ಪ್ರತಿಷ್ಠೆಯ ಪ್ರತೀಕವಾಗಿದ್ದ ತಮ್ಮ ರೆಸ್ಟೋರೆಂಟ್ಗೆ ಬೀಗ ಹಾಕಿದ ಶಿಲ್ಪಾ ಶೆಟ್ಟಿ; ವಂಚನೆ ಕೇಸ್ ಕಾರಣ?
ಶಿಲ್ಪಾ ಶೆಟ್ಟಿ ಅವರ ಬಾಸ್ಟಿನ್ ಬಾಂದ್ರಾ ರೆಸ್ಟೋರೆಂಟ್ 9 ವರ್ಷಗಳ ನಂತರ ಮುಚ್ಚಲಾಗುತ್ತಿದೆ. 2016 ರಲ್ಲಿ ಆರಂಭವಾದ ಈ ಐಷಾರಾಮಿ ರೆಸ್ಟೋರೆಂಟ್, ಮುಂಬೈನಲ್ಲಿ ಜನಪ್ರಿಯವಾಗಿತ್ತು. ರೆಸ್ಟೋರೆಂಟ್ ಮುಚ್ಚಲು ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರ ಮೇಲಿರುವ ಹಣಕಾಸಿನ ಆರೋಪಗಳನ್ನು ಕಾರಣವೆಂದು ಅನೇಕರು ಅನುಮಾನಿಸುತ್ತಿದ್ದಾರೆ.

ಸೆಲೆಬ್ರಿಟಿಗಳಿಗೆ ತಮ್ಮದೇ ಆದ ರೆಸ್ಟೋರೆಂಟ್ ಹೊಂದಿರೋದು ಒಂದು ಪ್ರತಿಷ್ಠೆಯ ಪ್ರತೀಕವಾಗಿರುತ್ತದೆ. ಶಿಲ್ಪಾ ಶೆಟ್ಟಿ (Shilpa Shetty) ಕೂಡ ಮುಂಬೈನ ಐಷಾರಾಮಿ ಜಾಗ ಎನಿಸಿಕೊಂಡಿರೋ ಬಾಂದ್ರಾದಲ್ಲಿ ‘ಬಾಸ್ಟಿನ್ ಬಾಂದ್ರಾ’ ಹೆಸರಿನ ರೆಸ್ಟೋರೆಂಟ್ ಆರಂಭಿಸಿದ್ದರು. ಜನ ಸಾಮಾನ್ಯರಿಂದ ಹಿಡಿದು ಅನೇಕ ಸೆಲೆಬ್ರಿಟಿಗಳು ಇಲ್ಲಿಗೆ ಬರುತ್ತಿದ್ದರು. ಈಗ ಈ ರೆಸ್ಟೋರೆಂಟ್ ಆರಂಭ ಆಗಿ 9 ವರ್ಷಗಳ ಬಳಿಕ ಇದನ್ನು ಮುಚ್ಚಲಾಗುತ್ತಿದೆ.
‘ಬಾಸ್ಟಿನ್ ಬಾಂದ್ರಾ’ ಆರಂಭ ಆಗಿದ್ದು 2016ರಲ್ಲಿ. ಇದು ಆರಂಭದಲ್ಲಿ ಪಶ್ಚಿಮ ಬಾಂದ್ರಾದಲ್ಲಿ ಆರಂಭ ಆಯಿತು. ನಂತರ 2023ರಲ್ಲಿ ಇದನ್ನು ಬೇರೆಡೆ ಸ್ಥಳಾಂತರಿಸಲಾಯಿತು. ಈ ವೇಳೆ ದೊಡ್ಡ ಜಾಗದಲ್ಲಿ ಇದನ್ನು ಆರಂಭಿಸಲಾಯಿತು. ಇಲ್ಲಿ, ಸಮುದ್ರದ ಫುಡ್ಗಳು ಇಲ್ಲಿನ ಮೆನುವಿನ ಹೈಲೈಟ್. ಇದಲ್ಲದೆ, ಸಸ್ಯಾಹಾರಿ ಹಾಗೂ ವಿವಿಧ ಮಾಂಸಾಹಾರದ ಅಡುಗೆಗಳು ಇಲ್ಲಿ ಲಭ್ಯ ಇದ್ದವು. ಮುಂಬೈನ ದುಬಾರಿ ಹೋಟೆಲ್ ಎಂಬ ಖ್ಯಾತಿ ಇದಕ್ಕೆ ಇತ್ತು.
ಈಗ ಈ ರೆಸ್ಟೋರೆಂಟ್ ಕ್ಲೋಸ್ ಆಗುತ್ತಿದೆ. ಗುರುವಾರ (ಸೆಪ್ಟೆಂಬರ್ 4) ಇದರ ಕೊನೆಯ ದಿನ ಆಗಿರಲಿದೆ. ಈ ಬಗ್ಗೆ ಶಿಲ್ಪಾ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ರೆಸ್ಟೋರೆಂಟ್ ಕ್ಲೋಸ್ ಆಗಲು ಕಾರಣ ಏನು ಎಂಬುದನ್ನು ಇಲ್ಲಿ ವಿವರಿಸಿಲ್ಲ.
ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ 60 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸಿಲುಕಿದ್ದಾರೆ. ಉದ್ಯಮಿಯಿಂದ ಸಾಲ ಪಡೆದು ಅದನ್ನು ಹಿಂದಿರುಸಗಿಸಿಲ್ಲ ಎನ್ನಲಾಗಿದೆ. 2015ರ ನಂತರ ಶಿಲ್ಪಾ ಹಂತ ಹಂತವಾಗಿ ಸಾಲ ಪಡೆದಿದ್ದರು. ಈ ಕೇಸ್ನಲ್ಲಿ ಅವರು ತನಿಖೆ ಎದುರಿಸುತ್ತಿದ್ದಾರೆ. ಈ ಕೇಸ್ನ ಕಾರಣದಿಂದಲೇ ಅವರು ರೆಸ್ಟೋರೆಂಟ್ ಮುಚ್ಚುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ವಿರುದ್ಧ 60 ಕೋಟಿ ರೂಪಾಯಿ ವಂಚನೆ ಆರೋಪ
ಶಿಲ್ಪಾ ಶೆಟ್ಟಿ ಈಗ ಮೊದಲಿನಷ್ಟು ಸಿನಿಮಾಗಳನ್ನು ಮಾಡುತ್ತಿಲ್ಲ. ಅಲ್ಲೊಂದು, ಇಲ್ಲೊಂದು ಚಿತ್ರಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಅವರು ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಜೋಗಿ ಪ್ರೇಮ್ ನಿರ್ದೇನ ಚಿತ್ರಕ್ಕೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








