- Kannada News Photo gallery Bigg Boss Kannada Season 12 Contestant List Shwetha Prasad Sagar Bili Gowda and Ananya amar Name Finalized
ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಫೈನಲ್ ಆದ ಮೂವರು ಸ್ಪರ್ಧಿಗಳು ಇವರೇ ನೋಡಿ
‘ಬಿಗ್ ಬಾಸ್ ಕನ್ನಡ ಸೀಸನ್ 12ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇದೇ ತಿಂಗಳು 28ರಿಂದ ಶೋ ಆರಂಭ ಆಗಲಿದೆ ಎಂದು ತಂಡದವರು ಘೋಷಣೆ ಮಾಡಿದ್ದಾರೆ. ಈ ಬಾರಿ ಸ್ಪರ್ಧಿಗಳು ಯಾವ ರೀತಿಯಲ್ಲಿ ಇರುತ್ತಾರೆ ಎನ್ನುವ ಕುತೂಹಲ ಮೂಡಿದೆ. ಹೀಗಿರುವಾಗಲೇ ಒಂದು ಪಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ.
Updated on:Sep 04, 2025 | 7:40 AM

ಶ್ವೇತಾ ಪ್ರಸಾದ್ ಅವರು ಈ ಬಾರಿ ಬಿಗ್ ಬಾಸ್ನಲ್ಲಿ ಇರುತ್ತಾರೆ ಎಂದು ಹೇಳಲಾಗುತ್ತಿದೆ. ಧಾರಾವಾಹಿಗಳ ಮೂಲಕ ಶ್ವೇತಾ ಗಮನ ಸೆಳೆದವರು. ಆ ಬಳಿಕ ಅವರು ಆರ್ಜೆ ಪ್ರದೀಪ್ ಜೊತೆ ವಿವಾಹ ಮಾಡಿಕೊಂಡಿದ್ದಾರೆ.

ಸದ್ಯ ಸಾಮಾಜಿಕ ಕೆಲಸ ಹಾಗೂ ಸಿನಿಮಾ ನಿರ್ಮಾಣದ ಕಡೆ ಗಮನ ಹರಿಸುತ್ತಿದ್ದಾರೆ. ಅವರ ನಿರ್ಮಾಣದ ‘ಮರ್ಯಾದೆ ಪ್ರಶ್ನೆ’ ಸಿನಿಮಾ ಎಲ್ಲರ ಗಮನ ಸೆಳೆಯಿತು. ಅವರು ಈಗ ತಮ್ಮ ಕೆಲಸಗಳಿಗೆ ಬ್ರೇಕ್ ಕೊಟ್ಟು ದೊಡ್ಮನೆಗೆ ಬರುತ್ತಾರೆ ಎನ್ನಲಾಗಿದೆ.

ಅಂಕಿತಾ ಅಮರ್ ಅವರು ಈಗ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅವರ ಸಹೋದರಿ ಅನನ್ಯಾ ಅಮರ್ಗೂ ಬಣ್ಣದ ಲೋಕದ ಜೊತೆ ನಂಟು ಬೆಳೆದಿದೆ. ಅವರು ಕೂಡ ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಸ್ಪರ್ಧಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅಂಕಿತಾ ಅಮರ್ ಅವರು ಇತ್ತೀಚೆಗೆ ಜೀ ಕನ್ನಡದಲ್ಲಿ ಪ್ರಸಾರ ಕಂಡ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ನಲ್ಲಿ ಸ್ಪರ್ಧಿಸಿದ್ದರು. ಅವರು ಬಿಗ್ ಬಾಸ್ಗೆ ಬಂದು ಮನರಂಜನೆ ನೀಡಲು ರೆಡಿ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

ಗೌತಮಿ ಜಾಧವ್ ಅವರು ‘ಸತ್ಯ’ ಸೀರಿಯಲ್ ಮಾಡಿದ್ದರು. ಅವರು ಕಳೆದ ಬಾರಿ ಬಿಗ್ ಬಾಸ್ಗೆ ಬಂದು ಗಮನ ಸೆಳೆದಿದ್ದರು. ಇದೇ ಧಾರಾವಾಹಿಯಲ್ಲಿ ಸಾಗರ್ ಬಿಳಿಗೌಡ ಅವರು ಹೀರೋ ಆಗಿ ಕಾಣಿಸಿಕೊಂಡಿದ್ದರು.

ಅವರು ಕೂಡ ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 12ರ ಭಾಗ ಆಗಲಿದ್ದಾರೆ ಎಂದು ವರದಿ ಆಗಿದೆ. ಆದರೆ, ಇನ್ನೂ ಈ ವಿಚಾರ ಅಧಿಕೃತ ಆಗಿಲ್ಲ. ಇದು ಸದ್ಯ ಫೈನಲ್ ಆದವರ ಪಟ್ಟಿ ಎಂದು ಹೇಳಲಾಗುತ್ತಾ ಇದೆ.
Published On - 7:03 am, Thu, 4 September 25




