RIP Bappi Lahiri: ಕೇಳುಗರಿಗೆ ಮೋಡಿ ಮಾಡಿದ್ದ ಬಪ್ಪಿ ಲಹಿರಿ ಹಾಡುಗಳು; ಇಲ್ಲಿವೆ ಅತ್ಯುತ್ತಮ ಗೀತೆಗಳ ಪಟ್ಟಿ

Bappi Lahiri Evergreen Songs: ಬಪ್ಪಿ ಲಹಿರಿ ತಮ್ಮ ದೀರ್ಘ ವೃತ್ತಿ ಜೀವನದಲ್ಲಿ ಹಲವು ಹಿಟ್ ಗೀತೆಗಳಿಗೆ ದನಿಯಾದವರು. 1970ರ ದಶಕದಿಂದ ತೀರಾ ಇತ್ತೀಚಿನವರೆಗೂ ಅವರ ಗೀತೆಗಳು ಅಪಾರ ಜನಮನ್ನಣೆ ಗಳಿಸಿವೆ. ಅವರ ಅದ್ಭುತ ಗೀತೆಗಳ ಪಟ್ಟಿ ಇಲ್ಲಿದೆ.

RIP Bappi Lahiri: ಕೇಳುಗರಿಗೆ ಮೋಡಿ ಮಾಡಿದ್ದ ಬಪ್ಪಿ ಲಹಿರಿ ಹಾಡುಗಳು; ಇಲ್ಲಿವೆ ಅತ್ಯುತ್ತಮ ಗೀತೆಗಳ ಪಟ್ಟಿ
ಬಪ್ಪಿ ಲಹಿರಿ
Follow us
TV9 Web
| Updated By: shivaprasad.hs

Updated on: Feb 16, 2022 | 2:33 PM

ಬಪ್ಪಿ ಲಹಿರಿ (Bappi Lahiri) ಭಾರತೀಯ ಚಿತ್ರರಂಗದಲ್ಲಿ ಬಹುದೊಡ್ಡ ಹೆಸರು. ಭಾರತಕ್ಕೆ ಡಿಸ್ಕೋ ಪರಂಪರೆಯನ್ನು ಪರಿಚಯಿಸಿ, ಪ್ರಸಿದ್ಧಗೊಳಿಸಿದ ಗಾಯಕರಲ್ಲಿ ಅವರೂ ಒಬ್ಬರು. ‘ಚಲ್ತೆ ಚಲ್ತೆ’ ಇರಬಹುದು, ‘ಡಿಸ್ಕೋ ಡಾನ್ಸರ್’ ಇರಬಹುದು ಅಥವಾ ‘ಶರಾಬಿ’ ಹಾಡೇ ಇರಬಹುದು. ಎಲ್ಲವೂ ಕೇಳುಗರ ಮನಗೆದ್ದವುಗಳೇ. ವಿಶೇಷವೆಂದರೆ ಬಪ್ಪಿ ಹುಟ್ಟುಹಾಕಿದ ಡಿಸ್ಕೋ ಪರಂಪರೆಗೆ ಇಂದಿಗೂ ಅಪಾರ ಬೇಡಿಕೆ ಇದೆ. ಅವರ ಅಂದಿನ ಹಾಡುಗಳಲ್ಲಿ ಹಲವು ಇತ್ತೀಚೆಗೆ ರಿಮೇಕ್ ಆಗಿವೆ. ಹೊಸ ರೂಪದೊಂದಿಗೆ ಬಂದಿರುವ ಹಾಡುಗಳನ್ನು ಜನರು ಈಗಲೂ ಇಷ್ಟಪಟ್ಟಿದ್ದಾರೆ. ತಮ್ಮ ವೈವಿಧ್ಯಮಯ ಸಂಗೀತದಿಂದ ಬಪ್ಪಿ ಲಹಿರಿ ಹಿಂದಿ ಹಾಗೂ ಬೆಂಗಾಳಿ ಚಿತ್ರರಂಗದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡರು. ಆದರೆ ವೃತ್ತಿ ಜೀವನದ ಉನ್ನತ ಕಾಲಘಟ್ಟದಲ್ಲಿ ಅವರು ಹಲವು ಭಾಷೆಗಳಲ್ಲಿ ಕೆಲಸ ಮಾಡಿದ್ದಾರೆ. ತೆಲುಗು ಹಾಗೂ ಕನ್ನಡದಲ್ಲೂ ಅವರ ಗೀತೆಗಳು ಬಹುಜನಪ್ರಿಯ. ಮಂಗಳವಾರ (ಫೆಬ್ರವರಿ 15) ತಡರಾತ್ರಿ ಅವರು ನಿಧನರಾಗಿದ್ದಾರೆ. ಬಪ್ಪಿ ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ. ಬಪ್ಪಿ ಲಹಿರಿ ಅವರ ಸೂಪರ್​ಹಿಟ್ ಗೀತೆಗಳನ್ನು ಇಂದು ನೆನಪಿಸಿಕೊಳ್ಳಲಾಗುತ್ತಿದೆ. ಸದಾ ಗುನುಗಬಹುದಾದ, ಜನರು ಮೆಚ್ಚಿದ ಬಪ್ಪಿ ಅವರ ಕೆಲವು ಸೂಪರ್ ಹಿಟ್ ಗೀತೆಗಳ ಪಟ್ಟಿ ಇಲ್ಲಿದೆ.

