‘ಕಾಂತಾರ: ಚಾಪ್ಟರ್ 1’ ಎದುರು ಸಿನಿಮಾ ರಿಲೀಸ್ ಮಾಡೋ ದೊಡ್ಡ ನಿರ್ಧಾರ ತೆಗೆದುಕೊಂಡ ಸ್ಟಾರ್ ಹೀರೋ
ಧನುಷ್ ಅವರ ‘ಇಡ್ಲಿ ಕಡಾಯಿ’ ಚಿತ್ರವು ಅಕ್ಟೋಬರ್ 1 ರಂದು ಬಿಡುಗಡೆಯಾಗುತ್ತಿದೆ. ಅದೇ ಸಮಯದಲ್ಲಿ ‘ಕಾಂತಾರ: ಚಾಪ್ಟರ್ 1’ ಚಿತ್ರದ ಬಿಡುಗಡೆಯೂ ಇದೆ. ಈ ಎರಡು ಚಿತ್ರಗಳ ನಡುವೆ ಬಾಕ್ಸ್ ಆಫೀಸ್ ಸ್ಪರ್ಧೆ ಏರ್ಪಡೋ ಸಾಧ್ಯತೆ ಇದೆ. ಧನುಷ್ ಅವರು ನಿರ್ದೇಶಿಸಿರುವ ಈ ಚಿತ್ರದಲ್ಲಿ ದುಶಾರಾ ವಿಜಯನ್ ನಾಯಕಿಯಾಗಿ ನಟಿಸಿದ್ದಾರೆ.

ಯಾವುದಾದರೂ ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ ಆ ಸಂದರ್ಭದಲ್ಲಿ ಬೇರೆ ಸಿನಿಮಾಗಳನ್ನು ರಿಲೀಸ್ ಮಾಡಲು ಅಷ್ಟಾಗಿ ಆದ್ಯತೆ ನೀಡೋದಿಲ್ಲ. ಹಾಗೆ ಮಾಡಿದರೆ ಬಿಸ್ನೆಸ್ಗೆ ದೊಡ್ಡ ಹೊಡೆತ ಉಂಟಾಗುತ್ತದೆ. ಆದಾಗ್ಯೂ ಕೆಲವೊಮ್ಮೆ ಇಂಥ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಈಗ ತಮಿಳು ನಟ ಧನುಶ್ ಅವರು ‘ಕಾಂತಾರ: ಚಾಪ್ಟರ್ 1’ (Kantara: Chapter 1) ಎದುರು ತಮ್ಮ ‘ಇಡ್ಲಿ ಕಡಾಯಿ’ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಅವರದ್ದೇ ನಿರ್ದೇಶನವೂ ಇದೆ.
ಧನುಶ್ ಅವರು ಹಲವು ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಕಳೆದ ವರ್ಷ ಅವರ ನಿರ್ದೇಶನದ ಮೊದಲ ಚಿತ್ರ ‘ರಾಯನ್’ ತೆರೆಗೆ ಬಂದಿತ್ತು. ಈ ಸಿನಿಮಾ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆಯಿತು. ಈ ಬೆನ್ನಲ್ಲೇ ಅವರು ‘ಇಡ್ಲಿ ಕಡಾಯಿ’ ಹೆಸರಿನ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಅವರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಧನುಶ್ ಅವರು ಅಕ್ಟೋಬರ್ 1ಕ್ಕೆ ‘ಇಡ್ಲಿ ಕಡಾಯಿ’ ಸಿನಿಮಾ ರಿಲೀಸ್ ಮಾಡುವ ಘೋಷಣೆ ಮಾಡಿದ್ದಾರೆ. ಈ ಚಿತ್ರಕ್ಕೆ ದುಶಾರಾ ವಿಜಯನ್ ನಾಯಕಿ. ಇದಕ್ಕೆ ಧನುಶ್ ಅವರದ್ದೇ ನಿರ್ದೇಶನ ಇರುವುದರಿಂದ ನಿರೀಕ್ಷೆ ಸೃಷ್ಟಿಸಿದೆ. ಈ ಮಧ್ಯೆ ‘ಕಾಂತಾರ: ಚಾಪ್ಟರ್ 1’ ಸ್ಪರ್ಧೆಯನ್ನು ಈ ಚಿತ್ರ ಸಹಿಸಿಕೊಳ್ಳಲು ಸಾಧ್ಯವಾದೀತೇ ಎಂಬ ಪ್ರಶ್ನೆ ಮೂಡಿದೆ.
‘ಕಾಂತಾರ’ ಕೇವಲ ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಗಮನ ಸೆಳೆದಿತ್ತು. ಈಗ ಅದರ ಪ್ರೀಕ್ವೆಲ್ ಆಗಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಡಿ ಬರುತ್ತಿದ್ದು, ಅಕ್ಟೋಬರ್ 2ಕ್ಕೆ ರಿಲೀಸ್. ಈ ಸಿನಿಮಾದ ಬಗ್ಗೆ ತಮಿಳು ಮಂದಿಗೂ ನಿರೀಕ್ಷೆ ಇದೆ. ಈ ಚಿತ್ರ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. ಈ ಅಬ್ಬರದ ಮಧ್ಯೆ ‘ಇಡ್ಲಿ ಕಡಾಯಿ’ ಸಿನಿಮಾ ಕಳೆದು ಹೋದರೂ ಅಚ್ಚರಿ ಏನಿಲ್ಲ.
ಇದನ್ನೂ ಓದಿ: ತೆಲುಗು ರಾಜ್ಯಗಳಲ್ಲಿ ‘ಕಾಂತಾರ ಚಾಪ್ಟರ್ 1’ಗೆ ಭಾರಿ ಬೇಡಿಕೆ, ಸೇಲ್ ಆಗಿದ್ದೆಷ್ಟಕ್ಕೆ?
‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ರಿಷಬ್ ಶೆಟ್ಟಿ ನಿರ್ದೇಶನ ಇದೆ. ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ರುಕ್ಮಿಣಿ ವಸಂತ್ ಈ ಚಿತ್ರಕ್ಕೆ ನಾಯಕಿ. ಹಲವು ಪರಭಾಷಾ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ಅದ್ದೂರಿ ಬಜೆಟ್ನಲ್ಲಿ ನಿರ್ಮಾಣ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:33 am, Thu, 4 September 25








