AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸು ಫ್ರಮ್ ಸೋ’ ಒಟಿಟಿ ರಿಲೀಸ್ ದಿನಾಂಕ ಫೇಕ್; ಹಾಟ್​ಸ್ಟಾರ್​ನವರು ಹೇಳೋದೇನು?

Su From So OTT Release Date: ‘ಸು ಫ್ರಮ್ ಸೋ’ ಸಿನಿಮಾ ಜುಲೈನಲ್ಲಿ ಬಿಡುಗಡೆಯಾಗಿ ದೊಡ್ಡ ಯಶಸ್ಸು ಕಂಡಿತ್ತು. ಸೆಪ್ಟೆಂಬರ್ 5 ರಂದು ಜಿಯೋ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ, ಜಿಯೋ ಹಾಟ್‌ಸ್ಟಾರ್ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಒಟಿಟಿ ಬಿಡುಗಡೆ ದಿನಾಂಕದ ಬಗ್ಗೆ ಅಧಿಕೃತ ಮಾಹಿತಿಗಾಗಿ ಕಾಯಬೇಕಿದೆ.

‘ಸು ಫ್ರಮ್ ಸೋ’ ಒಟಿಟಿ ರಿಲೀಸ್ ದಿನಾಂಕ ಫೇಕ್; ಹಾಟ್​ಸ್ಟಾರ್​ನವರು ಹೇಳೋದೇನು?
ಸು ಫ್ರಮ್ ಸೋ
ರಾಜೇಶ್ ದುಗ್ಗುಮನೆ
|

Updated on:Sep 05, 2025 | 8:08 AM

Share

‘ಸು ಫ್ರಮ್ ಸೋ’ ಸಿನಿಮಾ (Su From So) ಥಿಯೇಟರ್​ನಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಈ ಸಿನಿಮಾ 100 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. ಈಗ ಈ ಚಿತ್ರ ಸೆಪ್ಟೆಂಬರ್ 5ರಂದು ಒಟಿಟಿಗೆ ಬರಲಿದೆ ಎಂದು ವರದಿ ಆಗಿತ್ತು. ಆದರೆ, ಆ ರೀತಿ ಆಗಲೇ ಇಲ್ಲ. ಸಿನಿಮಾ ಸದ್ಯ (ಸೆಪ್ಟೆಂಬರ್ 5 ಬೆಳಿಗ್ಗೆ 7 ಗಂಟೆ) ಒಟಿಟಿಗೆ ಇನ್ನೂ ಕಾಲಿಟ್ಟಿಲ್ಲ. ಜಿಯೋ ಹಾಟ್​​ಸ್ಟಾರ್ ಕಡೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಹೀಗಾಗಿ, ಸಿನಿಮಾ ರಿಲೀಸ್ ಮತ್ತಷ್ಟು ವಿಳಂಬ ಆಗಿರಬಹುದು ಎಂದು ಅನೇಕರು ಊಹಿಸಿದ್ದಾರೆ.

‘ಸು ಫ್ರಮ್ ಸೋ’ ಸಿನಿಮಾ ಜುಲೈ 25ರಂದು ರಿಲೀಸ್ ಆಗಿತ್ತು. ಈ ಚಿತ್ರ ಸೂಪರ್ ಹಿಟ್ ಆಯಿತು. ಸಿನಿಮಾಗೆ ಬಾಯ್ಮಾತಿನ ಪ್ರಚಾರ ಸಾಕಾಯಿತು. ಈ ಚಿತ್ರವನ್ನು ಪ್ರೇಕ್ಷಕರು ದೊಡ್ಡ ಮಟ್ಟದಲ್ಲಿ ಗೆಲ್ಲಿಸಿದರು. ಈ ಕಾರಣದಿಂದಲೇ ಒಟಿಟಿ ಹಾಗೂ ಟಿವಿ ಪ್ರಸಾರ ಹಕ್ಕು ದೊಡ್ಡ ಮಟ್ಟಕ್ಕೆ ಮಾರಾಟ ಆಗಿದೆ. ಇಂದು ಸಿನಿಮಾ ಒಟಿಟಿಗೆ ಬರಲಿದೆ ಎನ್ನಲಾಗಿತ್ತು. ಆದರೆ, ಅದು ಸುಳ್ಳಾಗಿದೆ.