1. ಕೋಯಿ ಯಹಾನ್ ಆಹಾ ನಾಚೆ ನಾಚೆ: 1979ರಲ್ಲಿ ತೆರೆಕಂಡ ಈ ಹಾಡಿಗೆ ಬಪ್ಪಿ ಲಹಿರಿ ಸಂಗೀತ ನೀಡಿ ಹಾಡಿದ್ದಾರೆ. ಅವರಿಗೆ ಮತ್ತೋರ್ವ ಖ್ಯಾತ ಗಾಯಕಿ ಉಷಾ ಉತ್ತುಪ್ ಸಾಥ್ ನೀಡಿದ್ದಾರೆ.

2. ತಮ್ಮಾ ತಮ್ಮಾ: 1989ರಲ್ಲಿ ತೆರೆಕಂಡ ತಾನೆದಾರ್ ಚಿತ್ರದ ಹಾಡಿದು. ಬಪ್ಪಿ ಲಹಿರಿ ಹಾಗೂ ಅನುರಾಧಾ ಪೌಧ್ವಾಲ್ ಹಾಡಿರುವ ಈ ಗೀತೆಯಲ್ಲಿ ಮಾಧುರಿ ಧೀಕ್ಷಿತ್ ಹಾಗೂ ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಹಾಡನ್ನು ರಿಮೇಕ್ ಮಾಡಲಾಗಿತ್ತು. ಅದರಲ್ಲಿ ಆಲಿಯಾ ಭಟ್ ಹಾಗೂ ವರುಣ್ ಧವನ್ ಕಾಣಿಸಿಕೊಂಡಿದ್ದರು.

3. ಐ ಯಾಮ್ ಎ ಡಿಸ್ಕೋ ಡಾನ್ಸರ್: 1997ರಲ್ಲಿ ತೆರೆ ಕಂಡ ‘ಡಿಸ್ಕೋ ಡಾನ್ಸರ್’ ಚಿತ್ರದ ಈ ಗೀತೆ ಹಲವರ ಫೇವರಿಟ್ ಗೀತೆಗಳಲ್ಲಿ ಒಂದು. ಮಿಥುನ್ ಚಕ್ರವರ್ತಿ ಕಾಣಿಸಿಕೊಂಡಿದ್ದ ಈ ಗೀತೆ ದೊಡ್ಡ ಹಿಟ್ ಆಗಿತ್ತು. ಇತ್ತೀಚೆಗೆ ಇದನ್ನು ರಿಮೇಕ್ ಕೂಡ ಮಾಡಲಾಗಿತ್ತು. ಅದರಲ್ಲಿ ಟೈಗರ್ ಶ್ರಾಫ್ ಹೆಜ್ಜೆಹಾಕಿದ್ದರು.

4. ಜಿಮ್ಮಿ ಜಿಮ್ಮಿ ಜಿಮ್ಮಿ ಆಜಾ: ಬಿ ಸುಭಾಷ್ ನಿರ್ಮಿಸಿದ್ದ ಈ ಗೀತೆ 1982ರಲ್ಲಿ ತೆರೆಕಂಡಿತ್ತು. ಆಗ ದೊಡ್ಡ ಹಿಟ್ ಆಗಿತ್ತು.

5. ಊಹ್ ಲಾ ಲಾ: 2011ರಲ್ಲಿ ತೆರೆಕಂಡಿದ್ದ ‘ಡರ್ಟಿ ಪಿಚ್ಚರ್’ ಚಿತ್ರದ ಈ ಗೀತೆ ದೊಡ್ಡ ಸೆನ್ಸೇಶನ್ ಸೃಷ್ಟಿಸಿತ್ತು. ಈ ಹಾಡಿಗೆ ಅಪಾರ ಪ್ರಶಸ್ತಿಗಳೂ ಲಭಿಸಿತ್ತು. ಶ್ರೇಯಾ ಘೋಷಾಲ್ ಹಾಗೂ ಬಪ್ಪಿ ಲಹಿರಿ ಹಾಡಿದ್ದ ಈ ಗೀತೆಯನ್ನು ಈಗಿನ ತಲೆಮಾರು ಗುನುಗುತ್ತಿರುತ್ತಾರೆ. ಆ ಹಾಡು ಇಲ್ಲಿದೆ.

6. ತೂನೆ ಮಾರಿ ಎಂಟ್ರಿಯಾನ್: ಪ್ರಿಯಾಂಕಾ ಚೋಪ್ರಾ, ರಣವೀರ್ ಸಿಂಗ್, ಅರ್ಜುನ್ ಕಪೂರ್ ನಟಿಸಿದ್ದ ‘ಗುಂಡೈ’ ಚಿತ್ರದ ಹಾಡಿದು. ಬಪ್ಪಿ ಲಹಿರಿ, ನೀತಿ ಮೋಹನ್ ಮೊದಲಾದವರು ಹಾಡಿದ್ದಾರೆ.

ಇದನ್ನೂ ಓದಿ:

Bappi Lahiri: ಸ್ಯಾಂಡಲ್​ವುಡ್​ನಲ್ಲೂ ಗುರುತಿಸಿಕೊಂಡಿದ್ದ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹಿರಿ ಇನ್ನಿಲ್ಲ

‘ಲತಾಜೀ ಇಲ್ಲದೇ ನಾನಿಲ್ಲ’ ಎಂದು ಹೇಳಿದ್ದ ಬಪ್ಪಿ ಲಹಿರಿ; 10 ದಿನದ ಅಂತರದಲ್ಲಿ ಇಬ್ಬರೂ ವಿಧಿವಶ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್