ಗಾಯಕ ಬಪ್ಪಿ ಲಹಿರಿ ದೇಹದ ಮೇಲಿದ್ದ ಚಿನ್ನಗಳೆಲ್ಲ ಈಗ ಏನಾದವು ಗೊತ್ತಾ?
ಪ್ರಸಿದ್ಧ ಗಾಯಕ ಬಪ್ಪಿ ಲಹಿರಿ ಅವು ಸಾಕಷ್ಟು ಚಿನ್ನ ಧರಿಸುತ್ತಿದ್ದರು. ಅವರ ನಿಧನಾನಂತರ ಅವರ ಅಪಾರ ಚಿನ್ನದ ಸಂಗ್ರಹದ ಬಗ್ಗೆ ಕುತೂಹಲ ಮೂಡಿತ್ತು. ಅವರ ಮಗ ಬಪ್ಪ ಲಹಿರಿ ತಮ್ಮ ತಂದೆಯ ಚಿನ್ನದ ಸಂಗ್ರಹ ಏನಾಯಿತು ಎನ್ನುವ ಬಗ್ಗೆ ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಗಾಯಕ ಬಪ್ಪಿ ಲಹಿರಿ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅವರಿಗೆ ಹಾಡಿನ ಬಗ್ಗೆ ಎಷ್ಟು ಪ್ರೀತಿ ಇತ್ತೋ ಅಷ್ಟೇ ಪ್ರೀತಿ ಚಿನ್ನದ ಮೇಲೂ ಇತ್ತು ಎನ್ನಬಹುದು. ಅವರನ್ನು ‘ಗೋಲ್ಡ್ ಮ್ಯಾನ್ ಆಫ್ ಇಂಡಿಯಾ’ ಎಂದು ಕೂಡ ಕರೆಯಲಾಗುತ್ತಿತ್ತು. ಬಪ್ಪಿ (Bappi Lahiri) ಅವರು 2022ರಲ್ಲಿ ನಿಧನ ಹೊಂದಿದರು. ಅವರ ದುಬಾರಿ ಗೋಲ್ಡ್ ಕಲೆಕ್ಷನ್ ಈಗ ಏನಾಯಿತು? ಅವುಗಳು ಎಲ್ಲಿವೆ ಎಂಬ ಬಗ್ಗೆ ಇಲ್ಲಿದೆ ವಿವರ.
ಬಪ್ಪಿ ಲಹಿರಿ ಅವರು ಸಿಂಗರ್ ಆಗಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದರು. ಅವರನ್ನು ನೋಡಿದರೆ ಗೋಲ್ಡ್ ಶೋ ರೂಂ ಕಂಡಂತೆ ಆಗುತ್ತಿತ್ತು. ಬಪ್ಪಿ ಅವರು 2022ರ ಫೆಬ್ರವರಿ 15ರಂದು ನಿಧನ ಹೊಂದಿದರು. ಅವರು ಸಾವು ಅನೇಕರಿಗೆ ಬೇಸರ ಮೂಡಿಸಿತ್ತು. ಅವರ ಚಿನ್ನದ ಬಗ್ಗೆ ಮಗ ಬಪ್ಪ ಲಹರಿ ಮಾಹಿತಿ ನೀಡಿದ್ದರು. ಈ ಚಿನ್ನ ಬಪ್ಪ ಹಾಗೂ ಮಗಳು ರೆಮಾಗೆ ಸೇರಬೇಕು ಎಂದು ಬಪ್ಪಿ ವಿಲ್ ಬರೆದಿದ್ದರಂತೆ.
‘ತಂದೆ ಧರಿಸುತ್ತಿದ್ದ ಚಿನ್ನ ಕೇವಲ ಫ್ಯಾಷನ್ಗಾಗಿ ಮಾತ್ರ ಆಗಿರಲಿಲ್ಲ, ಅದು ಅವರಿಗೆ ಅದೃಷ್ಟ ತಂದಿತ್ತು. ಅವರು ವಿಶ್ವದ ನಾನಾ ಕಡೆಗಳಿಂದ ಚಿನ್ನ ಸಂಗ್ರಹ ಮಾಡಿದದರು. ಅವರಿಗೆ ಏನಾದರೂ ಕಂಡರೆ ಅದನ್ನು ಚಿನ್ನವಾಗಿ ಮಾರ್ಪಡಿಸಿ ನಂತರ ಅದನ್ನು ಹಾಕಿಕೊಳ್ಳುತ್ತಿದ್ದರು’ ಎಂದು ಹೇಳಿದ್ದಾರೆ.
‘ಚಿನ್ನ ಇಲ್ಲದೆ ತಂದೆ ಎಲ್ಲಿಗೂ ಹೋಗುತ್ತಿರಲಿಲ್ಲ. ಬೆಳಿಗ್ಗೆ 5 ಗಂಟೆ ವಿಮಾನ ಇದ್ದರೂ ಎಲ್ಲ ಚಿನ್ನ ಧರಿಸಿಯೇ ಹೋಗುತ್ತಿದ್ದರು. ಅದು ಅವರಿಗೆ ದೇವಸ್ಥಾನದ ರೀತಿ. ಆಧ್ಯಾತ್ಮಿಕವಾಗಿ ಅವರು ಕನೆಕ್ಟ್ ಆಗಿದ್ದರು. ನಾವು ಅದನ್ನು ಕಾಪಾಡಿಕೊಳ್ಳಲಿದ್ದೇವೆ. ಇದನ್ನು ಮ್ಯೂಸಿಯಂನಲ್ಲಿ ಇಡುವ ಆಲೋಚನೆಯೂ ಇದೆ. ಆಗ ಜನರು ಇದನ್ನು ನೋಡಬಹುದು’ ಎಂದು ಹೇಳಿದ್ದರು ಅವರ ಮಗ.
ಇದನ್ನೂ ಓದಿ: ‘ಲತಾಜೀ ಇಲ್ಲದೇ ನಾನಿಲ್ಲ’ ಎಂದು ಹೇಳಿದ್ದ ಬಪ್ಪಿ ಲಹಿರಿ; 10 ದಿನದ ಅಂತರದಲ್ಲಿ ಇಬ್ಬರೂ ವಿಧಿವಶ
ಬಪ್ಪಿ ಲಹಿರಿ ಕೇವಲ 19 ನೇ ವಯಸ್ಸಿನಲ್ಲಿ ಸಂಗೀತ ಜಗತ್ತಿಗೆ ಪ್ರವೇಶಿಸಿದರು. ಬಾಲಿವುಡ್‌ನ ‘ಡಿಸ್ಕೋ ಬಾಯ್’ ಎಂದೇ ಬಪ್ಪಿ ಲಹಿರಿ ಕರೆಯಲಾಗುತ್ತಿತ್ತು. ತಮ್ಮ ನಗುತ್ತಿರುವ ಮುಖದ ಮೂಲಕ ಎಲ್ಲರ ಗಮನ ಸೆಳೆದರು. 2022 ರಲ್ಲಿ ಅವರ ಹಠಾತ್ ನಿಧನದೊಂದಿಗೆ, ಸಂಗೀತ ಲೋಕವು ಒಬ್ಬ ಸ್ಟಾರ್ ಸಿಂಗರ್ನ ಕಳೆದುಕೊಂಡಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:07 am, Thu, 4 September 25







