‘ಕರ್ಣ’ ಧಾರಾವಾಹಿಗೆ ಶಾಕ್ ಕೊಟ್ಟ ಟಿಆರ್ಪಿ ರೇಟಿಂಗ್; ಕುಸಿಯಿತು ಸ್ಥಾನ
ಕರ್ಣ ಧಾರಾವಾಹಿಯ ಟಿಆರ್ಪಿ ರೇಟಿಂಗ್‌ನಲ್ಲಿ ಗಮನಾರ್ಹ ಇಳಿಕೆಯಾಗಿದೆ. ಹೀಗಾಗಿ, ಧಾರಾವಾಹಿ ಮೊದಲ ಸ್ಥಾನ ಕಳೆದುಕೊಂಡಿದೆ. ಕಥೆ ಸಾಗುತ್ತಿರುವುದು ನಿಧಾನ ಆಗಿರುವುದೇ ಇದಕ್ಕೆ ಕಾರಣ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಲಕ್ಷ್ಮೀ ನಿವಾಸ, ಅಣ್ಣಯ್ಯ ಮತ್ತು ನಾ ನಿನ್ನ ಬಿಡಲಾರೆ ಧಾರಾವಾಹಿಗಳು ಟಿಆರ್ಪಿ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ.

‘ಕರ್ಣ’ ಧಾರಾವಾಹಿಯಲ್ಲಿ ಭವ್ಯಾ ಗೌಡ, ನಮ್ರತಾ ಗೌಡ ಹಾಗೂ ಕಿರಣ್ ರಾಜ್ ನಟಿಸುತ್ತಿದ್ದಾರೆ. ಈ ಧಾರಾವಾಹಿ ಪ್ರಸಾರ ಆರಂಭಿಸಿದ ದಿನದಿಂದಲೂ ಮೊದಲ ಸ್ಥಾನ ಕಾಪಾಡಿಕೊಳ್ಳುತ್ತಾ ಬಂದಿತ್ತು. ಆದರೆ, ಟಿಆರ್ಪಿಯಲ್ಲಿ ಗಣನೀಯ ಇಳಿಕೆ ಕಂಡಿದೆ. ಹೀಗಾಗಿ, ಮೊದಲ ಸ್ಥಾನ ಕೂಡ ಕುಸಿದು ಹೋಗಿದೆ. ಈ ಧಾರಾವಾಹಿ (Karna Serial) ಕಥೆ ಮುಂದಕ್ಕೆ ಸಾಗುತ್ತಿಲ್ಲ. ಹೀಗಾಗಿ, ಟಿಆರ್ಪಿ ಕುಸಿದಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ನಮ್ರತಾ ಗೌಡ, ಕಿರಣ್ ರಾಜ್ ಹಾಗೂ ಭವ್ಯಾ ಗೌಡ ಈ ಮೂವರಿಗೂ ದೊಡ್ಡ ಅಭಿಮಾನಿ ಬಳಗ ಇದೆ. ಈ ಮೂವರು ಧಾರಾವಾಹಿ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಈ ಕಾರಣದಿಂದಲೇ ‘ಕರ್ಣ’ ಧಾರಾವಾಹಿ ಆರಂಭದ ಕೆಲ ವಾರಗಳಲ್ಲಿ 10+ ಟಿವಿಆರ್ ಪಡೆದುಕೊಂಡಿತ್ತು. ವಾರಗಳು ಕಳೆದಂತೆ ಟಿಆರ್ಪಿಯಲ್ಲಿ ಕುಸಿತ ಕಾಣುತ್ತಿದೆ.
‘ಕರ್ಣ’ ಧಾರಾವಾಹಿ ಆರಂಭ ಆದಾಗಿನಿಂದ ಇಲ್ಲಿಯವರೆಗೂ ಕಥೆ ಒಂದೇ ರೀತಿಯಲ್ಲಿ ಸಾಗುತ್ತಿದೆ. ಕರ್ಣ ಹಾಗೂ ನಿಧಿ ಮಧ್ಯೆ ಪ್ರೀತಿ ಇದೆ. ಆದರೆ, ಒಬ್ಬರಿಗೊಬ್ಬರು ಅದನ್ನು ಸರಿಯಾಗಿ ಹೇಳಿಕೊಂಡಿಲ್ಲ. ಇನ್ನು, ಕರ್ಣನ ಮನೆಯವರ ಸ್ಥಿತಿಯಲ್ಲಿ ಕೊಂಚ ಬದಲಾವಣೆ ಆಗಿದೆ. ನಿತ್ಯಾ ನಿಶ್ಚಿತಾರ್ಥ ನೆರವೇರಿದೆ. ಧಾರಾವಾಹಿ ಆರಂಭ ಆದಾಗಿನಿಂದ ಇಲ್ಲಿಯವರೆಗೆ ಇವಿಷ್ಟೇ ಘಟನೆಗಳು ನಡೆದಿರೋದು.
ಈ ಎಲ್ಲಾ ಕಾರಣದಿಂದ ಧಾರಾವಾಹಿ ಟಿಆರ್ಪಿ ದಿನ ಕಳೆದಂತೆ ಕುಸಿತ ಕಾಣುತ್ತಿದೆ. ಮೊದಲ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಎರಡನೇ ಸ್ಥಾನದಲ್ಲಿ ‘ಅಣ್ಣಯ್ಯ’, ‘ನಾ ನಿನ್ನ ಬಿಡಲಾರೆ’ ಹಾಗೂ ‘ಕರ್ಣ’ ಧಾರಾವಾಹಿಗಳು ಸ್ಥಾನ ಪಡೆದಿವೆ. ಮೂರನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ.
ಇದನ್ನೂ ಓದಿ: ಕಿರಣ್ ರಾಜ್ ಸಿನಿಮಾ ಜೊತೆ ‘ಕರ್ಣ’ ಧಾರಾವಾಹಿ ಮಾಡ್ತಿರೋದೇಕೆ? ಆ ವಿಶೇಷ ವ್ಯಕ್ತಿಯೇ ಕಾರಣ
‘ಕರ್ಣ’ ಧಾರಾವಾಹಿಯ ಕಥೆಯಲ್ಲಿ ಪ್ರೇಕ್ಷಕರು ಪ್ರಗತಿಯನ್ನು ನಿರೀಕ್ಷಿಸುತ್ತಿದ್ದಾರೆ. ಅದು ಸಾಧ್ಯವಾಗದಲ್ಲಿ ಧಾರಾವಾಹಿ ಮತ್ತಷ್ಟು ಹಿಂದಕ್ಕೆ ಬೀಳುವ ಸಾಧ್ಯತೆ ಇದೆ. ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಸಾಕಷ್ಟು ತಿರುವುಗಳು ಎದುರಾಗಿವೆ. ಹೀಗಾಗಿ, ಈ ಧಾರಾವಾಹಿ ಮುಂದಿನ ವಾರ ಮೊದಲ ಸ್ಥಾನ ಪ್ರವೇಶಿಸುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