ಇದನ್ನೂ ಓದಿ
Image
ಶಂಕರ್​ ನಾಗ್​​ಗೆ ಅಣ್ಣ ಮಾತ್ರ ಅಲ್ಲ, ಸಾಕು ತಂದೆಯೂ ಆಗಿದ್ದ ಅನಂತ್ ನಾಗ್
Image
‘ಕಾಂತಾರ: ಚಾಪ್ಟರ್​ 1’ ಎದುರು ರಿಲೀಸ್ ಆಗಲಿದೆ ದೊಡ್ಡ ಹೀರೋ ಸಿನಿಮಾ
Image
ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಫೈನಲ್ ಆದ ಮೂವರು ಸ್ಪರ್ಧಿಗಳು ಇವರೇ ನೋಡಿ
Image
ರಾಜ್ ಮುಟ್ಟಿದ್ದೆಲ್ಲ ಚಿನ್ನ; ಹಂಚಿಕೆ ಮಾಡಿದ ‘ಲೋಕಃ’ ಗಳಿಕೆ ಜೋರು

ಯಾವುದೇ ಸಿನಿಮಾ ಒಟಿಟಿಗೆ ರಿಲೀಸ್ ಆಗುತ್ತದೆ ಎಂದಾದರೆ ಆ ಬಗ್ಗೆ ಒಟಿಟಿ ಪ್ಲಾಟ್​ಫಾರ್ಮ್​ ಮೊದಲೇ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಮಾಹಿತಿ ನೀಡಲಾಗುತ್ತದೆ. ‘ಸು ಫ್ರಮ್ ಸೋ’ ಸಿನಿಮಾ ವಿಚಾರದಲ್ಲಿ ಜಿಯೋ ಹಾಟ್​ಸ್ಟಾರ್ ಆ ಬಗ್ಗೆ ಯಾವುದೇ ಅಪ್​​ಡೇಟ್ ನೀಡಿಲ್ಲ. ಇನ್ನು ಜೀಯೋ ಹಾಟ್​ಸ್ಟಾರ್ ಪೋಸ್ಟ್ ಒಂದು ಅನುಮಾನ ಹುಟ್ಟಿಸುವಂತಿದೆ.

ಸೆಪ್ಟೆಂಬರ್ ರಿಲೀಸ್ ಮಾಹಿತಿ

ಸೆಪ್ಟೆಂಬರ್​ನಲ್ಲಿ ಯಾವೆಲ್ಲ ಸಿನಿಮಾ, ಸೀರಿಸ್ ಹಾಗೂ ಶೋಗಳು ಬಿಡುಗಡೆ ಆಗುತ್ತಿವೆ ಎಂಬ ಬಗ್ಗೆ ಹಾಟ್​ಸ್ಟಾರ್ ಮಾಹಿತಿ ನೀಡಿದೆ. ಆದರೆ, ಇದರಲ್ಲಿ ‘ಸು ಫ್ರಮ್ ಸೋ’ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹೀಗಾಗಿ, ಇದು ಕೂಡ ಅನುಮಾನ ಮೂಡಿಸಿದೆ.

ಇದನ್ನೂ ಓದಿ: ‘ಸು ಫ್ರಮ್ ಸೋ’ ನಿರ್ದೇಶಕರ ಜೊತೆ ಸುದೀಪ್ ಸಿನಿಮಾ ಮಾತುಕತೆ ನಡೆದಿದೆಯಾ?

ಇನ್ನೂ ಕೆಲವು ವರದಿಗಳು ಸೆಪ್ಟೆಂಬರ್ 8ರಂದು ‘ಸು ಫ್ರಮ್ ಸೋ’ ಒಟಿಟಿಗೆ ಬರಲಿದೆ ಎಂದು ಹೇಳುತ್ತಿವೆ. ಆದರೆ, ಜಿಯೋ ಹಾಟ್​ಸ್ಟಾರ್ ಕಡೆಯಿಂದ ಈ ಬಗ್ಗೆ ಅಧಿಕೃತ ಘೋಷಣೆ ಆದ ಬಳಿಕವೇ ಈ ವಿಚಾರ ತಿಳಿಯಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:57 am, Fri, 5 September 25