈ ಸ್ಟಾರ್ ನಟನಿಗೆ ಎಲ್ಲ ಕಡೆಗಳಿಂದ ಶುಭಾಶಯಗಳು ಬರುತ್ತಿವೆ. ಅವರು ಪೋಷಕ ಪಾತ್ರಗಳ ಮೂಲಕ ದೇಶಾದ್ಯಂತ ಹೆಸರು ಮಾಡಿದ್ದಾರೆ. ಅವರು ಕನ್ನಡದಲ್ಲಿ ಈ ಮೊದಲು ನಟನೆ ಮಾಡಿದ್ದರು ಅನ್ನೋದು ವಿಶೇಷ. ಈ ವಿಚಾರ ಅನೇಕರಿಗೆ ಗೊತ್ತೇ ಇಲ್ಲ. ಅದು ಬೇರೆ ಯಾರ ಜೊತೆಯೂ ಅಲ್ಲ, ನಟ ಶಿವರಾಜ್​ಕುಮಾರ್ ಜೊತೆ. ಆ ಬಗ್ಗೆ ಇಲ್ಲಿದೆ ವಿವರ.

ಪಂಕಜ್ ಅವರು ನೇರವಾಗಿ ಬಣ್ಣದ ಲೋಕಕ್ಕೆ ಬರಲಿಲ್ಲ. ಅವರು ‘ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ’ದಲ್ಲಿ ನಟನೆ ಮಾಡಿದ್ದರು. ಅವರು ಇದರಲ್ಲಿ ನಟನಾ ತರಬೇತಿ ಪಡೆಯುವಾಗ ಕೆಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು. ಅದರಲ್ಲಿ ಕನ್ನಡದ ‘ಚಿಗುರಿದ ಕನಸು’ ಕೂಡ ಒಂದು ಎಂಬುದು ನಿಮಗೆ ಗೊತ್ತೇ. ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಗೆಳೆಯನ ಪಾತ್ರದಲ್ಲಿ ಪಂಕಜ್ ನಟಿಸಿದ್ದರು. ಆ ಬಗ್ಗೆ ಇಂದು ನಾವು ನಿಮಗೆ ಹೇಳುತ್ತಾ ಇದ್ದೇವೆ.

ಶಿವರಾಜ್​ಕುಮಾರ್ ‘ಚಿಗುರಿದ ಕನಸು’ ಚಿತ್ರದಲ್ಲಿ ಶಂಕರ್ ಹೆಸರಿನ ಪಾತ್ರದಲ್ಲಿ ನಟಿಸಿದ್ದರು. ಶಂಕರ್ ದೆಹಲಿಯಲ್ಲಿ ಬೆಳೆಯುತ್ತಾನೆ. ಹೀಗಾಗಿ, ಕಥೆಯ ಆರಂಭ ದೆಹಲಿಯಲ್ಲಿ ಆಗುತ್ತದೆ. ಕಾಲೇಜಿನ ಕಥೆ ಕೂಡ ದೆಹಲಿಯಲ್ಲಿ ಸಾಗುತ್ತದೆ. ಅಲ್ಲಿ ಹಿಂದಿಯವರನ್ನೇ ಜೂನಿಯರ್​ ಆರ್ಟಿಸ್ಟ್​​ಗಳನ್ನಾಗು ತೆಗೆದುಕೊಳ್ಳಲಾಗಿತ್ತು. ಶಂಕರ್ ಗೆಳೆಯನ ಪಾತ್ರದಲ್ಲಿ ಪಂಕಜ್ ತ್ರಿಪಾಠಿ ಕಾಣಿಸಿಕೊಂಡಿದ್ದರು. ಅವರ ಪಾತ್ರದ ಹೆಸರೂ ಪಂಕಜ್ ಎಂದೇ ಈ ಸಿನಿಮಾದಲ್ಲಿ ಇದೆ. ಶಿವಣ್ಣನ ಕಾಲೇಜು ದಿನಗಳನ್ನು ತೋರಿಸುವಾಗ ಪಂಕಜ್ ಜೊತೆಗೆ ಇದ್ದರು. ಈ ರೀತಿಯಲ್ಲಿ ಅವರ ಬಣ್ಣದ ಬದುಕು ಆರಂಭ ಆಯಿತು.

ಇದನ್ನೂ ಓದಿ
ಹಳ್ಳಿ ಪವರ್​​’ನಲ್ಲಿ ಮಿಂಚುತ್ತಿರುವ ‘ಭೀಮ’ ಕಲಾವಿದೆ ಆ್ಯಶ್
‘ಕರ್ಣ’ ಧಾರಾವಾಹಿಗೆ ಶಾಕ್ ಕೊಟ್ಟ ಟಿಆರ್​ಪಿ ರೇಟಿಂಗ್; ಕುಸಿಯಿತು ಸ್ಥಾನ
‘ಸು ಫ್ರಮ್ ಸೋ’ ಒಟಿಟಿ ರಿಲೀಸ್ ದಿನಾಂಕ ಫೇಕ್; ಹಾಟ್​ಸ್ಟಾರ್​ನವರು ಹೇಳೋದೇನು
ರಾಜ್ ಮುಟ್ಟಿದ್ದೆಲ್ಲ ಚಿನ್ನ; ಹಂಚಿಕೆ ಮಾಡಿದ ‘ಲೋಕಃ’ ಗಳಿಕೆ ಜೋರು

ಈಗ ಪಂಕಜ್ ತ್ರಿಪಾಠಿ ಅವರು ಬೇಡಿಕೆಯ ಹೀರೋ ಆಗಿದ್ದಾರೆ. ಆದರೆ, ಆಗ ಅವರು ಇನ್ನೂ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳುತ್ತಾ ಇದ್ದರು. ಹೀಗಾಗಿ, ಯಾರೂ ಅವರನ್ನು ಗಮನಿಸಿಯೇ ಇರಲಿಲ್ಲ.

ಇದನ್ನೂ ಓದಿ: ಟ್ರ್ಯಾಕ್ಟರ್ ಇದ್ದಿದ್ದರೆ ರೈತನಾಗುತ್ತಿದ್ದ ಪಂಕಜ್ ತ್ರಿಪಾಠಿ; ಆದರೆ ಅಲ್ಲಾಗಿದ್ದೇ ಬೇರೆ

‘ಚಿಗುರಿದ ಕನಸು’ ಚಿತ್ರವನ್ನು ಟಿಎಸ್​ ನಾಗಾಭರಣ ಅವರು ನಿರ್ದೇಶನ ಮಾಡಿದ್ದರು. ಶಿವರಾಜ್​ಕುಮಾರ್, ಅನಂತ್ ನಾಗ್, ಅವಿನಾಶ್ ಮೊದಲಾದವರು ಅಭಿನಯಿಸಿದ್ದರು. ‘ಶ್ರೀ ವಜ್ರೇಶ್ವರಿ ಕಂಬೈನ್ಸ್’ ಮೂಲಕ ಪಾರ್ವತಮ್ಮ ರಾಜ್​ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಸಿನಿಮಾ 2003ರ ಅಕ್ಟೋಬರ್ 2ರಂದು ರಿಲೀಸ್ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.