ಶಂಕರ್ ನಾಗ್ಗೆ ಅಣ್ಣ ಮಾತ್ರ ಅಲ್ಲ, ಸಾಕು ತಂದೆಯೂ ಆಗಿದ್ದ ಅನಂತ್ ನಾಗ್
Anant Nag Birthday: ಅನಂತ ನಾಗ್ ಅವರಿಗೆ ಇಂದು ಬರ್ತ್ಡೇ. ತಮ್ಮ ಶಂಕರ್ ನಾಗ್ ಅವರ ಬಗ್ಗೆ ತಮ್ಮ ಪ್ರೀತಿ ಮತ್ತು ಬಾಂಧವ್ಯವನ್ನು ಅವರು ಈ ಮೊದಲು ಹಂಚಿಕೊಂಡಿದ್ದರು.ಅದನ್ನು ಬರ್ತ್ಡೇ ದಿನ ನೆನಪಿಸಿಕೊಳ್ಳೋಣ. ಶಂಕರ್ ನಾಗ್ ಅವರು ಅನಂತ್ ನಾಗ್ನ ಸಾಕು ತಂದೆಯಂತೆ ಕಾಣುತ್ತಿದ್ದರು.

ಅನಂತ್ ನಾಗ್ (Anant Nag) ಅವರಿಗೆ ಇಂದು (ಸೆಪ್ಟೆಂಬರ್ 4) ಜನ್ಮದಿನ. ಅವರಿಗೆ ಈಗ 77 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಅವರು ನಟನೆ ಕಡಿಮೆ ಮಾಡಿದ್ದಾರೆ. ಅನಂತ್ ನಾಗ್ ಜೊತೆ ಶಂಕರ್ ನಾಗ್ ಅವರು ಸಾಕಷ್ಟು ಆಪ್ತತೆ ಹೊಂದಿದ್ದರು. ಚಿತ್ರರಂಗದಲ್ಲಿ ಅಣ್ಣ-ತಮ್ಮ ಜೋಡಿ ಸಾಕಷ್ಟು ಹೆಸರು ಮಾಡಿತ್ತು. ಆದರೆ, ಸಣ್ಣ ವಯಸ್ಸಿನಲ್ಲೇ ಶಂಕರ್ ನಾಗ್ ನಿಧನ ಹೊಂದಿದ್ದರು. ತಮ್ಮನ ಜೊತೆಗಿನ ಬಾಂಧವ್ಯದ ಬಗ್ಗೆ ಅನಂತ್ ನಾಗ್ ಅವರು ಈ ಮೊದಲು ಮಾತನಾಡಿದ್ದರು.
ಶಂಕರ್ ನಾಗ್ ಬಗ್ಗೆ ಅನಂತ್ ನಾಗ್ ಹಲವು ಕಡೆಗಳಲ್ಲಿ ಮಾತನಾಡಿದ್ದಾರೆ. ಅವರು ‘ವೀಕೆಂಡ್ ವಿತ್ ರಮೇಶ್ ಎಪಿಸೋಡ್ಗೆ ಬಂದಾಗಲೂ ಶಂಕರ್ ನಾಗ್ ಅವರನ್ನು ನೆನಪಿಸಿಕೊಂಡಿದ್ದರು. ಇಬ್ಬರೂ ಒಟ್ಟಾಗಿ ಇದ್ದ ದಿನಗಳನ್ನು ಮೆಲುಕು ಹಾಕಿ ಭಾವುಕರಾದರು.
‘ಶಂಕರ್ ನಾಗ್ ನನ್ನ ಜೊತೆಯಲ್ಲೇ ಬೆಳೆದ. ನಾನು ಅವನಿಗೆ ಸಾಕು ತಂದೆ ಆದೆ. ನನ್ನ ಮೇಲೆ ಅವನಿಗೆ ಪ್ರೀತಿ ಗೌರವ ಅಪಾರ. ಇಬ್ಬರೂ ಸಿನಿಮಾಗೆ ಬಂದೆವು 12 ವರ್ಷಗಳಲ್ಲಿ ಸಾಕಷ್ಟು ಸಿನಿಮಾ ಮಾಡಿದ. ಅವನಿಗೆ ನಿರ್ದೇಶನದ ಹುಚ್ಚಿತ್ತು. ಮಾಲ್ಗುಡಿ ಡೇಸ್ ಮಾಡಿ ಹೆಸರು ಮಾಡಿದ. ಸ್ವರ್ಗಕ್ಕೆ ಕಿಚ್ಚಿಟ್ಟ ಹಾಗೆ ಎಂದಂತಾಯಿತು. ಭಗವಂತ ಅವನ ಕರೆದುಕೊಂಡು ಹೋದ. ಬಹಳ ಅನಪೇಕ್ಷಣೀಯ ಘಟನೆ’ ಎಂದು ಶಂಕರ್ ನಾಗ್ ನೆನಪಿಸಿಕೊಂಡಿದ್ದರು.
‘ದೇವರು ಆಯುಷ್ಯ ಕೊಟ್ಟಿದ್ದೇ ಅಷ್ಟೆ ಎನಿಸುತ್ತದೆ. ಜೀವನದಲ್ಲಿ ಎಲ್ಲವೂ ಪೂರ್ವ ನಿರ್ಧರಿತ. ನಾವು ನಿಮಿತ್ತ ಮಾತ್ರ. ಅವನಿಗೆ ಎರಡು ವರ್ಷ ಮೊದಲೇ ಚಡಪಡಿಕೆ ಇತ್ತು. ಸಾಕಷ್ಟು ವೇಗವಾಗಿ ಎಲ್ಲವನ್ನೂ ಮಾಡುತ್ತಿದ್ದ. ನನಗೆ ಸಾಕಷ್ಟು ಭಯ ಆಯಿತು. ನಾವಿಬ್ಬರೂ ಇದ್ದಾಗ ಎಲ್ಲರೂ ಸಾಲ ಕೊಡ್ತಾರೆ, ಒಬ್ಬ ಇಲ್ಲ ಎಂದಾಗ ಮತ್ತೊಬ್ಬನಿಗೆ ಸಮಸ್ಯೆ ಆಗುತ್ತದೆ ಎಂದಿದ್ದೆ. ಅದು ನಿಜವೇ ಆಗೋಯ್ತು’ ಎಂದಿದ್ದರು ಅನಂತ್ ನಾಗ್.
ಇದನ್ನೂ ಓದಿ: ಪದ್ಮಭೂಷಣ ಪ್ರಶಸ್ತಿ ಪಡೆದ ಹಿರಿಯ ನಟ ಅನಂತ್ ನಾಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸನ್ಮಾನ
ಶಂಕರ್ ನಾಗ್ ಅವರು ಕೇವಲ 35ನೇ ವಯಸ್ಸಿಗೆ ನಿಧನ ಹೊಂದಿದರು. ಶಂಕರ್ ನಾಗ್ ಇಲ್ಲ ಎಂಬ ಬೇಸರ ಈಗಲೂ ಅನೇಕರನ್ನು ಕಾಡುತ್ತದೆ. ರಸ್ತೆ ಅಪಘಾತದಲ್ಲಿ ಶಂಕರ್ ನಾಗ್ ಅವರು ಮೃತಪಟ್ಟರು. ಅನಂತ್ ನಾಗ್ ಅವರಿಗೆ ಈ ಬಾರಿ ಪದ್ಮ ಭೂಷಣ ಅವಾರ್ಡ್ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







